'ಬೆವರು, ತ್ಯಾಗ, ಯಶಸ್ಸು'- ತೆಲುಗು ನಟಿ ಜೊತೆ ʼನಾಗಕನ್ನಿಕೆʼ ನಟ, ಬೆಳಗಾವಿ ಹುಡುಗ ಶಿವಕುಮಾರ್‌ ಮರಿಹಾಳ ವರ್ಕೌಟ್‌

Published : Feb 22, 2025, 10:19 AM ISTUpdated : Feb 22, 2025, 10:40 AM IST

ʼನಾಗಕನ್ನಿಕೆʼ, ʼಮಾನಸ ಸರೋವರʼ ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಶಿವಕುಮಾರ್‌ ಮರಿಹಾಳ ಅವರು ಸದ್ಯ ತೆಲುಗು ಕಿರುತೆರೆಯಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ ಜೈನ್‌ ಜೊತೆಗಿನ ಅವರ ರೊಮ್ಯಾಂಟಿಕ್‌ ಫೋಟೋಗಳು ಇಲ್ಲಿವೆ. 

PREV
15
'ಬೆವರು, ತ್ಯಾಗ, ಯಶಸ್ಸು'- ತೆಲುಗು ನಟಿ ಜೊತೆ ʼನಾಗಕನ್ನಿಕೆʼ ನಟ, ಬೆಳಗಾವಿ ಹುಡುಗ ಶಿವಕುಮಾರ್‌ ಮರಿಹಾಳ ವರ್ಕೌಟ್‌

ಇಂಜಿನಿಯರಿಂಗ್‌ ಕಲಿಯುತ್ತಿದ್ದಾಗಲೇ ಮಾಡೆಲ್‌ ಆಗಬೇಕೆಂಬ ಆಸೆಯನ್ನು ಅವರು ಅರ್ಧಕ್ಕೆ ಕೈಬಿಟ್ಟು ಬೆಂಗಳೂರಿಗೆ ಬಂದರು. ಇಲ್ಲಿಯೇ ಒಂದಷ್ಟು ಆಡಿಷನ್‌ಗಳನ್ನು ನೀಡಿ ʼನಾಗಕನ್ನಿಕೆʼ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಅಲ್ಲಿಂದಲೇ ಅವರ ಜರ್ನಿ ಶುರು ಆಯ್ತು. ಇದಾದ ನಂತರದಲ್ಲಿ ಅವರು ಉದಯ ಟಿವಿಯಲ್ಲಿ ಪ್ರಸಾರ ಆಗುವ ʼಮಾನಸ ಸರೋವರʼ ಧಾರಾವಾಹಿಯಲ್ಲಿ ನಟಿಸಿದರು. 
 

25

ಕೆಲ ವರ್ಷಗಳಿಂದ ‘ಮೌನ ರಾಗಂ’ ಧಾರಾವಾಹಿಯಲ್ಲಿ ನಟಿಸಿದ್ದ ಪ್ರಿಯಾಂಕಾ ಜೈನ್‌, ಶಿವಕುಮಾರ್‌ ಮರಿಹಾಳ್‌ ಅವರು ಪ್ರೀತಿಯಲ್ಲಿದ್ದಾರೆ. 2021ರಲ್ಲೇ ಈ ಜೋಡಿ ಪ್ರೀತಿಯಲ್ಲಿರುವ ಸಂದೇಹ ಬಂದಿತ್ತು. ಇವರಿಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಸ್ಟೋರಿಗಳನ್ನು ಪೋಸ್ಟ್‌ ಮಾಡುತ್ತ, ತಾವು ಸ್ನೇಹಕ್ಕಿಂತ ಒಂದು ಕೈ ಮೇಲಿದ್ದೇವೆ ಎಂಬ ಸುಳಿವು ನೀಡಿದ್ದರು. 

35

ಇವರಿಬ್ಬರು ಇನ್ನೂ ಮದುವೆಯಾಗಿಲ್ಲ. ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿರುವ ಈ ಜೋಡಿ ಈಗಾಗಲೇ ಅಧಿಕೃತವಾಗಿ ತಮ್ಮ ಪ್ರೀತಿಯನ್ನು ಹಂಚಿಕೊಂಡಿದೆ. ತೆಲುಗಿನ ಅನೇಕ ರಿಯಾಲಿಟಿ ಶೋಗಳಲ್ಲಿ ಇವರಿಬ್ಬರು ಜೋಡಿಯಾಗಿ ಭಾಗವಹಿಸುತ್ತಿರುತ್ತಾರೆ. ಅನೇಕರು ಇವರಿಬ್ಬರ ಕಾಲೆಳೆಯುತ್ತಿರುತ್ತಾರೆ. 
 

45

ಪ್ರಿಯಾಂಕಾ ಜೈನ್‌, ಶಿವಕುಮಾರ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದು, ಫೋಟೋಶೂಟ್‌, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕಾ ಜೈನ್‌, ಶಿವಕುಮಾರ್‌ ಅವರು ಯಾವಾಗ ಮದುವೆ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. 
 

55

ತಿಂಗಳುಗಳ ಹಿಂದೆ ತೆಲುಗು ಶೋವೊಂದರಲ್ಲಿ ಇವರಿಬ್ಬರು ಮೊಬೈಲ್‌ಗೆ ಒಂದೇ ಪಾಸ್‌ವರ್ಡ್‌ ಇಟ್ಟುಕೊಂಡಿರೋದು ಬಯಲಾಗಿತ್ತು. ಈ ವಿಷಯ ಅಂದೇ ಈ ಜೋಡಿಗೆ ಗೊತ್ತಾಗಿತ್ತು. 

click me!

Recommended Stories