ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಕಾಶದೀಪ (Akashadeepa) ಧಾರಾವಾಹಿಯಿಂದ ನಟಿ ಶೈನಿ ಪಿರೇರಾ ಹೊರ ಬಂದಿದ್ದಾರೆ.
ಮಂಜರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶೈನಿ (Shiny Pereria), ಧಾರಾವಾಹಿಗೆ ಭಾವುಕ ವಿದಾಯ ಹೇಳಿದ್ದಾರೆ. ಹಾಗೆ ಮಂಜರಿ ಪಾತ್ರಕ್ಕೆ ಯಾರು ಬರಲಿದ್ದಾರೆ ಎನ್ನುವ ಸಣ್ಣ ಸೂಚನೆ ಕೂಡ ಸಿಕ್ಕಿದೆ.
'ನಾನು ಕ್ಯಾರೆಕ್ಟರ್‌ಗೆ ಬೈ ಹೇಳುತ್ತಿರುವೆ. ನಾನು ತುಂಬಾನೇ ಎಂಜಾಯ್ ಮಾಡಿರುವ ಕ್ಯಾರೆಕ್ಟರ್ ಇದಾಗಲಿದೆ. ತುಂಬಾ ವಿಚಾರಗಳನ್ನು ಕಲಿತಿರುವೆ,' ಎಂದು ಶೈನಿ ಬರೆದುಕೊಂಡಿದ್ದಾರೆ.
'ಈ ಪಾತ್ರ ಮಾತ್ರವಲ್ಲ ಇಡೀ ಧಾರಾವಾಹಿ ತಂಡ ನನಗೆ ಮನೆಯ ವಾತಾವರಣ ನೀಡಿದೆ. ಇದನ್ನು ನಾನು ಮಿಸ್ ಮಾಡಿಕೊಳ್ಳುವೆ. ಯಾವುದೋ ಸಣ್ಣ ಜೋಕ್‌ಗೆ ನಾನು ತುಂಬಾನೇ ನಕ್ಕಿದ್ದೀವಿ'
'ನನ್ನ ಜರ್ನಿ ಅಂತ್ಯವಾಗುತ್ತಿದೆ ಎಂದು ಬೇಸರವಿಲ್ಲ. ಆದರೆ ಏನಾಗುತ್ತಿದೆ ಅದರ ಬಗ್ಗೆ ಸಂತೋಷವಿದೆ. ನಾನು ಹೊಸ adventuresಗೆ ಯಸ್ ಎಂದಿರುವೆ,' ಎಂದು ಬರೆದುಕೊಂಡಿದ್ದಾರೆ.
ಕಾದಂಬರಿ (Kadambari) ಧಾರಾವಾಹಿ ಖ್ಯಾತಿಯ ಅರ್ಪಿತಾ ಕುಲಾಲ್ (Aprita Kulal) ಇದೀಗ ಮಂಜರಿ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಶೈಲಿ ಮತ್ತೊಂದು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
'Sanjher Baati' ಎನ್ನುವ ಬೆಂಗಾಲಿ ಧಾರಾವಾಹಿಯ ರಿಮೇಕ್ ಆಕಾಶದೀಪ. ಸ್ವೀಟ್ ಅಂಗಡಿ ತೆರೆಯಬೇಕು ಎಂದು ಕನಸು ಕಟ್ಟಿರುವ ದೀಪಾಗೆ ವಿಲನ್ ಹೇಗೆಲ್ಲಾ ಕಾಟ ಕೊಡುತ್ತಾರೆ, ಮದುವೆ ಆದ್ಮೇಲೆ ಏನೆಲ್ಲಾ ಕಷ್ಟ ಎದುರಿಸುತ್ತಾಳೆ, ಎನ್ನುವುದು ಓನ್ ಲೈನ್ ಕಥೆ.