ಒಲವಿನ ನಿಲ್ದಾಣ: ವಿಕ್ರಾಂತ್ ರೋಣ ನಟಿ ನೀತಾ ಅಶೋಕ್

Published : Oct 18, 2023, 11:34 AM IST

ವಿಕ್ರಾಂತ್ ರೋಣ ಚಿತ್ರದಲ್ಲಿ ಮಿಂಚಿದ್ದ ನಟಿ ನೀತಾ ಅಶೋಕ್ ಇದೀಗ ಮದುವೆಯಾದ ಬಳಿಕ ಮತ್ತೆ ನಟನೆಯತ್ತ ಮರಳಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದು, ಸಿದ್ಧಾಂತ್-ತಾರಿಣಿ ಲೈಫಲ್ಲಿ ಎಂಟ್ರಿಯಾದ ಪ್ರಾಚಿಯನ್ನು ಅವೈಡ್ ಮಾಡಲು ಬಂದಂತೆ ಕಾಣಿಸುತ್ತಿದೆ.   

PREV
18
ಒಲವಿನ ನಿಲ್ದಾಣ: ವಿಕ್ರಾಂತ್ ರೋಣ ನಟಿ ನೀತಾ ಅಶೋಕ್

ವಿಕ್ರಾಂತ್ ರೋಣ ಸುಂದರಿ ನೀತಾ ಅಶೋಕ್ (Neetha Ashok), ಇದೀಗ ಮತ್ತೆ ನಟನೆಯತ್ತ ಮರಳಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನೀತಾ ನಟಿಸಿದ್ದಾರೆ. 

28

ನೀತಾ ಅಶೋಕ್ ಈ ವರ್ಷ ಜುಲೈ ತಿಂಗಳಲ್ಲಿ ತಮ್ಮ ಗೆಳೆಯ ಸತೀಶ್ ಮೆಸ್ತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು, ಇದೀಗ ಮತ್ತೆ ಕಿರುತೆರೆಯಲ್ಲಿ ನಟಿಸುವ ಮೂಲಕ ನಟನೆಯತ್ತ ಹೆಜ್ಜೆ ಇಟ್ಟಿದ್ದಾರೆ. 
 

38

ಕಿಚ್ಚ ಸುದೀಪ್ ಆಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾದಲ್ಲಿ ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. ಈ ಚಿತ್ರದ ಅಭಿನಯಕ್ಕಾಗಿ ಇವರಿಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ ಕೂಡ ಬಂದಿತ್ತು. 
 

48

ನೀತಾ ಈ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಯಶೋಧಾ ಧಾರವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದರು. ಇದೀಗ ಮತ್ತೆ ತಾರಿಣಿಯ ಗೆಳತಿಯಾಗಿ ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

58

ನವರಾತ್ರಿ ಹಬ್ಬಕ್ಕೆ ತಾರಿಣಿಯ ಮನೆಗೆ ಬರುವ ಗೆಳತಿ ಯಶೋಧ ಆಗಿ ನೀತಾ ಅಶೋಕ್ ನಟಿಸಿದ್ದಾರೆ. ಇವರು ತಾರಿಣಿ ಮತ್ತು ಸಿದ್ಧಾಂತ್ ನನ್ನು ಬೇರೆ ಮಾಡಲು ಕುತಂತ್ರ ಹೂಡಲು ಬಂದ ಪ್ರಾಚಿಗೆ ಪಾಠ ಕಲಿಸಲಿದ್ದಾರೆ. 

68

2014ರಲ್ಲಿ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಯಶೋದಾ' ಧಾರಾವಾಹಿಯ ಮೂಲಕ ಹೆಸರು ಮಾಡಿದ್ದ ನೀತಾ ಅಶೋಕ್ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.  ಅಲ್ಲದೇ ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 

78

ತುಳು ಚಲನಚಿತ್ರ ಜಬರ್ದಸ್ತ್ ಶಂಕರ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದ ಕುಂದಾಪುರದ ಹುಡುಗಿ ನೀತಾ, ಬಳಿಕ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

88

ನೀತಾ ಅವರು ಉಡುಪಿಯ ಕೋಟಾ ಮೂಲದವರಾಗಿದ್ದು, ಅವರ ಪತಿ ಸತೀಶ್​ ಮೇಸ್ತಾ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾಗಿದ್ದಾರೆ. ಉಡುಪಿಯಲ್ಲಿ ಸರಳವಾಗಿ ವಿವಾಹ ಮಾಡಿಕೊಂಡಿದ್ದ ಇವರು, ಇಲ್ಲಿವರೆಗೆ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories