ಹಿಂದಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸಾಗರದ ಹುಡುಗಿ ದಿಯಾ ಹೆಗ್ಡೆಯದ್ದೆ ಹವಾ

Published : May 05, 2024, 04:19 PM IST

ಕನ್ನಡದ ಸರಿಗಮಪದಲ್ಲಿ ಮಿಂಚಿದ ದಿಯಾ ಹೆಗ್ಡೆ ಬಗ್ಗೆ ಪ್ರತಿಯೊಬ್ಬ ಕನ್ನಡಿಗರಿಗೂ ಗೊತ್ತಿರುತ್ತೆ, ಈ ಪುಟಾಣಿ ಪೋರಿ ದಿಯಾ ಇದೀಗ ಹಿಂದಿ ಸಿಂಗಿಂಗ್ ರಿಯಾಲಿಟಿ ಶೋದಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. 

PREV
17
ಹಿಂದಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸಾಗರದ ಹುಡುಗಿ ದಿಯಾ ಹೆಗ್ಡೆಯದ್ದೆ ಹವಾ

ಕರ್ನಾಟಕದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸರಿಗಮಪ. ಈ ರಿಯಾಲಿಟಿ ಶೋ ಮೂಲಕ ಅದೆಷ್ಟೊ ಜನ ಜನಪ್ರಿಯತೆ ಪಡೆದಿದ್ದಾರೆ. ಹಿನ್ನೆಲೆ ಗಾಯಕರಾಗಿಯೂ ಫೇಮಸ್ ಆಗಿದ್ದಾರೆ. ಸರಿಗಮಪ ನೋಡಿದೋರಿಗೆ ದಿಯಾ ಹೆಗ್ಡೆ (Diya Hegde) ಪರಿಚಿತಳೇ ಅಲ್ವಾ? 
 

27

ಹರಳು ಹುರಿದಂತೆ ಪಟ ಪಟ ಮಾತನಾಡುವ, ಸ್ಪಷ್ಟವಾಗಿ ಕನ್ನಡ ಮಾತನಾಡುವ, ಯಾರ ಮೇಲಾದರೂ ಪದ ಕಟ್ಟಿ ಹಾಡು ಹಾಡುವ, ತಾನೇ ಪದ್ಯ ಸೃಷ್ಟಿಸಿ ಹಾಡುತ್ತಿದ್ದ ನಮ್ಮ ಸಾಗರದ ಹುಡುಗಿ ದಿಯಾ ಹೆಗ್ಡೆಯ ಟ್ಯಾಲೆಂಟ್ ಗೆ ಕರ್ನಾಟಕ ಜನ ಮನಸೋತಿದ್ದರು. 
 

37

ಕನ್ನಡದಲ್ಲಿ ಸ್ಪೆಷಲ್ ಎಂಟರ್ ಟೇನರ್ ಪ್ರಶಸ್ತಿ ಪಡೆದಿದ್ದ ದಿಯಾ ಹೆಗ್ಡೆ ಬಳಿಕ ಇತ್ತೀಚೆಗೆ ನಡೆದ ಸೋನಿಯ ಜನಪ್ರಿಯ ಶೋ ಇಂಡಿಯನ್ ಐಡಲ್ ಫಿನಾಲೆಯಲ್ಲಿ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಇವರ ಹಾಡು, ನಗುವಿಗೆ ಶ್ರೇಯಾ ಘೋಷಲ್ (Shreya Ghoshal) ಕೂಡ ಮನಸೋತಿದ್ದರು. 
 

47

ಇದೀಗ ದಿಯಾ ಹೆಗ್ಡೆ ಹಿಂದಿಯ ಸೋನಿ ಎಂಟರ್ ಟೇನ್ಮೆಂಟ್ ನಲ್ಲಿ ಪ್ರಸಾರವಾಗುತ್ತಿರುವ ಸಿಂಗಿಂಗ್ ರಿಯಾಲಿಟಿ ಶೋ ಸೂಪರ್ ಸ್ಟಾರ್ ಸಿಂಗರ್ ಸೀಸನ್ 3 (Superstar singer season 3) ನಲ್ಲಿ ಮಿಂಚುತ್ತಿದ್ದು, ಜಡ್ಜಸ್ ಗಳಿಂದ ಭೇಷ್ ಅನಿಸಿಕೊಂಡಿದ್ದಾರೆ. 
 

57

ಸದ್ಯ ನ್ಯಾಷನಲ್ ಲೆವೆಲ್ ನಲ್ಲೂ ಹವಾ ಸೃಷ್ಟಿಸಿರುವ ಚಿನಕುರುಳಿ ದಿಯಾ ಹೆಗ್ಡೆ ಹಾಡಿನ ಜೊತೆಗೆ ಸ್ಟೆಪ್ಸ್ ಹಾಕೋದಕ್ಕೂ ಫೇಮಸ್, ತಮ್ಮ ಸೋಶಿಯಲ್ ಮೀಡೀಯಾದಲ್ಲೂ ಇವರು ಡ್ಯಾನ್ಸ್ ಮಾಡಿರುವ ವಿಡಿಯೋ ರೀಲ್ಸ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

67

ಅಷ್ಟೇ ಅಲ್ಲ, ದಿಯಾ ಸ್ಮೈಲ್ ಗೂ ಕೂಡ ಫ್ಯಾನ್ಸ್ ಗಳಿದ್ದಾರೆ, ಇನ್ನು ದಿಯಾ ಮಿಮಿಕ್ ಮಾಡೊದ್ರಲ್ಲಿ ಕೂಡ ತುಂಬಾನೆ ಫೇಮಸ್, ಇವರು ಹಿಂದಿ ರಿಯಾಲಿಟಿ ಶೋದಲ್ಲಿ ಜಡ್ಜ್ ಗಳನ್ನು ಸಹ ಮಿಮಿಕ್ ಮಾಡುವ ಮೂಲಕ ಸಖತ್ ಮನೋರಂಜನೆ ಕೊಡುತ್ತಾರೆ. 
 

77

ಇನ್ನು ದಿಯಾ ಹೆಗಡೆ ಬಗ್ಗೆ ಹೇಳೋದಾದರೆ ಈಕೆ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ  ಬಂದಗದ್ದೆಯವರು. ವೆಂಕಟೇಶ್ ಹೆಗಡೆ-ಅಪರ್ಣಾ ಹೆಗಡೆ ಅವರ ಪುತ್ರಿ ಈಕೆ. ದಿಯಾಳಿಗೆ ದಿಶಾ ಹೆಗಡೆ ಎನ್ನುವ ಹಿರಿಯ ಸಹೋದರಿ ಕೂಡ ಇದ್ದಾರೆ. ಕನ್ನಡದ ಈ ಬೆಡಗಿ ಹಿಂದಿ ರಿಯಾಲಿಟಿ ಶೋದಲ್ಲಿ ಮಿಂಚಿ ವಿಜೇತಳಾಗಿ ಬರಲಿ ಎಂದು ಹಾರೈಸೋಣ. 
 

click me!

Recommended Stories