ಕ್ರಶ್ ಆದ ಹುಡುಗನ ಜೊತೆನೇ ಹಸೆಮಣೆ ಏರಲು ರೆಡಿಯಾದ ಸಹನಾ ಶೆಟ್ಟಿ

First Published | Apr 27, 2023, 5:22 PM IST

ನನ್ನರಸಿ ರಾಧೆ ಸೀರಿಯಲ್ ನೋಡಿದವರಿಗೆ ಸಹನಾ ಶೆಟ್ಟಿ ಖಂಡಿತಾ ನೆನಪಿರುತ್ತಾರೆ. ಈ ನಟಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆ ಗುಡ್ ನ್ಯೂಸ್ ನೀಡಿದ್ದು, ತಮ್ಮ ಸಂಗಾತಿ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ನನ್ನರಸಿ ರಾಧೆ ಸೀರಿಯಲ್ (Nannarasi Radhe) ಕೊನೆಗೊಂಡು ವರ್ಷಗಳೇ ಆಗುತ್ತಾ ಬಂದಿವೆ. ಆದರೆ ಅದರಲ್ಲಿ ನಟಿಸಿದ್ದ ಜನಮನದಲ್ಲಿ ಉಳಿದಿದೆ ಅಂದರೆ ತಪ್ಪಾಗಲಾರದು. ಈ ಸೀರಿಯಲ್ ನಲ್ಲಿ ನಾಯಕ ಅಗಸ್ತ್ಯನ ತಂಗಿಯಾಗಿ ನಟಿಸಿದ ನಟಿ ನೆನಪಿದ್ಯಾ? ಊರ್ವಿ ಪಾತ್ರಧಾರಿ ಸಹನಾ ಶೆಟ್ಟಿ. 

ಸಹನಾ ಶೆಟ್ಟಿ (Sahana Shetty), ಮೊದಲ ಸೀರಿಯಲ್ ನಲ್ಲೇ ಭರವಸೆ ಹುಟ್ಟಿಸಿದವರು. ಅಗಸ್ತ್ಯನ ಮುದ್ದಿನ ತಂಗಿ ಊರ್ವಿ ಪಾತ್ರ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಗಾಗಿಯೇ ಅವರಿಗೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಸಹೋದರಿ ಅವಾರ್ಡ್ ಕೂಡ ಬಂದಿತ್ತು. 

Tap to resize

ಮತ್ತೆ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳದ ಸಹನಾ, ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ತಾವು ಮದುವೆಯಾಗುತ್ತಿರುವ ಹುಡುಗನ ಜೊತೆಗೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ (pre wedding photoshoot) ಮಾಡಿಸಿಕೊಂಡಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

ಸಹನಾ ಶೆಟ್ಟಿಯವರ ಎಂಗೇಜ್ ಮೆಂಟ್ ಈ ವರ್ಷ ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ ದಿನವೇ ನಡೆದಿತ್ತು. ಆ ದಿನ ಅವರು ತಮ್ಮ ಎಂಗೇಜ್ ಮೆಂಟ್ ಸಂಭ್ರಮದ ವಿಡೀಯೋವನ್ನು ಸಹ ಹಂಚಿಕೊಂಡಿದ್ದರು. ಇದೀಗ ಮತ್ತೆ ಫೋಟೋಗಳನ್ನು ಹಂಚಿಕೊಂಡಿದ್ದು, ಸದ್ಯದಲ್ಲೇ ಓಲಗ ಊದಿಸಲಿದ್ದಾರೆ ಅನ್ನೋದು ತಿಳಿದು ಬಂದಿದೆ. 

ಎಂಗೇಜ್ ಮೆಂಟ್ ವಿಡೀಯೋ ಶೇರ್ ಮಾಡಿದಾಗ, ಸಣ್ಣ ಕ್ರಶ್‌ನಿಂದ ಆರಂಭವಾಗಿ, ಇದೀಗ ನನ್ನ ಬೆರಳಲ್ಲಿ ಅವನು ತೊಡಿಸಿದ ಉಂಗುರದವರೆಗೂ ಎಲ್ಲವೂ ಆಯಿತು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಹಾಗಾಗಿ ಇದನ್ನು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದೇ ಹೇಳಬಹುದು.

ಇನ್ನು ಸಹನಾ ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಸಹನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಪ್ರತಾಪ್ ಶೆಟ್ಟಿ (Pratap Shetty). ಅವರು ಎಲ್ಲಿಯವರು? ಏನ್ ಮಾಡ್ತಾ ಇದ್ದಾರೆ? ಮದುವೆ ಯಾವಾಗ? ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. 

ಸದ್ಯ ಸಹನಾ - ಪ್ರತಾಪ್ ಕಪ್ಪು ಬಣ್ಣದ ಧಿರಿಸಿನಲ್ಲಿ ಅದ್ಧೂರಿಯಾಗಿ ತೆಗೆಸಿಕೊಂಡಿರುವ ಫೋಟೋಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. 

Latest Videos

click me!