ಗಂಡನಿಗಾಗಿ ಮೂಗು ಚುಚ್ಚಿಸಿದ ನಟಿ, ಇದೀಗ ಪತಿ ಹೆಸರಿನ ಟ್ಯಾಟೂ ಹಾಕಿಸ್ಕೊಂಡ್ರು

First Published | Apr 26, 2023, 7:55 PM IST

ಕನ್ನಡ ಕಿರುತೆರೆ ಮತ್ತು ಚಲಚಿತ್ರಗಳಲ್ಲಿ ಮಿಂಚಿದ ಚೆಲುವೆ ರಶ್ಮಿ ಪ್ರಭಾಕರ್, ಕಳೆದ ಬಾರಿ ಗಂಡನಿಗಾಗಿ ಮೂಗು ಚುಚ್ಚಿಕೊಂಡಿದ್ರು, ಇದೀಗ ಗಂಡನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 

ಕನ್ನಡದ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ರಶ್ಮಿ ಪ್ರಭಾಕರ್ (Rashmi Prabhakar) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮೊದಲನೆಯ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ನಟಿ ಕಳೆದ ಬಾರಿ ಗಂಡನಿಗಾಗಿ ಮೂಗು ಚುಚ್ಚಿಕೊಂಡಿದ್ರು, ಇದೀಗ ಪತಿ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. 

ಜೈ ಆಂಜನೇಯ, ಜೇವನ ಚೈತ್ರ, ಶುಭವಿವಾಹ ಮತ್ತು ಅರುಂಧತಿ ಸೀರಿಯಲ್‌ಗಳಲ್ಲಿ ಮಿಂಚಿದ್ದ ರಶ್ಮಿ ಪ್ರಭಾಕರ್, ಹೆಚ್ಚು ಜನಪ್ರಿಯತೆ ಪಡೆದದ್ದು, ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಲಚ್ಚಿಯಾಗಿ. ಇದಾದ ನಂತರ ಸೂಪರ್ ಕ್ವೀನ್ (Super Queen) ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೂಪರ್ ಕ್ವೀನ್ ಪಟ್ಟವನ್ನು ಪಡೆದಿದ್ದರು. 

Tap to resize

ರಶ್ಮಿ ಪ್ರಭಾಕರ್ ಅವರು ಕಳೆದ ವರ್ಷ ತಮ್ಮ ಗೆಳೆಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ನಿಖಿಲ್ ಜೊತೆ ಅದ್ಧೂರಿ ಕಾರ್ಯಾಕ್ರಮದಲ್ಲಿ ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಇದೀಗ ಮದುವೆಯ ಮೊದಲನೇ ವರ್ಷದ ಸಂಭ್ರಮದಲ್ಲಿರುವ ರಶ್ಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. 
 

ವಿಡಿಯೋದಲ್ಲಿ ರಶ್ಮಿ ತಮ್ಮ ಎಂಗೇಜ್ ಮೆಂಟ್, ಮದ್ವೆಯ ಎಲ್ಲಾ ಕ್ಷಣಗಳ ತುಣುಕುಗಳನ್ನು ಶೇರ್ ಮಾಡಿದ್ದಾರೆ. ಯಾವ ರೀತಿ ಶಾಪಿಂಗ್ ಮಾಡಿದ್ರು, ಇನ್ವಿಟೇಶನ್ ಕೊಡೋದು, ಎಂಗೇಜ್ ಮೆಂಟ್ ಕ್ಷಣ, ಮದುವೆಯ ಎಲ್ಲಾ ಆಚರಣೆಗಳ ಸಂಭ್ರಮವನ್ನು ಮತ್ತೆ ನೆನಪಿಸಿದ್ದಾರೆ. 

ಅಲ್ಲದೇ ಇವರ ವಿಡಿಯೋದಲ್ಲಿ ಮದುವೆಯಾದ ಬಳಿಕ ಇಬ್ಬರು ಮೊದಲ ಬಾರಿ ದೇವಾಲಯಕ್ಕೆ ಹೋದದ್ದು, ಮೊದಲ ಆಟೋ ರೈಡ್, ಮೊದಲ ಟ್ರಾವೆಲ್, ಮೊದಲ ಡೇಟಿಂಗ್, ಜೊತೆಯಾಗಿ ಕಳೆದ ಮಧುರ ಕ್ಷಣಗಳು ಮೊದಲಾದ ಮುದ್ದು ಮುದ್ದಾದ ವಿಡಿಯೋ ತುಣುಕುಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ ಗೆಳೆಯನಾಗಿ ಪತಿ ನಿಖಿಲ್ ಯಾವೆಲ್ಲಾ ರೀತಿಯಲ್ಲಿ ಮದುವೆಯಾದ ಬಳಿಕವೂ ಬೆಂಬಲವಾಗಿ ನಿಂತಿದ್ದಾರೆ ಅನ್ನೊದನ್ನು ಸಹ ವಿಡಿಯೋದಲ್ಲಿ ರಶ್ಮಿ ತಿಳಿಸಿದ್ದು, ರಶ್ಮಿಗಾಗಿ ಅಡುಗೆ ಮಾಡಿದ್ದು, ಕೂದಲು ಬಾಚಿದ್ದು, ತಿನಿಸಿದ್ದು, ಇಬ್ಬರು ಒಬ್ಬರಿಗೊಬ್ಬರು ಕೊಟ್ಟಂತಹ ಮೊದಲ ಉಡುಗೊರೆ ಎಲ್ಲವನ್ನೂ ಹೇಳಿ ಕೊಂಡಿದ್ದಾರೆ.

ಈ ಮುದ್ದಾದ ವೀಡಿಯೋಗೆ ರಶ್ಮಿ ಆಗಾಲೆ ಒಂದು ವರ್ಷ ಆಯ್ತು. ಥ್ಯಾಂಕ್ಯೂ ನಿಕ್ಕಿ, ಮದುವೆ ಅನ್ನೋದು ತುಂಬಾನೆ ಚೆನ್ನಾಗಿರುತ್ತೆ ಎಂದು ನಂಬಿಕೆ ಕೊಟ್ಟಿದ್ದಕ್ಕೆ ಎಂದು caption ಬರೆದುಕೊಂಡಿದ್ದಾರೆ. ಜೊತೆಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಪತಿ ನಿಖಿಲ್ ಹೆಸರಿನ ಮೊದಲ ಅಕ್ಷರ N ಎಂಬ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. 

ಸೂಪರ್ ಕ್ವೀನ್ ವೇದಿಕೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಟ್ರಾನ್ಸ್ ಕ್ವೀನ್ ನೀತು ವನಜಾಕ್ಷಿ ಅವರು ರಶ್ಮಿ ಅವರಿಗೆ ಟ್ಯಾಟೂ ಹಾಕಿದ್ದಾರೆ. ನೀತು ಅವರು ಟ್ಯಾಟೂ ಆರ್ಟಿಸ್ಟ್ ಕೂಡ ಹೌದು. ಅಕ್ಷರದ ತುದಿಯಲ್ಲಿ ಕೆಂಪು ಬಣ್ಣದಲ್ಲಿ ಹಾರ್ಟ್ ಇರುವಂತಹ N ಟ್ಯಾಟೂ ಹಾಕಿಸಿಕೊಂಡಿದ್ದಾರೆ. ರಶ್ಮಿ ಹಾಗೂ ನಿಖಿಲ್ ಜೋಡಿಗೆ ಹ್ಯಾಪಿ ಆನಿವರ್ಸರಿ.

Latest Videos

click me!