ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ ಹೊಸ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಗೋಲ್ಡನ್ ಮತ್ತು ಕೆಂಪು ಬಣ್ಣದ ಲಂಗ ದಾವಣಿಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ನಟಿಯ ಮುದ್ದಾದ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ, ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿಯ ನಟನೆಗೆ ವೀಕ್ಷಕರು ಮನ ಸೋತಿದ್ದಾರೆ.
28
ಕರ್ಣ ಸೀರಿಯಲ್
ಕರ್ಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ನಿತ್ಯಾ ಒಂದು ಪ್ರೌಢ ಪಾತ್ರವಾಗಿದ್ದು, ತಂಗಿಯನ್ನು ಅಜ್ಜಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಿತ್ಯಾ, ಅವರಿಬ್ಬರನ್ನು ಸುರಕ್ಷಿತವಾಗಿಡಲು ಹಠವಾದಿಯಾಗುತ್ತಾಳೆ.
38
ಹೊಸ ಫೋಟೊ ಮೂಲಕ ಮಿಂಚಿಂಗ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಮ್ರತಾ ಗೌಡ, ಒಂದಲ್ಲ ಒಂದು ಫೋಟೊಗಳನ್ನು ಶೇರ್ ಮಾಡುತ್ತಲಿರುತ್ತಾರೆ. ಇದೀಗ ಲಂಗ ದಾವಣಿ ತೊಟ್ಟು ಮುದ್ದಾಗಿ ರೆಡಿಯಾಗಿರುವ ಫೋಟೊ ಶೇರ್ ಮಾಡಿದ್ದಾರೆ.
ನಮ್ರತಾ ಗೌಡರ ಈ ಲುಕ್ ನೋಡಿ ಮುದ್ದು ಗೊಂಬೆ, ದೇವತೆ, ಪದಗಳೇ ಸಾಲುತ್ತಿಲ್ಲ ಅಂದ ಹೊಗಳೋಕೆ,ಸುಂದರಿ, ಅಪ್ಸರೆ ಗಾರ್ಜಿಯಸ್ ಎಂದು ಕಾಮೆಂಟ್ ಮಾಡೀ ನಟಿಯನ್ನು ಹೊಗಳಿದ್ದಾರೆ.
58
ಹೀಗಿತ್ತು ಲುಕ್
ನಮೃತಾ ಗೌಡ ಲುಕ್ ಹೇಗಿದೆ ಅಂದ್ರೆ ಗೋಲ್ಡನ್ ಬಣ್ಣದ ಲಂಗ, ಪಿಂಕ್ ಬಣ್ಣದ ಬ್ಲೌಸ್ ಜೊತೆಗೆ ಪಿಂಕ್ ದಾವಣಿ ಧರಿಸಿ, ಅದರ ಜೊತೆಗೆ ಹೆವಿ ಜ್ಯುವೆಲ್ಲರಿ ಧರಿಸಿ, ಜಡೆ ಹೆಣೆದು ಕಟ್ಟಿ, ಕಮಲದ ಹೂವನ್ನು ಮುಡಿದಿದ್ದಾರೆ.
68
ಕರ್ಣ ಸೀರಿಯಲ್ ಬಿಡ್ತಿದ್ದಾರ?
ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ವೈರಲ್ ಆಗುತ್ತಿದ್ದು, ಜನಪ್ರಿಯ ಧಾರಾವಾಹಿಯೊಂದರಿಂದ ನಾಯಕಿ ಹೊರ ಬರಲಿದ್ದಾರೆ ಎನ್ನಲಾಗುತ್ತಿದೆ. ಜನರು ಕರ್ಣ ಸೀರಿಯಲ್ ನಿಂದ ನಮ್ರತಾ ಗೌಡ ಹೊರ ಬರುತ್ತಿದ್ದಾರೆ ಎನ್ನುತ್ತಿದ್ದಾರೆ.
78
ಸಿನಿಮಾದಲ್ಲಿ ನಾಯಕಿ
ಮಾಹಿತಿ ಪ್ರಕಾರ ನಮ್ರತಾ ಗೌಡ, ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ವಿಜಯ್ ರಾಘವೇಂದ್ರ ನಟನೆಯ ಸಿನಿಮಾದಲ್ಲಿ ನಮ್ರತಾ ನಾಯಕಿಯಾಗಿದ್ದು, ಹಾಗಾಗಿ ಕರ್ಣ ಸೀರಿಯಲ್ ನಿಂಡ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.
88
ಬಿಗ್ ಬಾಸ್ ಸುಂದರಿ
ಬಾಲ ನಟಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಮ್ರತಾ ಗೌಡ, ಬಳಿಕ ಪುಟ್ಟ ಗೌರಿಯ ಮದುವೆ, ನಾಗಿಣಿ 2 ಧಾರಾವಾಹಿಗಳಲ್ಲಿ ನಟಿಸಿದ್ದರು. ನಂತರ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದಿದ್ದರು.