ತೆಲುಗು ಬಿಗ್‌ಬಾಸ್‌ ಸೆಪ್ಟೆಂಬರ್‌ ನಲ್ಲಿ ಆರಂಭ, ಪ್ರೋಮೋ ರಿಲೀಸ್‌, ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

Published : Aug 13, 2024, 09:19 PM ISTUpdated : Aug 13, 2024, 09:20 PM IST

ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಬಿಗ್‌ಬಾಸ್‌ 11 ಪ್ರಸಾರವಾಗಲಿದ್ದು,  ಕ್ಷಣ ಗಣನೆ ಆರಂಭವಾಗಿದೆ.   ಇದೆಲ್ಲದ ನಡುವೆ ತೆಲುಗು ಬಿಗ್‌ಬಾಸ್ ನಿಂದ ಹೊಸ ಅಪ್ಡೇಟ್‌ ಬಂದಿದೆ.  ತೆಲುಗು ಬಿಗ್‌ಬಾಸ್ ಸೀಸನ್ 8ರ  ಪ್ರೋಮೋ ರಿಲೀಸ್‌ ಆಗಿದೆ. 

PREV
19
ತೆಲುಗು ಬಿಗ್‌ಬಾಸ್‌ ಸೆಪ್ಟೆಂಬರ್‌ ನಲ್ಲಿ ಆರಂಭ, ಪ್ರೋಮೋ ರಿಲೀಸ್‌, ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

ಈ ಬಾರಿ ಕೂಡ ತೆಲುಗಿನ ಫೇಮಸ್‌ ನಟ ನಾಗಾರ್ಜುನ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮೂರು ಪ್ರೋಮೋಗಳು ಬಿಡುಗಡೆಯಾಗಿದ್ದು, ಸೀಸನ್ 8ಕ್ಕೆ ಯಾರೆಲ್ಲ ಬರುತ್ತಾರೆ ಎಂಬ ಬಗ್ಗೆ ಕುತೂಹಲ ಕೂಡ ಹೆಚ್ಚಿದೆ.

 

29

ಕಳೆದ ಬಾರಿ ಬಿಗ್‌ಬಾಸ್ ತೆಲುಗು 7 ನೇ ಸೀಸನ್‌ ಸೂಪರ್ ಸಕ್ಸಸ್ ಆಗಿತ್ತು. ರೈತನ ಮಗನಾಗಿ ಬಂದಿದ್ದ ಪಲ್ಲವಿ ಪ್ರಶಾಂತ್ ನಿರೀಕ್ಷೆಗೂ ಮೀರಿ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡಿದ್ದರು. ಇದರ ಜೊತೆಗೆ ಕನ್ನಡ ನಟಿ ಶೋಭಾ ಶೆಟ್ಟಿ ಫಿನಾಲೆ ಹಂತದವರೆಗೆ ಬಂದು ಔಟ್ ಆಗಿದ್ದರು. ಆದರೆ ಆಕೆ ಬೋಲ್ಡ್ ಆಗಿ ಇದ್ದು, ತುಂಬಾ ಜನರ ಮನ ಗೆದ್ದಿದ್ದರು.

39

ಇದೀಗ ತೆಲುಗು ಬಿಗ್‌ಬಾಸ್‌ ನ ಮೂರು ಪ್ರೋಮೋಗಳು ಬಿಡುಗಡೆಯಾಗಿದ್ದು, ಹಲವು ಕುತೂಹಲಕ್ಕೆ ಕಾರಣವಾಗಿದೆ. ಮಾತ್ರವಲ್ಲ ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ. ಅದರಂತೆ ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಬರೆಲ್ಲಕ್ಕ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಯಶ್ಮಿ ಗೌಡ, ತೇಜಸ್ವಿನಿ ಗೌಡ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ಕಿರಾಕ್ ಆರ್‌ಪಿ, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಜನರ ಹೆಸರಿದೆ.

49

ಇದರ ಜೊತೆಗೆ ಸುದ್ದಿ ವಾಚಕಿ ಕಲ್ಯಾಣಿ, ನಟಿ ರೇಖಾ ಬೋಜ್, ಸಾವಯವ ಕೃಷಿ ತಜ್ಞ ನೇತ್ರಾ ರೆಡ್ಡಿ, ಧಾರಾವಾಹಿ ನಟ ಇಂದ್ರನೀಲ್ ಸೇನ್‌ಗುಪ್ತ, ನಟ ಅಬ್ಬಾಸ್, ನಟ ರೋಹಿತ್, ಗಾಯಕ ಸಾಕೇತ್ ಕೊಮಂದೂರಿ, ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2023 ರ ಊರ್ಮಿಳಾ ಚೌಹಾಣ್ ಅವರ ಹೆಸರು ಕೂಡ ಇದೆ.

59


ಇದರಲ್ಲಿ ಯಶ್ಮಿ ಗೌಡ ಕನ್ನಡದಾಕೆ, ಇದರ ಜೊತೆಗೆ ತೇಜಸ್ವಿನಿ ಗೌಡ ಕೂಡ ಕನ್ನಡದವರೇ ಆಗಿದ್ದಾರೆ. ಮೂಲತಃ ಕನ್ನಡದವರಾದ ಇವರು ತೆಲುಗಿನ ಧಾರವಾಹಿಗಳಲ್ಲಿ ಫೇಮಸ್ ಆಗಿದ್ದಾರೆ. ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ ಕೂಡ ಹೊಂದಿದ್ದಾರೆ. ತೆಲುಗು ಬಿಗ್‌ಬಾಸ್ ನಲ್ಲಿ ಸ್ಪರ್ಧಿಗಳಾದರೆ ಅದು ಹೆಮ್ಮೆಯ ಸಂಗತಿಯಾಗಿದೆ.

69

ಇನ್ನು ಯಾರೆಲ್ಲ ಈ ಶೋನಲ್ಲಿ ಕಾಣಿಸಿಕೊಳ್ಳಬಹುದು ಎಂಬುದು ಬಿಗ್‌ಬಾಸ್‌ ಶೋ ಆರಂಭವಾದ ಬಳಿಕವಷ್ಟೇ ಗೊತ್ತಾಗಲಿದೆ. ಬಿಗ್ ಬಾಸ್ ಸೀಸನ್ 8 ಸೆಪ್ಟೆಂಬರ್ 8 ರ ಭಾನುವಾರ ಸಂಜೆ 6 ರಿಂದ ಪ್ರಾರಂಭವಾಗಲಿದೆ.

79

ಇನ್ನೊಂದು ವಿಶೇಷವೆಂದರೆ ನಂದಮೂರಿ ಕುಟುಂಬದಿಂದ ತೆಲುಗು ಸಿನೆಮಾ ರಂಗಕ್ಕೆ ನಾಯಕನಾಗಿ ಕಾಲಿಟ್ಟಿರುವ ಚೈತನ್ಯ ಕೃಷ್ಣ ಅವರು ಬಿಗ್‌ಬಾಸ್‌ ಗೆ ಬರಲಿದ್ದಾರೆಂದು ಸುದ್ದಿ ಹಬ್ಬಿದೆ. 2003 ರಲ್ಲಿ, ಜಗಪತಿ ಬಾಬು ಅವರ 'ಧಮ್' ಚಿತ್ರದಲ್ಲಿ ಚೈತನ್ಯ ಒಂದು ಪಾತ್ರದಲ್ಲಿ ಕಾಣಿಸಿಕೊಂಡರು.
 

89

 ಇನ್ನೊಂದು ವಿಶೇಷವೆಂದರೆ ನಂದಮೂರಿ ಕುಟುಂಬದಿಂದ ತೆಲುಗು ಸಿನೆಮಾ ರಂಗಕ್ಕೆ ನಾಯಕನಾಗಿ ಕಾಲಿಟ್ಟಿರುವ ಚೈತನ್ಯ ಕೃಷ್ಣ ಅವರು ಬಿಗ್‌ಬಾಸ್‌ ಗೆ ಬರಲಿದ್ದಾರೆಂದು ಸುದ್ದಿ ಹಬ್ಬಿದೆ. 2003 ರಲ್ಲಿ, ಜಗಪತಿ ಬಾಬು ಅವರ 'ಧಮ್' ಚಿತ್ರದಲ್ಲಿ ಚೈತನ್ಯ ಒಂದು ಪಾತ್ರದಲ್ಲಿ ಕಾಣಿಸಿಕೊಂಡರು.

99

 ಆ ಬಳಿಕ ಸಿನಿಮಾದಿಂದ ದೂರ ಉಳಿದಿದ್ದರು. ರಾಜಕೀಯದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ತೆಲುಗಿನ ಜನತೆಗೆ ಹತ್ತಿರವಾಗುವ ನಿಟ್ಟಿನಲ್ಲಿ ನಂದಮೂರಿ ಕುಟುಂಬದ ಕುಡಿ ಬಿಗ್‌ಬಾಸ್‌ ಗೆ ಎಂಟ್ರಿ ಕೊಡುತ್ತಿದ್ದಾರೆನ್ನಲಾಗುತ್ತಿದೆ. 

Read more Photos on
click me!

Recommended Stories