ಕಿರುತೆರೆ ನಟಿ ಕಾವ್ಯಾ ಗೌಡ ಸೀಮಂತ ಸಂಭ್ರಮದಲ್ಲಿ ದರ್ಶನ್ ಪತ್ನಿ

Published : Jan 16, 2024, 12:39 PM IST

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ, ಗರ್ಭಿಣಿಯಾಗಿದ್ದು, ಸೀಮಂತ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು,  ಕಾರ್ಯಕ್ರಮದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಭಾಗಿಯಾಗಿದ್ದರು.   

PREV
17
ಕಿರುತೆರೆ ನಟಿ ಕಾವ್ಯಾ ಗೌಡ ಸೀಮಂತ ಸಂಭ್ರಮದಲ್ಲಿ ದರ್ಶನ್ ಪತ್ನಿ

ಕನ್ನಡ ಕಿರುತೆರೆಯಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ (Kavya Gowda), ಸದ್ಯ ನಟನೆಯಿಂದ ದೂರ ಇದ್ದರೂ ತಮ್ಮ ಸ್ಟೈಲ್ ಮತ್ತು ಸೋಶಿಯಲ್ ಮೀಡಿಯಾದಿಂದಾಗಿ ನಟಿ ಸದಾ ಸುದ್ದಿಯಲ್ಲಿರುತ್ತಾರೆ. 
 

27

ಎರಡು ವರ್ಷಗಳ ಹಿಂದೆ ಐದು ದಿನಗಳ ಅದ್ಧೂರಿ ಕಾರ್ಯಕ್ರಮದ ಮದುವೆ ಮೂಲಕ ತಾನು ಪ್ರೀತಿಸಿದ ಹುಡುಗ ಸೋಮಶೇಖರ್ (Somashekhar) ಕೈಹಿಡಿದಿದ್ದ ಕಾವ್ಯಾ ಗೌಡ ಎರಡನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. 
 

37

ಕಾವ್ಯಾ ಗೌಡ ತಮ್ಮ ಎರಡನೇ ವೆಡ್ಡಿಂಗ್ ಆನಿವರ್ಸರಿಯಂದು (wedding anniversary) ತಾವು ತಾಯಿಯಾಗುತ್ತಿರೋದಾಗಿ ತಿಳಿಸಿದ್ದರು. ಇದೀಗ ಸಂಭ್ರಮದ ಸೀಮಂತ ಕಾರ್ಯ ಕೂಡ ನಡೆದಿದ್ದು, ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. 

47

ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆದ ನಟಿ ಕಾವ್ಯಾ ಗೌಡ ಸೀಮಂತ (Baby Shower) ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಗೋಲ್ಡನ್ ಬಣ್ಣದ ಸೀರೆ, ಪರ್ಪಲ್ ಬಣ್ಣದ ಬ್ಲೌಸ್‌ನಲ್ಲಿ ಕಾವ್ಯಾ ಮಿಂಚಿದರೆ, ಸೋಮಶೇಖರ್ ಗೋಲ್ಡನ್ ಬಣ್ಣದ ಪಂಚೆ ಶೆರ್ವಾನಿಯಲ್ಲಿ ಮಿಂಚಿದರು.
 

57

ಸೀಮಂತ ಕಾರ್ಯಕ್ಕೆ ನಟ ದರ್ಶನ್ ತೂಗ್ ದೀಪ್ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಸಹ ಹಾಜರಾಗಿ, ಸಂಭ್ರಮಿಸಿದರು.  ವಿಜಯಲಕ್ಷ್ಮೀ ಮತ್ತು ಕಾವ್ಯಾ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದರು. 
 

67

ಈ ಹಿಂದೆಯೂ ವಿಜಯಲಕ್ಷ್ಮೀ ಮತ್ತು ಕಾವ್ಯಾ ಅವರು ಜೊತೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ವಿಜಯಲಕ್ಷ್ಮೀ ಹುಟ್ಟುಹಬ್ಬಕ್ಕೂ ಕಾವ್ಯಾ ಹಾಜರಾಗಿದ್ದರು. 
 

77

ಗಾಂಧಾರಿ, ಶುಭ ವಿವಾಹ ರಾಧಾ ರಮಣ ಸೀರಿಯಲ್‌ನಲ್ಲಿ ನಟಿಸಿ ಕಾವ್ಯ ಗೌಡ ಜನಮನ ಗೆದ್ದಿದ್ದರು.  ಇನ್ನು ಇವರು ಕಮಲ್ ಹಾಸನ್, ಮಮ್ಮೂಟಿ, ನಾಗಾರ್ಜುನ್ ಮೊದಲಾದ ಸ್ಟಾರ್ ನಟರ ಜೊತೆ ಜಾಹೀರಾತುಗಳಲ್ಲೂ ನಟಿಸಿದ್ದರು. ಇನ್ನು ಬಕಾಸುರ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ.

Read more Photos on
click me!

Recommended Stories