ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರತಿ ವಾರ ಉತ್ತಮ ಟಿ ಆರ್ ಪಿಯೊಂದಿಗೆ ಸಾಗುತ್ತಿರುವ ಹಾರರ್ ಕಥೆ ಹೊಂದಿರುವ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇನ್ನು ಮುಂದೆ ಕಥೆಯ ದಿಕ್ಕೆ ಬದಲಾಗಬಹುದು ಎನ್ನುವ ಸೂಚನೆ ಸಿಕ್ಕಿದೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರತಿ ವಾರ ಉತ್ತಮ ಟಿ ಆರ್ ಪಿಯೊಂದಿಗೆ ಸಾಗುತ್ತಿರುವ ಹಾರರ್ ಕಥೆ ಹೊಂದಿರುವ 'ನಾ ನಿನ್ನ ಬಿಡಲಾರೆ' (Naa Ninna Bidalaare) ಧಾರಾವಾಹಿಯಲ್ಲಿ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇನ್ನು ಮುಂದೆ ಕಥೆಯ ದಿಕ್ಕೆ ಬದಲಾಗಬಹುದು ಎನ್ನುವ ಸೂಚನೆ ಸಿಕ್ಕಿದೆ.
27
ಏನದು ಟ್ವಿಸ್ಟ್?
ಚಿಕ್ಕಪ್ಪ- ಚಿಕ್ಕಮ್ಮನ ಮಾತಿಗೆ ಬೆಲೆ ಕೊಟ್ಟು ಮದುವೆಯಾಗಲು ಒಪ್ಪಿಗೆ ಕೊಟ್ಟು ಆತ ಮೋಸಗಾರ ಅನ್ನೋದು ಗೊತ್ತಾಗಿಯೂ ಹಸೆಮಣೆ ಏರಿದ್ದಾಳೆ ದುರ್ಗಾ. ಇತ್ತ ದುರ್ಗಾಳನ್ನು ಮೋಸದ ಜಾಲದಿಂದ ಬಚಾವ್ ಮಾಡಲು ತಾನೇ ಹಸೆಮಣೆ ಏರಿದ್ದಾನೆ ಶರತ್.
37
ಏನಾಗ್ತಿದೆ ಕಥೆಯಲ್ಲಿ?
ಧಾರಾವಾಹಿಯ ಸದ್ಯದ ಕಥೆ ಏನಂದ್ರೆ, ದುರ್ಗಾಳಿಗೆ ಮದುವೆ ಮಾಡಿಸಲು, ಮಾಯಾ ಯಾರೋ ಒಬ್ಬ ಮೋಸಗಾರನನ್ನು , ದುರ್ಗಾ ಚಿಕ್ಕಪ್ಪ-ಚಿಕ್ಕಮ್ಮನ ಮುಂದೆ ನಿಲ್ಲಿಸಿದ್ದಾನೆ. ಅವನನ್ನೆ ಮದುವೆಯಾಗಬೇಕು ಎಂದು ಚಿಕ್ಕಮ್ಮ ಭಾಷೆ ಕೂಡ ತೆಗೆದುಕೊಂಡಿದ್ದಳು.
ಹುಡುಗ ಬಂದು ನೋಡಿದ ಎರಡೇ ದಿನದಲ್ಲಿ ಮದುವೆಗೆ ಸಕಲ ತಯಾರಿಯೂ ನಡೆಯುತ್ತಿದೆ. ಮದುವೆಯಾದ ಬಳಿಕ ದುರ್ಗಾ ದುಬೈಗೆ ಹೋಗೋದು ಗೊತ್ತಾಗಿ, ಆಕೆಯನ್ನು ಬಿಟ್ಟಿರಲಾರದೆ ಹಿತಾ ಏನೇನೊ ಪ್ಲ್ಯಾನ್ ಮಾಡಿ, ಮದುವೆ ನಿಲ್ಲಿಸೋದಕ್ಕೂ ಪ್ರಯತ್ನಿಸಿದಳು ಆದರೆ ಅದು ಸಾಧ್ಯ ಆಗಲಿಲ್ಲ.
57
ಇದೀಗ ಹಿತಾ ಮೊಬೈಲ್ ನಲ್ಲಿ ಮದುಮಗನ ಮೋಸ ಸೆರೆ ಸಿಕ್ಕಿದೆ, ಅದನ್ನು ಶರತ್ ಕೂಡ ನೋಡಿಯಾಗಿದೆ. ಹೇಗಾದ್ರು ಮಾಡಿ ಮದುವೆ ನಿಲ್ಲಿಸುವ ಪ್ಲ್ಯಾನ್ ಮಾಡ್ತಿದ್ದಾರೆ ಎಲ್ಲರೂ. ಆದರೆ ಚಿಕ್ಕಮ್ಮನಿಗೆ ಕೊಟ್ಟ ಮಾತಿನಂತೆ ತಾನು ಮದುವೆಯಿಂದ ಹಿಂದೆ ಸರಿಯೋದೆ ಇಲ್ಲ ಎನ್ನುತ್ತಾ ಹಸೆಮಣೆ ಏರುತ್ತಿದ್ದಾಳೆ ದುರ್ಗಾ.
67
ಇನ್ನೊಂದು ಕಡೆ ಮದುಮಗನನ್ನು ಶಾನ್ವಿ ಮತ್ತು ವರುಣ್ ಸೇರಿ ತೆಲೆಗೆ ಪೆಟ್ಟುಕೊಟ್ಟು, ಕಟ್ಟಿ ಹಾಕಿದ್ರೆ, ಮಾಸ್ಕ್ ಹಾಕಿಕೊಂಡು ಬಂದ ಶರತ್, ಹಸೆಮಣೆ ಮೇಲೆ ಕುಳಿತು, ತಾನೇ ಕೈಯಲ್ಲಿ ತಾಳಿ ಕಟ್ಟೋದಕ್ಕೆ ರೆಡಿಯಾಗಿದ್ದಾನೆ.
77
ಇದಿಷ್ಟು ಪ್ರೊಮೋದಲ್ಲಿ ತೋರಿಸಲಾಗಿದೆ. ಆ ಮೂಲಕ ಸೀರಿಯಲ್ ಗೆ ಒಂದು ರೋಚಕ ತಿರುವು ಸಿಕ್ಕಿದ್ದು, ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಶರತ್ ದುರ್ಗಾ ಕತ್ತಿಗೆ ತಾಳಿ ಕಟ್ಟುತ್ತಾನೋ? ಇಲ್ಲವೋ ಅನ್ನೋದನ್ನು ಕಾದು ನೋಡಬೇಕು.