Naa Ninna Bidalaare ಇದೇನಿದು ಟ್ವಿಸ್ಟ್​? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!

Published : Feb 21, 2026, 09:38 PM IST

'ನಾ ನಿನ್ನ ಬಿಡಲಾರೆ' ಧಾರಾವಾಹಿಯ ದುರ್ಗಾ ಪಾತ್ರಧಾರಿ ರಿಷಿಕಾ ಹಂಚಿಕೊಂಡ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ. ಇದರಲ್ಲಿ ದುರ್ಗಾ, ಶರತ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಬಿಳಿ ಹೊದಿಕೆ ಹೊದ್ದು ಮಲಗಿದ್ದು, ಎಲ್ಲರೂ ಸತ್ತು ಹೋಗುತ್ತಾರಾ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.  

PREV
16
ಎಲ್ಲರೂ ಒಂದು

ನಾ ನಿನ್ನ ಬಿಡಲಾರೆ (Naa Ninna Bidalaare Serial) ಸದ್ಯ ದೆವ್ವ ಅಂಬಿಕಾ ದಿಸೆಯಿಂದ ದುರ್ಗಾ ಮತ್ತು ಶರತ್​ ಒಂದಾಗುವ ಕಾಲ ಬಂದಿದೆ. ಇದಾಗಲೇ ಹಿತಾ ಅಪ್ಪನನ್ನು ಅಪ್ಪಾ ಎಂದು ಹೇಳಿ ಒಪ್ಪಿಕೊಂಡಿದ್ದಾಳೆ.

26
ನೀತಾ ಅಶೋಕ್​ ಅವಘಡ

ಇದರ ನಡುವೆಯೇ ಅಂಬಿಕಾ ಪಾತ್ರಧಾರಿಯಾಗಿರುವ ನೀತಾ ಅಶೋಕ್​ ಅವರು ಶೂಟಿಂಗ್​ ವೇಳೆ ಆಗಿರುವ ಅವಘಡದಿಂದ ಆಪರೇಷನ್​ಗೆ ಒಳಗಾಗಿದ್ದು, ಸದ್ಯ ಅವರು ಸೀರಿಯಲ್​ನಲ್ಲಿ ಪಾಲ್ಗೊಳ್ಳುತ್ತಿಲ್ಲ.

46
ಬಿಳಿ ಬೆಡ್​ಷೀಟ್​

ಅದೇನೆಂದರೆ, ಸೀರಿಯಲ್​ನಲ್ಲಿ ಎಲ್ಲರನ್ನೂ ಮಲಗಿಸಿ ಬಿಳಿ ಬೆಡ್​ಷೀಟ್​ ಹೊದೆಸಲಾಗಿದೆ. ಇರದಲ್ಲಿ ದುರ್ಗಾ, ಶರತ್​ ಸೇರಿದಂತೆ ಎಲ್ಲಾ ಪಾತ್ರಧಾರಿಗಳೂ ಇದ್ದಾರೆ.

56
ಎಲ್ಲರೂ ಸತ್ತು ಹೋಗ್ತಾರಾ?

ಇದನ್ನು ನೋಡಿದ್ರೆ ಸೀರಿಯಲ್​ನಲ್ಲಿ ಎಲ್ಲರೂ ಸತ್ತು ಹೋಗುವ ರೀತಿ ಕಾಣಿಸ್ತಿದೆ. ರಿಷಿಕಾ ಅವರು ಈ ವಿಡಿಯೋ ಯಾಕೆ ಶೇರ್​ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.

66
ಮಜಾ ಬರುತ್ತೆ

ಎಲ್ಲರೂ ಸತ್ತು ದೆವ್ವ ಆಗ್ತಾರೆ ಎಂದು ನೆಟ್ಟಿಗರು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ. ಎಲ್ಲರನ್ನೂ ಸಾಯಿಸಿದರೆ, ಒಂಥರಾ ಮಜಾ ಸ್ಟೋರಿ ಆಗುತ್ತೆ ಎನ್ನುವುದು ಅವರ ಅಭಿಮತ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories