ದೆವ್ವ ಆದ್ಮೇಲೆ ಊಟ-ತಿಂಡಿ ಇಲ್ಲದೇ ಸಣ್ಣ ಆದೆ: ನೀತಾ ಅಶೋಕ್

Published : Sep 10, 2025, 10:31 AM IST

ಜೀ ಕನ್ನಡದ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ದುರ್ಗಾ ಅಂಬಿಕಾಳ ಫೋಟೋ ನೋಡಿ ಬೆಚ್ಚಿ ಬೀಳುತ್ತಾಳೆ. ಶರತ್ ಮತ್ತು ದುರ್ಗಾ ತಮ್ಮ ಮದುವೆಯ ಗೊಂದಲದಲ್ಲಿ ಸಿಲುಕಿದ್ದಾರೆ, ಹಿತಾ ಮನೆಯಿಂದ ಹೊರಬಂದಿದ್ದಾಳೆ. ಶಂಭು ಮತ್ತು ಅಂಬಿಕಾ ಹೊಸ ಅಚ್ಚರಿಗೆ ಸಾಕ್ಷಿಯಾಗುತ್ತಿದ್ದಾರೆ.

PREV
15

ಜೀ ಕನ್ನಡ ವಾಹಿನಿಯ 'ನಾ ನಿನ್ನ ಬಿಡಲಾರೆ' ಸೀರಿಯಲ್ ರೋಚಕ ತಿರುವುಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿದೆ. ಇಷ್ಟುದಿನ ತನ್ನೊಂದಿಗೆ ಮಾತನಾಡುತ್ತಿದ್ದ ದೇವಿ ಅವರೇ ಅಂಬಿಕಾ ಅನ್ನೋ ಸತ್ಯ ಗೊತ್ತಾಗಿದೆ. ಶರತ್ ತಂದೆ ಜಗನ್ನಾಥ್, ಮನೆಯಲ್ಲಿ ಸೊಸೆ ಅಂಬಿಕಾ ಫೋಟೋ ತರಿಸಿಕೊಂಡಿದ್ದಾರೆ.

25

ಸೊಸೆ ಅಂದ್ರೆ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದು ಅಂಬಿಕಾ. ಹಾಗಾಗಿ ಅಂಬಿಕಾ ಆಶೀರ್ವಾದ ನಿನಗೆ ಸಿಗಬೇಕೆಂದು ದುರ್ಗಾಗೆ ಹೇಳುತ್ತಾರೆ. ಫೋಟೋಗೆ ಹಾಕಿದ್ದ ಕರ್ಟನ್ ತೆಗೆಯುತ್ತಿದ್ದಂತೆ ದುರ್ಗಾ ಆಶ್ವರ್ಯ ಮತ್ತು ಭಯದಿಂದ ಪ್ರಜ್ಞೆಯೇ ಕಳೆದುಕೊಳ್ಳುತ್ತಾಳೆ. ಮನೆಯಲ್ಲಿ ದೇವಿ ಯಾರ ಕಣ್ಣಿಗೂ ಕಾಣಿಸಿಲ್ಲ. ತನಗೆ ಮತ್ತು ತಂದೆ ಶಂಭಗೆ ಮಾತ್ರ ದೇವಿ ಅಲಿಯಾಸ್ ಅಂಬಿಕಾ ಕಾಣಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ದುರ್ಗಾ ಉತ್ತರ ಹುಡುಕುತ್ತಿದ್ದಾಳೆ.

35

ಅಂಬಿಕಾ ಫೋಟೋ ಅನಾವರಣ ದೃಶ್ಯದ ಚಿತ್ರೀಕರಣ ವೇಳೆ ನಟಿ ನೀತಾ ಅಶೋಕ್ ಪುಟ್ಟದಾದ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಅಂಬಿಕಾ ಆಗಿ ನೀತಾ ಅಶೋಕ್ ನಟಿಸುತ್ತಿದ್ದಾರೆ. ಅಂಬಿಕಾ ಪಾತ್ರದಮ ಫೋಟೋ ದೊಡ್ಡದಾಗಿದ್ದು, ಅದರಲ್ಲಿ ನಟಿ ನೀತಾ ಅಶೋಕ್‌ ಅವರನ್ನು ಸ್ವಲ್ಪ ಹೆಲ್ತಿಯಾಗಿ ತೋರಿಸಲಾಗಿದೆ.

ಇದನ್ನೂ ಓದಿ: Naa Ninna Bidalaare ದುರ್ಗಾಗೆ ಇದೇನಾಯ್ತು? ರಕ್ತಸಿಕ್ತ ನಟಿ ರಿಷಿಕಾ ನೋಡಿ ಫ್ಯಾನ್ಸ್​ ಶಾಕ್​

45

ರೀಲ್ಸ್‌ನಲ್ಲಿ ಏನಿದೆ?

ವ್ಯಕ್ತಿಯೊಬ್ಬರು ಅಂಬಿಕಾ ಫೋಟೋ ಕೆಳಗೆ ನಿಂತಿದ್ದ ನೀತಾ ಅಶೋಕ್ ಅವರನ್ನು ತೋರಿಸುತ್ತಾ, ಹಿಂಗಿದ್ದವರು ಊಟ-ತಿಂಡಿ ಇಲ್ಲದೇ ದೆವ್ವಾ ಆದ್ಮೇಲೆ ಹಿಂಗೆ ಸಣ್ಣ ಆಗಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸುವ ನೀತಾ ಅಶೋಕ್, ಹಾಕೋರಿಲ್ಲ, ಕೊಡೊರಿಲ್ಲ. ಶಂಭುಗಾದ್ರೆ ಮಗ ಗಣಪ ಊಟ ತಂದು ಕೊಡ್ತಾನೆ. ದೆವ್ವ ಆದ್ಮೇಲೆ ನನಗೊಂದು ಮನೆ ಅಥವಾ ಹುಣಸೆ ಮರ ಸಹ ನೀಡಿಲ್ಲ ಎಂದು ಹೇಳಿದ್ದಾರೆ.

ವೈರಲ್ ರೀಲ್ಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

55

ಸೀರಿಯಲ್‌ನಲ್ಲಿ ಏನಾಗ್ತಿದೆ?

ಶರತ್ ಮತ್ತು ದುರ್ಗಾ ತಮ್ಮ ಮದುವೆ ಹೇಗಾಯ್ತು ಅನ್ನೋ ಗೊಂದಲದಲ್ಲಿ ಸಿಲುಕಿದ್ದಾರೆ. ಇದೆಲ್ಲದರಿಂದ ಬೇಸತ್ತ ಹಿತಾ ಮನೆಯಿಂದ ಹೊರಗೆ ಬಂದಿದ್ದಾಳೆ. ಇದೀಗ ಹಿತಾ ಒಡಲಾಳದಲ್ಲಿರುವ ಶಕ್ತಿ ಬಹಿರಂಗವಾಗುತ್ತಿದೆ. ಮತ್ತೊಂದೆಡೆ ಶರತ್ ಮತ್ತು ದುರ್ಗಾ ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಂಭು ಮತ್ತು ಅಂಬಿಕಾ ಹೊಸ ಅಚ್ಚರಿಗೆ ಸಾಕ್ಷಿಯಾಗುತ್ತಿದ್ದಾರೆ.

ಇದನ್ನೂ ಓದಿ: 'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ ಬಾಲಕಿ- ಏನಿದು ಟ್ವಿಸ್ಟ್​?

Read more Photos on
click me!

Recommended Stories