ಅಂದು ಸುಧಾರಾಣಿ ಜೊತೆ ಬಾಲನಟನಾಗಿದ್ದವನೀಗ ಅಮೃತಧಾರೆ ವಿಲನ್!

First Published | Jun 13, 2024, 1:08 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಶಕುಂತಲಾ ಮಗ ಜೈದೇವ್ ಆಗಿ, ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ರಾಣವ್ ಗೌಡ ಕುರಿತು ಇಂಟ್ರೆಸ್ಟಿಂಗ್ ವಿಷ್ಯ ಇಲ್ಲಿ ಹೇಳ್ತೀವಿ ಕೇಳಿ. 
 

ಝೀ ಕನ್ನಡದಲ್ಲಿ (Zee Kannada)  ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮಲ ತಾಯಿ ಶಕುಂತಲಾ ಎಷ್ಟೊಂಡು ಕೆಟ್ಟವಳು ಅನ್ನೋದು ನಿಮಗೆ ಗೊತ್ತಿದೆ. ಆಕೆಯ ಮಗ ಜೈದೇವ್ ಕೂಡ ವಿಲನ್. ಈ ಜೈದೇವ್ ಪಾತ್ರಕ್ಕೆ ಜೀವ ತುಂಬಿರೋರು ರಾಣವ್ ಗೌಡ. 
 

ರಾಣವ್ ಗೌಡ (Raanav Gowda) ಅವರನ್ನು ಕಿರುತೆರೆಯ ಫೇವರಿಟ್ ವಿಲನ್. ಮಲ್ಲಿಯ ಗಂಡನಾಗಿ, ಒಂದು ಕಡೆ ಒಳ್ಳೆಯವನಂತೆ, ಮತ್ತೊಂದು ಕಡೆ ಕುತಂತ್ರದಿಂದ ಹೆಂಡತಿಯನ್ನು, ಅತ್ತಿಗೆ ಭೂಮಿಕಾಳನ್ನು ಸಾಯಿಸಲು ಹಾತೊರಿಯುವ ರೌಡಿಯಾಗಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಇವರ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 
 

Tap to resize

ಹಲವು ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ತುಳಸಿ ಧಾರಾವಾಹಿಯಲ್ಲಿ, ಸುಧಾರಾಣಿಯವರ (Sudharani) ಜೊತೆ ಬಾಲನಟನಾಗಿ ನಟಿಸುವ ಮೂಲಕ ರಾಣವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆವಾಗ ರಾಣವ್ ಆರನೇ ತರಗತಿಯಲ್ಲಿ ಓದುತ್ತಿದ್ದರು. 
 

ಬಾಲ್ಯದಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ರಾಣವ್ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿವಹಿಸಿದ್ದೇ ಹೆಚ್ಚು. ಅದೇ ಕಾರಣದಿಂದ ಇವರು ಇಂಜಿನಿಯರಿಂಗ್ ಅರ್ಧದಲ್ಲೇ ಬಿಟ್ಟು, ಮತ್ತೆ ನಟನೆಯತ್ತ ಮುಖ ಮಾಡಿದರು. ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. 
 

ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಣವ್ ಮತ್ತೆ ಹಿಂದಿರುಗಿ ನೋಡೇ ಇಲ್ಲ. ಒಂದಾದ ಮೇಲೆ ಒಂದರಂತೆ ಹಲವು ಧಾರಾವಾಹಿಗಳಲ್ಲಿ ಇವರು ನಟಿಸಿದರು. 
 

ನಂತರ ಬಿ.ಸುರೇಶ್ ಅವರ 'ಜೀವನದಿ’, ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಕುಮಾರಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ವರಲಕ್ಷ್ಮೀ ಸ್ಟೋರ್ಸ್ , ಮತ್ತೆ ವಸಂತ, ಝೀ ಕನ್ನಡದ ಕಮಲಿ ಧಾರಾವಾಹಿಯಲ್ಲೂ ನಟಿಸುವ ಮೂಲಕ ವೀಕ್ಷಕರ ಮನ ಗೆದ್ದಿದ್ದರು. 
 

ಸದ್ಯಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾದಾನ ಧಾರಾವಾಹಿಯಲ್ಲಿ ವಿಜಯ್ ಪಾತ್ರದಲ್ಲಿ ಹಾಗೂ ಝೀ ಕನ್ನಡಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ (Amruthadhare Serial) ನಲ್ಲಿ ಜೈ ದೇವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

ಕಿರುತೆರೆಯಲ್ಲಿ ಮಾತ್ರವಲ್ಲ ಇವರು ಹಿರಿತೆರೆಯಲ್ಲೂ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಮತ್ತೆ ಬಾ ಉಪೇಂದ್ರ, ಶೀಕಂಠ, ವಿರಾಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಲ್ಲಿ ನೆಗೆಟಿವ್ ಮತ್ತು ಪಾಸೀಟಿವ್ ಎರಡೂ ಪಾತ್ರಗಳಿಗೂ ರಾಣವ್ ಜೀವ ತುಂಬಿ ನಟಿಸುತ್ತಾರೆ ಅನ್ನೋದು ಸುಳ್ಳಲ್ಲ. 
 

Latest Videos

click me!