ಮಿಥುನ ರಾಶಿಯ ಸರಳ ಸುಂದರಿ ವೈಷ್ಣವಿ ಈವಾಗ ಸಖತ್ ಬೋಲ್ಡ್

Published : Jan 17, 2025, 10:10 PM ISTUpdated : Jan 18, 2025, 08:08 AM IST

ಮಿಥುನ ರಾಶಿ ಧಾರಾವಾಹಿಯಲ್ಲಿ ರಾಶಿಯಾಗಿ ಅಭಿನಯಿಸಿದ ನಟಿ ವೈಷ್ಣವಿ ಇದೀಗ ಸಖತ್ ಬೋಲ್ಡ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಫೋಟೊ ವೈರಲ್ ಆಗುತ್ತಿದೆ.   

PREV
15
ಮಿಥುನ ರಾಶಿಯ ಸರಳ ಸುಂದರಿ ವೈಷ್ಣವಿ ಈವಾಗ ಸಖತ್ ಬೋಲ್ಡ್

ಕಲರ್ಸ್ ಕನ್ನಡದಲ್ಲಿ  ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಸೀರಿಯಲ್ (Mithuna Rashi Serial) ನೆನಪಿದ್ಯಾ? ಶ್ರೀಮಂತ ಹಠಮಾರಿ ಬ್ಯುಸಿನೆಸ್’ಮ್ಯಾನ್ ಮತ್ತು ಪಾಪದ ಹುಡುಗಿ ರಿಕ್ಷಾ ಓಡಿಸುವ ರಾಶಿಯ ಕಥೆ ಇದಾಗಿದ್ದು, ಇವರಿಬ್ಬರ ಜಗಳ, ಪ್ರೀತಿಯ ಕಥೆ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಮಿಥುನ ರಾಶಿ ಬಳಿಕ ರಾಶಿ ಮತ್ತೆ ಕನ್ನಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 
 

25

ರಾಶಿ ಪಾತ್ರದಲ್ಲಿ ನಟಿಸಿದ್ದ ನಟಿ ವೈಷ್ಣವಿ, ಸದ್ಯ ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ವಿ ಕೌಂಡಿನ್ಯ (Vaishnavi V Koundinya) ಎನ್ನುವ ಹೆಸರು ಬರೆದುಕೊಂಡಿದ್ದಾರೆ. ಮಿಥುನ ರಾಶಿ ಬಳಿಕ ಒಂದಷ್ಟು ಕನ್ನಡ ಸೀರಿಯಲ್ ಗಳಲ್ಲಿ ಅತಿಥಿಯಾಗಿ ನಟಿಸಿದ್ದರು. ಆದರೆ ಯಾವುದೇ ಕನ್ನಡ ಸೀರಿಯಲ್ ನಲ್ಲಿ ಮತ್ತೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಲೇ ಇಲ್ಲ. ಇಂದಿಗೂ ಸಹ ಕನ್ನಡಿಗರು ಅವರನ್ನು ವೈಷ್ಣವಿ ಎನ್ನುವ ಹೆಸರಿನ ಬದಲಾಗಿ, ರಾಶಿ ಎಂದೇ ಗುರುತಿಸಿಕೊಂಡಿದ್ದಾರೆ. 
 

35

ವೈಷ್ಣವಿ ಸದ್ಯಕ್ಕಂತೂ ಪಕ್ಕದ ರಾಜ್ಯಗಳಲ್ಲೇ ಬ್ಯುಸಿಯಾಗಿದ್ದಾರೆ. ಅಂದ್ರೆ ಅವರು ತಮಿಳು, ತೆಲುಗು ಹಾಗೂ ಮಲಯಾಳಂ ಸೀರಿಯಲ್ ಗಳಲ್ಲೂ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಿಥುನರಾಶಿ, ಕಲರ್ಸ್ ತಮಿಳಿನಲ್ಲಿ ಉಳೈತಿಲ್ ಅಲ್ಲೈತ, ಸೂರ್ಯ ಟಿವಿಯಲ್ಲಿ ಕಣ್ಣಲ್ ಪೂವು, ಸದ್ಯ ಝೀ ತೆಲುಗಿನಲ್ಲಿ ಸೀತಾರಾಮುಡಿ ಕಾಂತಮ್ ಎನ್ನುವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ವೈಷ್ಣವಿ ನಟಿಸಿದ್ದಾರೆ ಎನ್ನಬಹುದು. 
 

45

ಇದೀಗ ವೈಷ್ಣವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ವೈಷ್ಣವಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿವರೆಗೆ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ವೈಷ್ಣವಿಯ ಈ ಲುಕ್ ನೋಡಿ ಜನ ಶಾಕ್ ಆಗಿದ್ದಾರೆ. ಸೀರೆಯುಟ್ಟರೂ ಸಹ ವೈಷ್ಣವಿ ತುಂಬಾನೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. 
 

55

ವೈಷ್ಣವಿ ಒಂದಷ್ಟು ಬ್ಲ್ಯಾಕ್ ಆಂಡ್ ವೈಟ್ ಫೋಟೊ, ಹಾಗೂ ಒಂದು ಕಲರ್ಸ್ ಫೋಟೊ ಅಪ್ ಲೋಡ್ ಮಾಡಿದ್ದಾರೆ. ಈ ಫೋಟೊದಲ್ಲಿ ವೈಷ್ಣವಿ ಬ್ಲೌಸ್ ಧರಿಸದೇ ಸೀರೆಯುಟ್ಟು, ಬರೀ ಸೀರೆಯಲ್ಲೇ ಮೈಮುಚ್ಚಿ ಪೋಸ್ ನೀಡಿದ್ದಾರೆ. ಜೊತೆಗೆ ತಮ್ಮ ಫೋಟೊ ಜೊತೆಗೆ Embracing the beauty of womanhood ಎಂದು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಬ್ಲ್ಯಾಕ್ ಆಂಡ್ ವೈಟ್ ಫೋಟೊಗಳಿಗೆ Vintage vibes ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಹಾಟ್, ಬ್ಯೂಟಿ, ಫೈರ್ ಎಂದು ಕಾಮೆಂಟ್ ಮಾಡಿದ್ದಾರೆ. 
 

click me!

Recommended Stories