ಮಜಾ ಟಾಕೀಸ್ ಮೂಲಕ ಸದಾ ನಗಿಸುತ್ತಿದ್ದ ರೆಮೋ ಸ್ಟ್ರಾಂಗ್ ಲೇಡಿ ಎನ್ನುವುದು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಅನಾವರಣಗೊಂಡಿತ್ತು. ಆಗ ರೆಮೋ ಬದುಕಿನ ಕಹಿ ಕ್ಷಣಗಳನ್ನು ಕೇಳಿದ ನೋಡಗರ ಕಣ್ಣಲ್ಲೂ ನೀರು ಬಂದಿದ್ದು ಸುಳ್ಳಲ್ಲ. ಇಷ್ಟೆಲ್ಲ ನೋವಿದ್ದರೂ, ಎಲ್ಲರನ್ನೂ ನಕ್ಕು ನಗಿಸುವುದು ಹೇಗೆ ಸಾಧ್ಯವೆಂದು ಮರಗಿದ್ದರು.
ರೆಮೋ ತೊಡುಗೆ, ಅವರ ಸ್ಟೈಲ್ ನೋಡಿದ್ರೆ ಸಖತ್ ಡ್ಯಾಶಿಂಗ್ ಲೇಡಿ ಅಂತ ಯಾರಾದ್ರೂ ಗೆಸ್ ಮಾಡುತ್ತಾರೆ. ಬಟ್ಟೆ, ಅಪಿಯರೆನ್ಸ್ ಮನುಷ್ಯನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತೆ ಅಂತಾರಲ್ವಾ, ಹಾಗೆ ರೆಮೊ ಅವರ ತೊಡುಗೆ, ಅವರ ಗೆಟಪ್ ಅವರ ವ್ಯಕ್ತಿತ್ವವನ್ನೂ ಅನಾವರಣಗೊಳಿಸುತ್ತೆ. ಬಹಳ ವರ್ಷಗಳಿಂದ ರೆಮೋ ಇರುವುದೇ ಹೀಗೆ. ಬಾಲ್ಯದಿಂದಲೂ ಇಂಥದ್ದೊಂದು ಲುಕ್ ಇರುವಂತೆ ನೋಡಿಕೊಂಡಿದ್ದರು ರೆಮೋ. ಸಣ್ಣ ಕುಟುಂಬದವರಾಗಿದ್ದ ರೋಮೋ ಲೈಫಲ್ಲಿ ಬದಲಾವಣೆ ತಂದಿದ್ದು ಪ್ರೀತಿ.