ಮಹಾಭಾರತದ ದ್ರೌಪದಿ ಖ್ಯಾತಿಯ ನಟಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ!

First Published Apr 22, 2020, 6:11 PM IST

ದೇಶಾದ್ಯಂತ ಲಾಕ್‌ಡೌನ್‌ ಕಾರಣದಿಂದ ಜನರನ್ನು ಮನೆಗಳಲ್ಲಿ ಬಂಧಿತರಾಗಿದ್ದಾರೆ. 80ರ ದಶಕದ ಟಿವಿ ಶೋಗಳು ಜನರ ಮನರಂಜನೆಗಾಗಿ ಈ ದಿನಗಳಲ್ಲಿ ಮತ್ತೆ ಪ್ರಸಾರವಾಗುತ್ತಿವೆ. ರಾಮಾಯಣ ಮತ್ತು ಮಹಾಭಾರತ ಆ ದಿನಗಳ ದೂರದರ್ಶನದ ಹಿಟ್‌ ಧಾರಾವಾಹಿಗಳು. ಈಗ ಮತ್ತೆ ಟೆಲಿಕಾಸ್ಟ್‌ ಆಗುತ್ತಿದ್ದು, ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಮಹಾಭಾರತದ ದ್ರೌಪದಿ ಪಾತ್ರದಲ್ಲಿ ನಟಿಸಿರುವ ರೂಪಾ ಗಂಗೂಲಿ ಜನರ ಮನಗೆದ್ದವರು. ಆದರೆ ಅವರ ಪರ್ಸನಲ್‌ ಲೈಫ್‌ ಖುಷಿಯಾಗಿರಲಿಲ್ಲ. ಅವರು ಜೀವನದಲ್ಲಿ 3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ! ಇವರ ಬಗ್ಗೆ ಒಂದಿಷ್ಟು..

ದ್ರೌಪದಿ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧಿಯಾದ ರೂಪಾ ಗಂಗೂಲಿಗೆ 53 ವರ್ಷ. ಅವರು ಹಿಂದಿ ಮತ್ತು ಬಂಗಾಳಿ ಚಲನಚಿತ್ರಗಳ ಜೊತೆಗೆ ದೂರದರ್ಶನದಲ್ಲೂ ಸಾಕಷ್ಟು ಕೆಲಸ ಮಾಡಿರುವ ರೂಪಾಳ ವೈಯಕ್ತಿಕ ಜೀವನ ಸಂತೋಷವಾಗಿರಲಿಲ್ಲ.
undefined
ಗಂಡನ ಚಿತ್ರಹಿಂಸೆಯಿಂದ ಬೇಸರಗೊಂಡ ರೂಪಾ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಅವರು 14 ವರ್ಷಗಳ ಕಾಲ ಗಂಡನೊಂದಿಗಿದ್ದು,ಡೈವೋರ್ಸ್‌ ಪಡೆದಿದ್ದಾರೆ. ಅಂದಹಾಗೆ, ರೂಪಾ ನಿಜ ಜೀವನದಲ್ಲಿ ತುಂಬಾ ಬೋಲ್ಡ್‌ ಹಾಗೂ ಅವರು ಸಿಗರೇಟು ಸೇದುವ ಚಟವೂ ಇದೆಯಂತೆ.
undefined
ರೂಪಾ 1992ರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಧ್ರುವ್ ಮುಖರ್ಜಿ ಅವರನ್ನು ವಿವಾಹವಾದರು. ಮದುವೆಯ ನಂತರ 14 ವರ್ಷಗಳ 2007ರಲ್ಲಿ ಬೇರೆಯಾಗಿ, ನಂತರ 2009ರಲ್ಲಿ ಅಧಿಕೃತವಾಗಿ ಡಿವೋರ್ಸ್‌ ಪಡೆದರು. ರೂಪ ಗಂಗೂಲಿಗೆ ಆಕಾಶ್ ಮುಖರ್ಜಿ ಎಂಬ ಒಬ್ಬ ಮಗನಿದ್ದಾನೆ .
undefined
ತನ್ನ ಪತಿಗಾಗಿ ಕೆರಿಯರ್‌ ಬಿಟ್ಟು ಕೊಲ್ಕತ್ತಾಗೆ ತೆರಳಿದ್ದರು. ಸಂಪೂರ್ಣವಾಗಿ ಗೃಹಿಣಿಯಾಗಿದ್ದರು. ಆದರೆ ಅವರ ಗಂಡ ದೈನಂದಿನ ಖರ್ಚಿಗೆ ಹಣ ನೀಡುತ್ತಿರದ ಕಾರಣದಿಂದ ನಿತ್ಯ ಜಗಳದಿಂದ ಬೇಸತ್ತು ರೂಪ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರಂತೆ
undefined
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿ ಪಾತ್ರ ಮಾಡಿ ಎಲ್ಲರ ಮನ ಗೆದ್ದ ಅದ್ಭುತ ನಟಿ ಇವರು.
undefined
ತನ್ನ ಗಂಡನಿಂದ ಬೇರ್ಪಟ್ಟ ನಂತರ, ಅವರು ಮುಂಬೈನ ಫ್ಲಾಟ್‌ನಲ್ಲಿ ಅವರಿಗಿಂತ 13 ವರ್ಷ ಚಿಕ್ಕವರಾದ ಗಾಯಕ ಡಿಬ್ಯೆಂಡು ಅವರೊಂದಿಗೆ ವಾಸಿಸುತ್ತಿದ್ದರು.ನಂತರ ರೂಪಾ ಡಿಬೈಂಡುವಿನಿಂದ ಕೂಡ ಬೇರ್ಪಟ್ಟರು. ಆದರೆ, ಡಿಬೈಂಡು ಜೊತೆ ವಾಸವಾಗಿದ್ದಾಗ ಇನ್ನೂ ಡಿವೊರ್ಸ್‌ ಪಡೆದಿರಲಿಲ್ಲವಂತೆ ಹೀಗೆ ರಿಯಾಲಿಟಿ ಶೋ ಸಚ್ ಕಾ ಸಾಮ್ನಾ (2009) ನಲ್ಲಿ, ಅವರು ತಮ್ಮ ಜೀವನದ ರಹಸ್ಯವನ್ನು ತೆರೆದಿಟ್ಟಿದ್ದರು.
undefined
ದ್ರೌಪದಿ ಪಾತ್ರದಲ್ಲಿ ಜನಪ್ರಿಯರಾದ ನಂತರ ಗೌತಮ್ ಘೋಷ್ ಅವರ ಪೊಡ್ಮಾ ನೋಡಿರ್ ಮಾಜಿ (1993), ಅಪರ್ಣಾ ಸೇನ್‌ರ ಯುಗಂಟ್ (1995) ಮತ್ತು ರಿತುಪರ್ಣೋ ಘೋಷ್ ಅವರ ಅಂತ್ರಮಹಲ್ (2006) ಚಿತ್ರಗಳಲ್ಲಿ ನಟಿಸಿದರು.
undefined
ದ್ರೌಪದಿಯಾಗಿ ರೂಪ ಗಂಗೂಲಿ.
undefined
ಟಿವಿ ಧಾರವಾಹಿ ಮಹಾಭಾರತದ ಒಂದು ದೃಶ್ಯ.
undefined
ಅವರು ಬಾಲಿವುಡ್ ಚಲನಚಿತ್ರಗಳಾದ 'ಸಾಹೇಬ್' (1985), 'ಏಕ್ ದಿನ್ ಆಧಾ' (1989), 'ಪ್ಯಾರ್ ಕೆ ದೇವತಾ' (1990), 'ಬಹಾರ್ ಆನೆ ತಕ್ ' (1990), 'ಸೌಗಂಧ್' (1991), 'ನಿಶ್ಚೆ' (1992) ಮತ್ತು 'ಬಾರ್ಫಿ' (2012) ಗಳಲ್ಲಿ ನಟಿಸಿದ್ದಾರೆ. ರಾಜಕಾರಣಿಯೂ ಹೌದು.
undefined
click me!