ರಾಮಾಯಣದಲ್ಲಿ ರಾವಣನಾಗಿ ಅಭನಯಿಸುವ ಮುಂಚೆ ಅನೇಕ ಗುಜರಾತಿ ಚಿತ್ರಗಳಲ್ಲಿ ನಟಿಸಿದ್ದರು ಅರವಿಂದ್ ತ್ರಿವೇದಿ. ಇವರ ಅಣ್ಣ ಉಪೇಂದ್ರ ತ್ರಿವೇದಿ ಗುಜರಾತ್ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು.ಬಿಜೆಪಿ ಟಿಕೆಟ್ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಿದ ಇವರಿಗೆ ಇದೀಗ 81 ವರ್ಷ.
ರಾವಣನಂಥ ದುಷ್ಟ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ ತ್ರಿವೇದಿ, ರಾಮ, ಲಕ್ಷ್ಮಣ ಹಾಗೂ ಸೀತಾ ಪಾತ್ರ ನಿರ್ವಹಿಸಿದ ಕಲಾವಿದರಷ್ಟೇ ಹೆಸರು ಮಾಡಿದವರು.
ರಾವಣನಂಥ ಪಾತ್ರ ಮಾಡಿದರೂ ಸಮಾಜದಲ್ಲಿ ಇವರ ನಟನೆಯ ಬಗ್ಗೆ ಸಿಕ್ಕಾಪಟ್ಟೆ ಗೌರವ ಸಿಕ್ಕಿದೆ ಎಂದು, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ನೈತಿಕತೆ ಹಾಗೂ ಆದರ್ಶ ಬದ್ಧನಾದ ರಾವಣನ ಬಗ್ಗೆಯೂ ಎಲ್ಲರೂ ಗೌರವ ಹೊಂದಿದ್ದರು ಎಂಬುವುದು ಇವರ ಅಭಿಪ್ರಾಯ.ಸಾಮಾನ್ಯವಾಗಿ ತಮ್ಮ ವೃತ್ತಿ ಜೀವನದಲ್ಲಿ ಸದಾ ಪಾಸಿಟಿವ್ ರೋಲ್ ಮಾಡಿದ ತ್ರಿವೇದಿ ಅವರು, ರಾವಣನದ್ದು ಮಾತ್ರ ನೆಗಟಿವ್ ರೋಲ್ ಮಾಡಿದ್ದಂತೆ.
ರಾವಣನ ಪಾತ್ರದ ನಂತರ ಇವರ ಊರಲ್ಲಿ ಎಲ್ಲರೂ ಇವರನ್ನು ಲಂಕೇಶ್ ಎಂದು ಗುರುತಿಸಲು ಆರಂಭಿಸಿದ್ದರಂತೆ. ಅಷ್ಟೇ ಅಲ್ಲ ಇವರ ಪತ್ನಿಯನ್ನೂ ಮಹಾರಾಣಿ ಮಂಡೋದರಿ ಎಂದೇ ಸಂಬೋಧಿಸಿದ್ದರಂತೆ.
ಅದಿರಲಿ, ರಾಯಾಯಣ ಧಾರಾವಾಹಿಯಲ್ಲಿ ರಾವಣನ ವದೆಯಾದಾಗ ಇವರ ಏರಿಯಾದಲ್ಲಿ ಎಲ್ಲರೂ ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದರಂತೆ.
ಸಿಬಿಎಫ್‌ಸಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ ಇವರು.
ಅಭಿನಯದಿಂದ ನಿವೃತ್ತರಾದ ಬಳಿಕ ಹಲವು ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ, ಸಾಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ಅತ್ಯಂತ ಮೃಧು ಹೃದಿಯ್ ಅರವಿಂದ್ ತ್ರಿವೇದಿ ಎಂದು ಒಮ್ಮೆ ರಾಮನ ಪಾತ್ರ ಮಾಡಿದ್ದ ಅರುಣ ಗೋವಿಲ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಮೊದಲಿಗೆ ಪ್ರಸಾರವಾದ 32 ವರ್ಷಗಳ ನಂತರ ರಾಮಾಯಣ ಇದೀಗ ಮತ್ತೆ ಪ್ರಸಾರವಾಗುತ್ತಿದ್ದು, ಜನರು ಮತ್ತೆ ದೂರದರ್ಶನದ ಮುಂದೆ ಆಸೀನರಾಗುತ್ತಿದ್ದಾರೆ. ರಾವಣನ ವಧೆಯಾಗಿದ್ದು, ಅವನನ್ನು ಇನ್ನು ಕಲಾಭಿಮಾನಿಗಳು ಮಿಸ್ ಮಾಡಿಕೊಳ್ಳುವುದು ಪಕ್ಕಾ.
ಲಕ್ಷ್ಮಣ ಪಾತ್ರ ಮಾಡಿದ ಸುನೀಲ್ ಲಹ್ರಿಯೊಂದಿಗೆ ಅರವಿಂದ್ ಇವತ್ತಿಗೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ.