ವಿದೇಶದಲ್ಲಿದ್ದರೂ ಕನ್ನಡತನ ಮೆರೆಯೋ ಸೀರಿಯಲ್ ನಟಿ ಅರ್ಚನಾ ಮಗು ನಾಮಕರಣ ಹೀಗಿತ್ತು!

Published : Apr 16, 2024, 04:24 PM IST

ಕಿರುತೆರೆಯಲ್ಲಿ ನಟಿ ಅರ್ಚನಾ ಲಕ್ಷ್ಮಿ ನರಸಿಂಹಸ್ವಾಮಿ ತಮ್ಮ ಮಗಳ ನಾಮಕರಣವನ್ನು ಅದ್ಧೂರಿಯಾಗಿ ನೆರವೇರಿಸಿದ್ದು, ನಾಮಕರಣದ  ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.   

PREV
17
ವಿದೇಶದಲ್ಲಿದ್ದರೂ ಕನ್ನಡತನ ಮೆರೆಯೋ ಸೀರಿಯಲ್ ನಟಿ ಅರ್ಚನಾ ಮಗು ನಾಮಕರಣ ಹೀಗಿತ್ತು!

ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ನಟಿಸಿದ್ದ ನಟಿ ಅರ್ಚನಾ ಲಕ್ಷ್ಮಿ ನರಸಿಂಹಸ್ವಾಮಿ  ಇದೀಗ ತಮ್ಮ ಮಗಳ ನಾಮಕರಣವನ್ನು ಅದ್ಧೂರಿಯಾಗಿ ನೆರವೇರಿಸಿದ್ದು, ನಾಮಕರಣದ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

27

ಕಳೆದ ವರ್ಷ ಸೆಪ್ಟೆಂಬರ್ 18ರಂದು ಅರ್ಚಾಗೆ ಹೆಣ್ಣು ಮಗು ಜನಿಸಿತ್ತು. ಮದುವೆಯಾದ ಬಳಿಕ ನಟಿ ಫ್ಲೋರಿಡಾದಲ್ಲಿ ನೆಲೆಸಿದ್ದು, ಅಲ್ಲಿಯೇ ಸೀಮಂತ ಕಾರ್ಯ, ಬಾಣಂತನ ಎಲ್ಲವೂ ನಡೆದಿತ್ತು. ಇದೀಗ ಮಗುವಿನ ನಾಮಕರಣ ಶಾಸ್ತ್ರವನ್ನು (naming ceremony) ಸಹ ಅದ್ಧೂರಿಯಾಗಿ ಮಾಡಿದ್ದಾರೆ. 
 

37

ಮೈಸೂರು ಮೂಲದ ಅರ್ಚನಾ ವಿದೇಶದಲ್ಲಿದ್ದರೂ ಸಹ ಸೀಮಂತವನ್ನು ಅಪ್ಪಟ ಕನ್ನಡ ಶೈಲಿಯಲ್ಲಿ ಸಂಪ್ರದಾಯಬದ್ಧವಾಗಿ ಹಸಿರು ಸೀರೆಯುಟ್ಟು, ಮಡಿಲು ತುಂಬಿ ಮಾಡಲಾಗಿತ್ತು, ವಿದೇಶದಲ್ಲಿ ನೆಲೆಸಿದ್ದರೂ ಕನ್ನಡತನವನ್ನು ಮರೆಯದಿರೋದಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿತ್ತು. 
 

47

ಫ್ಲೋರಿಡಾದಲ್ಲಿ ಎಚ್ ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಚನಾ ಗರ್ಭಿಣಿಯಾದ ಬಳಿಕ ಅಮ್ಮನನ್ನು ಫ್ಲೋರಿಡಾಕ್ಕೆ ಕರೆಸಿಕೊಂಡಿದ್ದರು, ಬಾಣಂತನ ಮುಗಿಸಿ ಅಮ್ಮ ವಾಪಾಸ್ ಊರಿಗೆ ಬಂದಿದ್ದರು. ಇದೀಗ ಮಗು ಹುಟ್ಟಿ 7 ತಿಂಗಳ ಬಳಿಕ ನಾಮಕರಣ ಶಾಸ್ತ್ರ ನಡೆದಿದೆ. 
 

57

ಫ್ಲೋರಿಡಾದಲ್ಲೇ ನಾಮಕರಣ ಶಾಸ್ತ್ರ ನಡೆದಂತೆ ಕಾಣುತ್ತಿದೆ. ಶಿವಲಿಂಗ ಇರುವ ಆದ್ಧೂರಿ ಸೆಟ್ ನ ಮೇಲೆ ಮಗಳ ಹೆಸರು ರಿವೀಲ್ ಮಾಡಿದ್ದಾರೆ. ನಟಿ ತನ್ನ ಮುದ್ದಾದ ಮಗಳಿಗೆ ವಿಯಾರಾ ಶರ್ಮ ಎಂದು ನಾಮಕರಣ ಮಾಡಿದ್ದಾರೆ. 
 

67

ಮಿಸ್ ಕರ್ನಾಟಕ 2013 (Ms Karnataka 2013)ಕಿರೀಟ ಧರಿಸಿದ್ದ ಅರ್ಚನಾಗೆ ಅಚಾನಕ್ ಆಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಧುಬಾಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಬಳಿಕ ಅವರು ಮನೆದೇವ್ರು ಧಾರಾವಾಹಿಯಲ್ಲಿ ನಟಿಸಿದ್ದು, ಇದು ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. 
 

77

ಕನ್ನಡ ಮಾತ್ರವಲ್ಲದೇ ತಮಿಳು ಕಿರುತೆರೆಯಲ್ಲೂ ಅರ್ಚನಾ ನಟಿಸಿದ್ದಾರೆ. ತಮಿಳಿನಲ್ಲಿ ಎರಡು ಸೀರಿಯಲ್ ಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲಿ ಚೇತನ್ ಜೊತೆಗೆ ನೂರೋಂದು ನೆನಪು ಸಿನಿಮಾದಲ್ಲೂ ಅರ್ಚನಾ ನಟಿಸಿದ್ದರು.

Read more Photos on
click me!

Recommended Stories