ವೆಬ್‌ ಸಿರೀಸ್‌ Ranking: ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌, ಓವರ್‌ಹೈಪ್‌ ಯಾವುದು ಅನ್ನೋದನ್ನ ನೋಡಿ!

First Published | Nov 30, 2024, 2:56 PM IST

ಥಿಯೇಟರ್‌ಗಳಲ್ಲಿ ಜನ ಕಡಿಮೆ ಆಗುತ್ತಿರುವ ನಡುವೆ ಭಾರತದ ಸಿನಿಮಾ ಅಭಿಮಾನಿಗಳು, ವೆಬ್‌ಸಿರೀಸ್‌ನತ್ತ ವಾಲಿದ್ದಾರೆ. ಹಾಗಿದ್ದರೆ, ಭಾರತದ ಈ ಪ್ರಸಿದ್ಧ 14 ವೆಬ್‌ ಸಿರೀಸ್‌ಗಳ ಪೈಕಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ ಯಾವ್ದು? ಓವರ್‌ಹೈಪ್‌ ಸಿರೀಸ್‌ ಯಾವುದು ಅನ್ನೋದನ್ನ ನೋಡೋಣ..

Apharan: Overhyped

ಎರಡು ಸಿರೀಸ್‌ಗಳಿರುವ ಈ ವೆಬ್‌ ಸಿರೀಸ್‌ ಓವರ್‌ಹೈಪ್‌. ಅಷ್ಟೇನೂ ಮಜಾ ಕೊಡೋದಿಲ್ಲ. ಜಿಯೋ, ಆಲ್ಟ್‌ ಬಾಲಾಜಿ ಒಟಿಟಿಯಲ್ಲಿ ನೋಡಬಹುದು

Mirzapur: Overhyped

ಮಿರ್ಜಾಪುರ್‌ ವೆಬ್‌ ಸಿರೀಸ್‌ ನಟರ ಕೆಲಸ ಅದ್ಭುತವಾಗಿದ್ದರೂ, ಅಷ್ಟೇನೂ ಉತ್ತಮವಾದ ಕಥೆಯಿಲ್ಲ. ಇದನ್ನು ಓವರ್‌ಹೈಪ್‌ ಆಗಿರೋ ವೆಬ್‌ ಸಿರೀಸ್‌ ಎಂದೆನ್ನಬಹುದು. ಪ್ರೈಮ್‌ನಲ್ಲಿ ವೀಕ್ಷಣೆ ಮಾಡಬಹುದು.

Tap to resize

Asur: One Time Watch

ಎರಡು ಸಿರೀಸ್‌ ಹೊಂದಿರುವ ಥ್ರಿಲ್ಲರ್‌ಅನ್ನು ಒನ್‌ ಟೈಮ್‌ ವಾಚ್‌ ಎಂದೆನ್ನಬಹುದು. ಮೊದಲ ಸೀಸನ್‌ ಅದ್ಭುತವಾಗಿದ್ದರೂ, 2ನೇ ಸೀಸನ್‌ ಅಷ್ಟೇನೂ ಮಜಾ ನೀಡೋದಿಲ್ಲ.

Chacha Vidhayak Hain Humare: Under Appreciated

ಅದ್ಭುತವಾದ ವೆಬ್‌ ಸಿರೀಸ್‌ ಆದರೂ ಹೆಚ್ಚಾಗಿ ಯಾರಿಗೂ ಗಮನಸೆಳೆಯಲಿಲ್ಲ. ಅಮೇಜಾನ್‌ ಪ್ರೈಮ್‌ನಲ್ಲಿದೆ.

Breathe: Into the Shadows: Under Appreciated

ಎರಡು ಸೀಸನ್‌ ಇರುವ ವೆಬ್‌ ಸಿರೀಸ್‌. ಆರ್‌.ಮಾಧವನ್‌ ಇರುವ ಮೊದಲ ಸೀಸನ್‌ ಅದ್ಭುತವಾಗಿದ್ದರೆ, ಅಭಿಷೇಕ್‌ ಬಚ್ಛನ್‌ ಅವರ 2ನೇ ಸೀಸನ್‌ ಅಷ್ಟಾಗಿ ಗಮನಸೆಳೆಯಲಿಲ್ಲ. ಆದರೆ, ಎರಡೂ ಅದ್ಭುತವಾಗಿದೆ. ಪ್ರೈಮ್‌ನಲ್ಲಿ ಇದನ್ನು ನೋಡಬಹುದು.

Yeh Meri Family: Under Appreciated

ಯೇ ಮೇರಿ ಫ್ಯಾಮಿಲಿ ಕಾಮಿಡಿ-ಡ್ರಾಮಾ ವೆಬ್‌ ಸಿರೀಸ್‌. ಹೆಚ್ಚಾಗಿ ಗಮನಸೆಳೆಯಲಿಲ್ಲ. ಅಮೇಜಾನ್‌ ಪ್ರೈಮ್‌ನಲ್ಲಿ ನೋಡಬಹುದು.
 

Family Man: Must Watch

ಮೂರನೇ ಸೀಸನ್‌ ಬರೋದು ಬಾಕಿ ಇದೆ. ಆದರೆ, ಎರಡೂ ಸಿರೀಸ್‌ಗಳು ಮಸ್ಟ್‌ ವಾಚ್‌. ಮಿಸ್‌ ಮಾಡದೇ ನೋಡುವಂಥ ವೆಬ್‌ ಸಿರೀಸ್. ಅಮೇಜಾನ್‌ ಪ್ರೈಮ್‌ನಲ್ಲಿದೆ.
 

Kota Factory: Must Watch

ಕೋಟಾ ಫ್ಯಾಕ್ಟರಿಯ ಮೊದಲ ಸೀಸನ್‌ ಮಸ್ಟ್‌ ವಾಚ್‌ ಎಂದೆನ್ನಬಹುದು. ಮಿಸ್ ಮಾಡಿಕೊಳ್ಳುವ ಹಾಗಿಲ್ಲ. ಮೊದಲ ಸೀಸನ್‌ ಯೂಟ್ಯೂಬ್‌ನಲ್ಲಿ ನೋಡಬಹುದು.
 

Delhi Crime: Must Watch

2 ಸೀಸನ್‌ ಇರುವ ಅದ್ಭುತ ವೆಬ್‌ ಸಿರೀಸ್‌ಅನ್ನು ಮಿಸ್ ಮಾಡದೇ ನೋಡಲೇಬೇಕು. ಅದರಲ್ಲೂ ಮೊದಲ ಸೀಸನ್‌ ನಿಮ್ಮನ್ನು ಕುತೂಹಲಕ್ಕಿಳಿಯುವಂತೆ ಮಾಡುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

Scam 1992: Must Watch

ಮಸ್ಟ್‌ ವಾಚ್‌ ಮಾಡಬೇಕಾಗಿರುವ ಹರ್ಷದ್‌ ಮೆಹ್ತಾ ಸ್ಟೋರಿ. ಅದ್ಭುತವಾಗಿ ನೋಡಿಸಿಕೊಂಡು ಹೋಗುತ್ತದೆ. ಸೋನಿ ಲಿವ್‌ನಲ್ಲಿ ನೋಡಬಹುದು.

Criminal Justice: Must Watch

ಕ್ರಿಮಿನಲ್‌ ಜಸ್ಟೀಸ್‌ನ ಮೊದಲ ಸೀಸನ್‌ ಮಸ್ಟ್‌ ವಾಚ್‌ ಎಂದೆನ್ನಬಹುದು. ಹಾಟ್‌ಸ್ಟಾರ್‌ನಲ್ಲಿದೆ.

Panchayat: Greatest Of All Time-GOAT

ನೀವೇನಾದ್ರೂ ಈ ವೆಬ್‌ ಸಿರೀಸ್‌ ನೋಡಿಲ್ಲವೆಂದರೆ, ನಿಮಗೆ ವೆಬ್‌ ಸಿರೀಸ್‌ ಬಗ್ಗೆ ಅಷ್ಟಾಗಿ ಗೊತ್ತಲ್ಲವೆಂದೇ ಅರ್ಥ. ಇಡೀ ಫ್ಯಾಮಿಲಿ ಕುಳೀತುಕೊಂಡು ಪುಟ್ಟ ಗ್ರಾಮದ ಸಹಜ ರಾಜಕೀವನ್ನು ಆನಂದಿಸಬಹುದು. ಇದು ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌.  ಪ್ರೈಮ್‌ನಲ್ಲಿ ನೋಡಬಹುದು.
 

Paatal Lok:  Greatest Of All Time-GOAT

ಒಂದೇ ಸೀಸನ್‌ ಬಂದಿದ್ದರೂ ಇದರಲ್ಲಿನ ಸಸ್ಪೆನ್ಸ್‌, ಥ್ರಿಲ್ಲಿಂಗ್‌ ಅಂಶ ಮತ್ಯಾವುದೇ ವೆಬ್‌ ಸಿರೀಸ್‌ನಲ್ಲಿ ಕಾಣೋಕೆ ಸಿಗದು. ಇದು ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌.  ಪ್ರೈಮ್‌ನಲ್ಲಿ ನೋಡಬಹುದು.

ಹಾರರ್‌, ಸಸ್ಪೆನ್ಸ್‌, ಥ್ರಿಲ್ಲರ್‌.. ಈ ವೆಬ್‌ ಸಿರೀಸ್‌ಗೆ ಫಿದಾ ಆಗೋದು ಗ್ಯಾರಂಟಿ
 

Sacred Games: Greatest Of All Time-GOAT

ಥ್ರಿಲ್ಲಿಂಗ್‌ ಅಂಶವಿರುವ ವೆಬ್‌ ಸಿರೀಸ್‌. ಭಾರತದಲ್ಲಿ ಹೆಚ್ಚಿನವರು ಈ ವೆಬ್‌ ಸಿರೀಸ್‌ ಮೂಲಕವೇ ವೆಬ್‌ ಸರಣಿಗಳನ್ನು ನೋಡೋಕೆ ಆರಂಭ ಮಾಡಿದ್ದರು.ಇದು ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌.  ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

'ಸಿದ್ದರಾಮಯ್ಯ ಕೊಟ್ಟಿರೋದು ಭಾಗ್ಯ ಅಲ್ಲ ಕಣಯ್ಯ, ನಿಂದು ನಿಜವಾದ ಭಾಗ್ಯ..' ಕಿಶನ್‌ ಅದೃಷ್ಟಕ್ಕೆ ಬೆರಗಾದ ನೆಟ್ಟಿಗರು!

Latest Videos

click me!