ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡ ಸಿದ್ದೇ ಗೌಡ್ರು… ಫಿದಾ ಆಗ್ಬಿಟ್ರು ಹುಡುಗೀರು

ಲಕ್ಷ್ಮೀ ನಿವಾಸದ ಸಿದ್ದೇಗೌಡ ಖ್ಯಾತಿಯ ಧನಂಜಯ್ ಕೈಯಲ್ಲಿ ಸಿಗಾರ್ ಹಿಡಿದು, ವಿಲನ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದು, ನಟನ ಡಿಫರೆಂಟ್ ಲುಕ್ ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ. 
 

Lakshmi Nivasa actor Dhananjay Mass Look pav

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ  (Lakshmi Nivasa serial) ಜನರು ಸಿಕ್ಕಾಪಟ್ಟೆ ಇಷ್ಟ ಪಟ್ಟ ಪಾತ್ರ ಅಂದ್ರೆ ಅದು ಸಿದ್ದೇ ಗೌಡರ ಪಾತ್ರ. ನಟಿಸಿದ ಮೊದಲ ಸೀರಿಯಲ್ ಮೂಲಕವೇ ಗಮನ ಸೆಳೆದ ನಟ ಧನಂಜಯ್. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಸೆಳೆದ ನಟ ಡಿಜೆ ಆಲಿಯಾಸ್ ಧನಂಜಯ್. 
 

Lakshmi Nivasa actor Dhananjay Mass Look pav

ತನಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿರುವ ಭಾವನಾರನ್ನು  ಮೊದಲ ನೋಟದಲ್ಲೇ ಪ್ರೀತಿಸಿ, ಆಕೆಗೆ ಗೊತ್ತಿಲ್ಲದಂತೆ ತಾಳಿಕಟ್ಟಿ, ಸದ್ಯ ಹಲವು ದಿನಗಳ ಕೋಪ ಅಂತರದ ನಂತರ ಇದೀಗ ಭಾವನಾ ಮತ್ತು ಸಿದ್ಧು ಹತ್ತಿರವಾಗಿದ್ದಾರೆ. ಸದ್ಯದಲ್ಲೇ ಅದರಲ್ಲೂ ಟ್ವಿಸ್ಟ್ ಬರಲಿದೆ. 
 


ಹೆಚ್ಚಾಗಿ ಬಿಳಿ ಪ್ಯಾಂಟ್, ಶರ್ಟ್, ಹಣೆ ಮೇಲೆ ತಿಲಕ ಹಚ್ಚಿ, ತಮ್ಮ ಕೂದಲನ್ನು ಸ್ಟೈಲಿಶ್ ಆಗಿ ಹಾರಿಸುತ್ತಾ, ಭಾವನಾ ಮುಂದೆ ಪೆದ್ದು ಪೆದ್ದಾಗಿ ವರ್ತಿಸುವ  ಸಿದ್ದೇ ಗೌಡರಿಗೆ ಸದ್ಯ ಸಿಕ್ಕಾಪಟ್ಟೆ ಅಭಿಮಾನಿ ಬಳಗ ಇದೆ. ಅದರಲ್ಲೂ ಇವರನ್ನ ಇಷ್ಟಪಡುವವರಲ್ಲಿ ಹೆಂಗಳೆಯರ ಲಿಸ್ಟ್ ದೊಡ್ಡದೇ ಇದೆ. 
 

ಇದೀಗ ಧನಂಜಯ್ (Dhananjay) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ಡಿಜೆಯ ಹೊಸ ಫೋಟೊ ನೋಡಿ, ಹೊಸ ಮಾಸ್ ಲುಕ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹುಲಿ ಸಾಹೇಜ್, ದಾವುದ್ ಭಾಯ್, ಬಾಂಬ್, ಬೆಂಕಿ, ಮಾಸ್, ಎಂದು ಕಾಮೆಂಟ್ ಕೂಡ ಹಾಕಿದ್ದಾರೆ. 
 

ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಧನಂಜಯ್, ಅದರ ಮೇಲೆ ಕಪ್ಪು ಶರ್ಟ್ ಹಾಗೂ ಕಪ್ಪು ಜಾಕೆಟ್ ಧರಿಸಿ, ಕಪ್ಪು ಗಾಗಲ್ಸ್ ಕೂಡ ಧರಿಸಿ, ಬಾಯಲ್ಲಿ ಸಿಗಾರ್ ಕಚ್ಚಿ ಹಿಡಿದು, ವಿಲನ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದಾರೆ. ಡಿಜೆ ಖಡಕ್ ಲುಕ್ ನೋಡಿ ಅಭಿಮಾನಿಗಳು ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. 
 

ನಾನು ಸರಿಯಾದ ಕೆಲಸ ಮಾಡಿದ್ದೇನೆ ಎಂಬುದಕ್ಕೆ ನನ್ನನ್ನು ದ್ವೇಷಿಸುವವರೇ ಸಾಕ್ಷಿ..!! ನಾನು ಯೋಧ, ಬೇಜಾರ್ ಮಾಡ್ಕೊಂಡು ಕುತ್ಕೋಳೋನು ಅಲ್ಲ( Haters are proof that I’m doing something right..!!” I’m a warrior not a worrier) ಎಂದು ಸಾಲುಗಳನ್ನು ಕೂಡ ಹಾಗಿದ್ದು, ಇದು ಡಿಜೆ ಕುರಿತು ಹಿಂದೆಯಿಂದ ಮಾತನಾಡುವವರಿಗೆ ನೇರವಾಗಿ ಟಾಂಗ್ ಕೊಟ್ಟಂತಿದೆ. 
 

ಧನಂಜಯ್ ಅವರು ತಮ್ಮ ಮೂಲ ಹೆಸರಿಗಿಂತ ಸಿದ್ದೇ ಗೌಡ್ರು ಎನ್ನುವ ಹೆಸರಿನಿಂದಲೇ ಸಿಕ್ಕಾಪಟ್ಟೆ ಫೇಮಸ್. ಇವರು ನಟ, ಡ್ಯಾನ್ಸರ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್ (dubbing artist) ಕೂಡ ಹೌದು. ಒಂದೆರಡು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಧನಂಜಯ್ ಉತ್ತಮ ನಟನಾಗಿದ್ದು, ಮುಂದೊಂದು ದಿನ ಸಿನಿಮಾ ರಂಗದಲ್ಲಿ ಮಿಂಚೋದು ಕೂಡ ಖಚಿತಾ. 
 

Latest Videos

vuukle one pixel image
click me!