ಹುಟ್ಟು ಹಬ್ಬದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಶಮಂತ್ ಗೌಡ!

Published : Dec 25, 2023, 03:08 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ವೈಷ್ಣವ್ ಆಲಿಯಾಸ್ ಶಮಂತ್ ಗೌಡ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಶುಭ ಕೋರುತ್ತಾ ಅವರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳೋಣ. 

PREV
17
ಹುಟ್ಟು ಹಬ್ಬದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಶಮಂತ್ ಗೌಡ!

ಬಿಗ್ ಬಾಸ್ ಸೀಸನ್ 8 (Bigg Boss Season 8) ರ ಮೂಲಕ ಖ್ಯಾತಿ ಪಡೆದು, ಸದ್ಯ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಫೇವರಿಟ್ ನಟನಾಗಿ ಮಿಂಚುತ್ತಿರುವ ವೈಷ್ಣವ್ ಆಲಿಯಾಸ್ ಶಮಂತ್ ಗೌಡ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

27

ಬಿಗ್ ಬಾಸ್ ಸೀಸನ್ 8 ರಲ್ಲಿ ಶಮಂತ್ ಗೌಡ (Shamanth Gowda) ಸ್ಪರ್ಧಿಸಿದ್ದರು. ಅಲ್ಲಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು ಅಲ್ಲಿ ತಮ್ಮ ಹಾಡುಗಳ ಮೂಲಕವೂ ಶಮಂತ್ ಫೇಮಸ್ ಆಗಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಎರಡು ಹಿಟ್ ಮ್ಯೂಸಿಕ್ ಆಲ್ಬಂ ಹಾಡುಗಳನ್ನು ಸಹ ನೀಡಿದ್ದರು.

37

ಇದಾದ ನಂತರ ಅವರು ನೇರವಾಗಿ ನಟನಾ ಜಗತ್ತಿಗೆ ಕಾಲಿಟ್ಟಿದ್ದರು. ಮೊದಲ ಸೀರಿಯಲ್ ಲಕ್ಷ್ಮೀ ಬಾರಮ್ಮ (Lakshmi Baramma)  ಮೂಲಕವೇ ಸದ್ಯ ಜನರ ಮನಸನ್ನು ಗೆದ್ದಿದ್ದಾರೆ ಶಮಂತ್ ಆಕಾ ಬ್ರೋ ಗೌಡ. ಜನ ಸಿಕ್ಕಿದ್ರೆ ವೈಷ್ಣವ್ ಅಂತ ಗಂಡ ಸಿಗಬೇಕು ಎಂದು ಹೇಳುವಷ್ಟು ಫೇವರಿಟ್ ಕ್ಯಾರೆಕ್ಟರ್ ಇವರದು. 

47

ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲೂ ಸಹ ಇವರು ಹಾಡುಗಾರನಾಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ಹುಡುಗಿಯನ್ನು ಮನಸಾರೆ ಪ್ರೀತಿಸಿ, ಅಮ್ಮನ ಕುತಂತ್ರದಿಂದ ಇನ್ನೊಬ್ಬಳ ಕುತ್ತಿಗೆಗೆ ತಾಳಿ ಕಟ್ಟಿದರೂ ಸಹ ವೈಷ್ಣವ್, ತನ್ನಿಂದಾಗಿ ತನ್ನನ್ನು ನಂಬಿಕೊಂಡು ಬಂದವಳಿಗೆ ತೊಂದರೆಯಾಗಬಾರದೆಂದು ಅವಳನ್ನು ಕಾಪಾಡುವ, ಗೌರವಿಸುವ ರೀತಿ ಎಲ್ಲರಿಗೂ ಇಷ್ಟವಾಗಿದೆ. 
 

57

ಶಮಂತ್ ಗೌಡ ನಿರ್ಮಿಸಿದ ಎಕ್ಸ್ ಗರ್ಲ್ (Ex Girlfriend) ಫ್ರೆಂಡ್ ಆಲ್ಬಂ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬ್ರೇಕ್ ಅಪ್ ಆದ ಹುಡುಗರ ಆಂಥಮ್ ಸಾಂಗ್ ಇದಾಗಿತ್ತು. ಇದಲ್ಲದೇ ಕಳೆದ ವರ್ಷ ಇವರು ಮಾಡಿದಂತಹ ಬಾ ಗುರು ಹಾಡು ಸಹ ಜನಪ್ರಿಯತೆ ಪಡೆದಿತ್ತು. 
 

67

ಸೋಶಿಯಲ್ ಮೀಡಿಯಾದಲ್ಲಿ (social medial)  ಆಗೋಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಶಮಂತ್, ಹೆಚ್ಚಾಗಿ ತಮ್ಮ ಕೆಲಸಗಳ ಪ್ರೊಮೋಶನ್ ಗಳನ್ನು ಮಾತ್ರ ಪೋಸ್ಟ್ ಮಾಡುತ್ತಿರುತ್ತಾರೆ. ತಮ್ಮ ಇನ್ಸ್ಟ್ರಾಗ್ರಾಂ ನಲ್ಲಿ 500ಕೆ ಫಾಲೋವರ್ಸ್ ಗಳನ್ನು ಸಹ ಬ್ರೋ ಗೌಡ ಹೊಂದಿದ್ದಾರೆ. 
 

77

ಶಮಂತ್ ಹುಟ್ಟು ಹಬ್ಬಕ್ಕೆ (birthday) ಕಲರ್ಸ್ ಕನ್ನಡ ವಾಹಿನಿ ಶುಭಕೋರಿದ್ದು, ಜೊತೆಗೆ ಸಾಕಷ್ಟು ಅಭಿಮಾನಿಗಳು ಸಹ ಶುಭ ಕೋರಿದ್ದಾರೆ. ಅಷ್ಟೆ ಅಲ್ಲ ಹಲವು ಅಭಿಮಾನಿಗಳು ಮಧ್ಯರಾತ್ರಿ ಶಮಂತ್ ಮನೆಗೆ ತೆರಳಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 

Read more Photos on
click me!

Recommended Stories