ನಕ್ಷತ್ರ ಫೇಮ್ ನಟಿ ವಿಜಯಲಕ್ಷ್ಮಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟ ಲಕ್ಷಣ ಸೀರಿಯಲ್ ಗ್ಯಾಂಗ್!

Published : Jun 06, 2024, 06:26 PM IST

ಲಕ್ಷಣ ಸೀರಿಯಲ್ ನಟಿ ವಿಜಯಲಕ್ಷ್ಮೀ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸ್ನೇಹಿತರಾದ ಸುಕೃತಾ, ಶ್ರುತಿ, ಪ್ರಿಯಾ ಸರ್ಪ್ರೈಸ್ ಬರ್ತ್ ಡೇ ಸೆಲೆಬ್ರೇಶನ್ ಮಾಡಿ, ಸಂಭ್ರಮಿಸಿದ್ದಾರೆ.   

PREV
17
ನಕ್ಷತ್ರ ಫೇಮ್ ನಟಿ ವಿಜಯಲಕ್ಷ್ಮಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟ ಲಕ್ಷಣ ಸೀರಿಯಲ್ ಗ್ಯಾಂಗ್!

ಲಕ್ಷಣ (Lakshana) ಸೀರಿಯಲ್ ಮುಗಿದು ಅದೆಷ್ಟೊ ಸಮಯ ಆಗಿದೆ. ಆದ್ರೂ ಸೀರಿಯಲ್‌ನ ಪ್ರತಿ ಪಾತ್ರಗಳು ಇಂದಿಗೂ ಫೇಮಸ್, ನಕ್ಷತ್ರಾ ಆಗಿರಬಹುದು, ಶ್ವೇತಾ ಆಗಿರಬಹುದು, ಭಾರ್ಗವಿ ಅಥವಾ ಡೆವಿಲ್ ಆಗಿರಬಹುದು, ಎಲ್ಲವೂ ಇವತ್ತಿಗೂ ಮನೆ ಮಾತಾಗಿರುವ ಹೆಸರುಗಳು. 
 

27

ಇನ್ನೂ ಈಗಾಗಲೇ ಮುಗಿದು ಎಲ್ಲಾ ನಟ ನಟಿಯರೂ ಬೇರೆ ಬೇರೆ ಸೀರಿಯಲ್‌ಗಳಲ್ಲಿ ಬಿಸಿಯಾಗಿದ್ದಾರೆ. ಆದರೆ ಈ ಸೀರಿಯಲ್ ನಟಿಯರ ನಂಟು ಮಾತ್ರ ಇನ್ನೂ ಭಿಗಿಯಾಗಿಯೇ ಇದೆ. ಹೌದು. ಧಾರಾವಾಹಿಯ ನಟರಾದ ವಿಜಯಲಕ್ಷ್ಮೀ, ಸುಕೃತಾ ನಾಗ್ (Sukrutha Nag), ಪ್ರಿಯಾ ಶಟಮರ್ಶನ್, ಶ್ರುತಿ ರಮೇಶ್ ಇಂದಿಗೂ ಉತ್ತಮ ಬಾಂಧವ್ಯವನ್ನು ಮುಂದುವರೆಸುಕೊಂಡು ಬಂದಿದ್ದಾರೆ. 
 

37

ಲಕ್ಷಣ ಸೀರಿಯಲ್‌ನ ನಕ್ಷತ್ರಾ ಎಂದೇ ಫೇಮಸ್ ಆಗಿರೋ ವಿಜಯಲಕ್ಷ್ಮೀ (Vijayalakshmi) ಇತ್ತೀಚೆಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಇವರಿಗೆ ಸರ್ಪ್ರೈಸ್ ನೀಡಲೆಂದೇ ಇವರ ಸ್ನೇಹಿತರಾದ ಸುಕೃತಾ, ಪ್ರಿಯಾ, ಶ್ರುತಿ ಮಧ್ಯ ರಾತ್ರಿ ದೊಡ್ಡಗಣಪತಿ ದೇವಾಯಲದ ಬಳಿ ತೆರಳಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 

47

ನಟಿ ಶ್ರುತಿ ರಮೇಶ್ (Shruthi Ramesh) ವಿಡೀಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದರಲ್ಲಿ ಇವರು ನಾಲ್ಕು ಜನ ಅಲ್ಲದೇ ಮತ್ತೆ ಕೆಲವು ಸ್ನೇಹಿತರು ಜೊತೆಯಾಗಿ ಕೇಕ್ ಕತ್ತರಿಸಿ, ತಿನ್ನಿಸಿ, ಸಾಕಷ್ಟು ನಕ್ಕು, ನಗಿಸಿ ಸಂಭ್ರಮಿಸಿದ್ದಾರೆ. ವಿಜಯಲಕ್ಷ್ಮೀ ಹುಟ್ಟು ಹಬ್ಬಕ್ಕೆ ಇತರ ಸ್ನೇಹಿತರೂ ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. 
 

57

ಸ್ನೇಹಿತರ ಹಾಗೂ ಅಭಿಮಾನಿಗಳ ಶುಭ ಹಾರೈಕೆಯಿಂದ ಖುಶಿಯಾಗಿರೋ ವಿಜಯಲಕ್ಷ್ಮೀ ಪ್ರತಿವರ್ಷ, ಪ್ರತಿಸಲ ನನ್ನ ವಿಶೇಷ ದಿನವನ್ನು ನೀವೆಲ್ಲಾ ಸೇರಿ ನೆನಪಿನಲ್ಲಿ ಉಳಿಯುವಂತೆ ಮಾಡುತ್ತೀರಿ. ಶುಭ ಕೋರಿದ ಪ್ರತಿಯೊಬ್ಬರಿಗೂ ಥ್ಯಾಂಕ್ಯೂ, ನನ್ನ ದಿನವನ್ನು ನಿಮ್ಮಿಂದಾಗಿ ನಾನು ಎಂಜಾಯ್ ಮಾಡಿದ್ದೀನಿ, ಈ ಸಂತೋಷವನ್ನು ಪದಗಳಲ್ಲಿ ವರ್ಣಿಸೋಕೆ ಆಗಲ್ಲ ಎಂದು ಧನ್ಯವಾದ ತಿಳಿಸಿದ್ದಾರೆ. 

67

ವಿಜಯಲಕ್ಷ್ಮೀ, ಸುಕೃತಾ ನಾಗ್, ಪ್ರಿಯಾ ಶಟಮರ್ಶನ್ (Priya Shatamarshan), ಶ್ರುತಿ ರಮೇಶ್ ಈ ನಾಲ್ಕು ಜನ ಪಾರ್ಟಿ, ಶಾಪಿಂಗ್, ಟ್ರಾವೆಲ್ (Travel) ಎಂದು ಹೆಚ್ಚಾಗಿ ಜೊತೆಯಾಗಿಯೇ ಇರುತ್ತಾರೆ. ಇತ್ತೀಚೆಗೆ ಈ ನಾಲ್ಕು ಜನ ಕೊಲ್ಲೂರು, ಸಿಗಂಧೂರು ಚೌಡೇಶ್ವರಿ ದೇಗುಲಕ್ಕೆ ತೆರಳಿ ದೇವಿ ದರ್ಶನ ಪಡೆದು ಬಂದಿದ್ದರು. 
 

77

ಇನ್ನು ಕರಿಯರ್ ವಿಷ್ಯದ ಬಗ್ಗೆ ಹೇಳೋದಾದ್ರೆ ವಿಜಯಲಕ್ಷ್ಮೀ (Vijayalakshmi) ಸದ್ಯಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸಿದ್ರೆ, ಸುಕೃತಾ ನಾಗ್ ಮತ್ತು ಶ್ರುತಿ ರಮೇಶ್ ಸುವರ್ಣ ವಾಹಿನಿಯ ಕಾವೇರಿ ಕನ್ನಡ ಮೀಡಿಯಂ ನಲ್ಲಿ ನಟಿಸುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories