Shraddha Arya: ನಟಿಯ ಮದುವೆ ಡಿಸೈನರ್‌ ಸೀರೆ ಬೆಲೆ ಕೇಳಿದರೆ ತಲೆ ತಿರುಗುತ್ತೆ!

Published : Nov 21, 2021, 09:56 AM ISTUpdated : Nov 21, 2021, 10:00 AM IST

ಜನಪ್ರಿಯ ಟಿವಿ ಧಾರಾವಾಹಿ 'ಕುಂಡಲಿ ಭಾಗ್ಯ' (Kundali Bhagya) ನಟಿ ಶ್ರದ್ಧಾ ಆರ್ಯ (Shraddha Arya) ಇತ್ತೀಚೆಗೆ ನವೆಂಬರ್ 16 ರಂದು ವಿವಾಹವಾದರು. ಶ್ರದ್ಧಾ ಅವರು ನೌಕಾಪಡೆಯ ಅಧಿಕಾರಿ ರಾಹುಲ್ ಶರ್ಮಾ ಅವರೊಂದಿಗೆ ಸಪ್ತಪದಿ ತುಳಿದರು. ಮದುವೆಯ ನಂತರ, ಶ್ರದ್ಧಾ ಆರ್ಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅದ್ಧೂರಿ ಮದುವೆಯ ಆರತಕ್ಷತೆಯನ್ನು ನೀಡಿದರು, ಅದರ ಕೆಲವು ಫೋಟೋಗಳು ಹೊರಬಂದಿವೆ. ಅವರ ಆರತಕ್ಷತೆಯಲ್ಲಿ, ಶ್ರದ್ಧಾ ಆರ್ಯ ತುಂಬಾ ಸುಂದರವಾದ ಮತ್ತು ಡಿಸೈನರ್‌ ಸೀರೆಯನ್ನು ಧರಿಸಿದ್ದರು. ಈ ಗ್ರೇ ಕಲರ್ ಸೀರೆಯ ಬೆಲೆ ಕೇಳಿದರೆ ಆಶ್ಷರ್ಯವಾಗುತ್ತದೆ.

PREV
16
Shraddha Arya: ನಟಿಯ ಮದುವೆ ಡಿಸೈನರ್‌ ಸೀರೆ ಬೆಲೆ ಕೇಳಿದರೆ ತಲೆ ತಿರುಗುತ್ತೆ!

ಆರತಕ್ಷತೆಯಲ್ಲಿ ಶ್ರದ್ಧಾ ಉಟ್ಟಿದ್ದ ಸೀರೆಯಲ್ಲಿ ಸ್ಫಟಿಕ ಮತ್ತು ಕಡಾಣ ವರ್ಕ್ ಎಂಬ್ರಾಯಿಡರಿ ಇದೆ. ಶ್ರದ್ಧಾ ಸೀರೆಯೊಂದಿಗೆ ಫುಲ್ ಸ್ಲೀವ್ಸ್ ಬ್ಲೌಸ್ ಅನ್ನು ಧರಿಸಿದ್ದರು,   ವರದಿಗಳ ಪ್ರಕಾರ, ಈ ಡಿಸೈನರ್ ಸೀರೆಯ ಬೆಲೆ 1 ಲಕ್ಷ 80 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ. ಆರತಕ್ಷತೆಯ ಫೋಟೋವನ್ನು ಹಂಚಿಕೊಂಡು 'ಸೀರೆ: ನನ್ನ ಸ್ವೀಟ್‌ ಮತ್ತು ಗಾರ್ಜಿಯಸ್‌ ಫ್ರೆಂಡ್‌ @taandonreynu ಅವರಿಂದ ಮದುವೆಯ ಉಡುಗೊರೆ' ಎಂದು ಶ್ರದ್ಧಾ ಬರೆದಿದ್ದಾರೆ.

26

ಶ್ರದ್ಧಾ ಆರ್ಯ ಮದುವೆಯಲ್ಲಿ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಮಾಂಗ್ ಟಿಕಾ, ನಾಥ್ ಮತ್ತು ಭಾರವಾದ ನೆಕ್ಲೇಸ್‌ನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಮೆಹಂದಿ ತುಂಬಿದ ಕೈಗಳ ತುಂಬಾ ಬಳೆಗಳನ್ನು ಧರಿಸಿದ್ದರು. 

36

ಟಿವಿ ಶೋ ಕುಂಡಲಿ ಭಾಗ್ಯದ ಹಲವು ಸ್ಟಾರ್ಸ್‌ ಶ್ರದ್ಧಾ ಆರ್ಯ ಅವರ ಮದುವೆಗೆ ಆಗಮಿಸಿದರು. ಎಲ್ಲರೂ ಸೇರಿ ನವ ವಧು - ವರರ ಜೊತೆ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

 

46

ಇದಕ್ಕೂ ಮೊದಲು ಶ್ರದ್ಧಾ ಆರ್ಯ 2015 ರಲ್ಲಿ ಜಯಂತ್ ಎಂಬ ಎನ್‌ಆರ್‌ಐ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸ್ವಲ್ಪ ಸಮಯದ ನಂತರ ಅವರ ಈ ಸಂಬಂಧ ಮುರಿದುಹೋಯಿತು. 

56

ಶ್ರದ್ಧಾ ತಮ್ಮ ವೃತ್ತಿಜೀವನವನ್ನು 'ಇಂಡಿಯಾಸ್ ಬೆಸ್ಟ್ ಸಿನಿಸ್ಟಾರ್ಸ್ ಕಿ ಖೋಜ್' ಎಂಬ ಟಿವಿ ಕಾರ್ಯಕ್ರಮದ ಮೂಲಕ ಪ್ರಾರಂಭಿಸಿದರು ಮತ್ತು ಅದರಲ್ಲಿ ಮೊದಲ ರನ್ನರ್ ಅಪ್ ಕೂಡ ಆಗಿದ್ದರು.

66

ಶ್ರದ್ಧಾ ಆರ್ಯ ಅವರು 'ಮೈ ಲಕ್ಷ್ಮಿ ತೇರೆ ಅಂಗನ್ ಕಿ', 'ತುಮ್ಹಾರಿ ಪಾಖಿ' ಮತ್ತು 'ಡ್ರೀಮ್ ಗರ್ಲ್' ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಶ್ರದ್ಧಾ ಬಾಲಿವುಡ್‌ನ 'ಪಾಠಶಾಲಾ' ಮತ್ತು 'ನಿಶಬ್ದ್' ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

Read more Photos on
click me!

Recommended Stories