ಕಿನ್ನರಿ ಧಾರಾವಾಹಿ ಖ್ಯಾತಿಯ ಪುಟ್ಟ ಮಣಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ದರ್ಶನ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ನಟಿ ದಿಶಾ ಇದೀಗ ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.
26
ನಟನೆಯಿಂದ ದೂರ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ನಟಿ ದಿಶಾ ಇದೀಗ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
36
ಕಿನ್ನರಿ ನಟಿ ಎಂದೇ ಖ್ಯಾತಿ ಗಳಿಸಿರುವ ದಿಶಾಇತ್ತೀಚೆಗಷ್ಟೆ ಅದ್ದೂರಿ ಫೋಟೋಶೂಟ್ ಮಾಡಿಸಿದ್ದಾರೆ. ಮಲ್ಟಿ ಕಲರ್ ಲೆಹಂಗಾ ಧರಿಸಿ ತರಹೇವಾರಿ ಪೋಸ್ ನೀಡಿದ್ದಾರೆ. ದಿಶಾ ಅವರ ಸುಂದರ ಫೋಟೋಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ.
46
ಪುಟ್ಟ ಮಣಿಯಾಗಿ ಕಾಣಿಸಿಕೊಳ್ಳುತ್ತಿದ್ದ ದಿಶಾ ಈಗ ತುಂಬಾ ಎತ್ತರವಾಗಿದ್ದು ಸುಂದರವಾಗಿ ಕಾಣಿಸುತ್ತಿದ್ದಾರೆ. ದಿಶಾ ಸದ್ಯ ಬಣ್ಣದ ಲೋಕದಿಂದ ದೂರ ಇದ್ದಾರೆ. ವಿದ್ಯಾಭ್ಯಸದ ಕಡೆ ಗಮನ ಹರಿಸುತ್ತಿದ್ದಾರೆ.
56
ಕಿನ್ನರಿ ಬಳಿಕ ದಿಶಾ ಮಿಥುನಾ ರಾಶಿ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಕಿನ್ನರಿಯಲ್ಲಿ ಪುಟ್ಟ ಮಣಿಯಾಗಿ ಕಾಣಿಸಿಕೊಂಡಿದ್ದ ದಿಶಾ ಮಣಿ ಪಾತ್ರ ದೊಡ್ಡವಳಾದ ಮೇಲೆ ಭೂಮಿ ಶೆಟ್ಟಿ ಎಂಟ್ರಿ ಕೊಟ್ಟಿದ್ದರು.
66
ಸದ್ಯ ದಿಶಾ ಓದಿನ ಕಡೆ ಗಮನ ಹರಿಸಿದ್ದಾರೆ. ದಿಶಾ ಇನ್ನೂ ಶಾಲೆಗೆ ಹೋಗುತ್ತಿದ್ದಾರೆ. ಓದು ಮುಗಿಸಿ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ.