ಕೆಂಡ ಸಂಪಿಗೆಯ ರಾಜಿ ರಿಯಲ್ ಲೈಫಲ್ಲಿ ಹೇಗಿದ್ದಾರೆ ನೋಡಿ…

Published : Sep 01, 2023, 11:49 AM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಹಳ್ಳಿ ಹುಡುಗಿ ರಾಜಿಯಾಗಿ ನಟಿಸುತ್ತಿರುವ ನಟಿ ಗೀತಾ ಶರಣ್. ಇವರು ರಿಯಲ್ ಲೈಫಲ್ಲಿ ಹೇಗಿದ್ದಾರೆ ಗೊತ್ತಾ?  

PREV
17
ಕೆಂಡ ಸಂಪಿಗೆಯ ರಾಜಿ ರಿಯಲ್ ಲೈಫಲ್ಲಿ ಹೇಗಿದ್ದಾರೆ ನೋಡಿ…

ಕೆಂಡ ಸಂಪಿಗೆ ಸೀರಿಯಲ್ (Kendasampige) ನಲ್ಲಿ ನಾಯಕಿ ಸುಮನಾ ತಂಗಿ ರಾಜಿಯಾಗಿ ನಟಿಸುತ್ತಿರುವ ನಟಿ ಗೀತಾ ಶರಣ್, ಸೀರಿಯಲ್ ನಲ್ಲಿ ಹೇಗೆ ಅಪ್ಪಟ ಗ್ರಾಮೀಣ ಹುಡುಗಿಯಾಗಿ ಕಾಣಿಸುತ್ತಾರೆ ಅಲ್ವಾ? ಆದರೆ ನಿಜಜೀವನದಲ್ಲಿ ಇವರು ಅದಕ್ಕೆ ತದ್ವಿರುದ್ದ, ಯಾಕಂದ್ರೆ ರಿಯಲ್ ಲೈಫಲ್ಲಿ ಇವರು ಸಖತ್ ಸ್ಟೈಲಿಶ್ ಆಗಿದ್ದಾರೆ. 
 

27

ಕೆಂಡಸಂಪಿಗೆ
ಕಲರ್ಸ್ ಕನ್ನಡದಲ್ಲಿ ಕೆಂಡಸಂಪಿಗೆ (Kendasampige) ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಗೀತಾ ಶರಣ, ಈ ಸೀರಿಯಲ್ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ. ಸದ್ಯ ಲಾಯರ್ ಆಗಿ, ಸುಮನಾ ಮೈದುನನ ಪ್ರೇಮಿಯಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ.

37

ಮಲಯಾಳಂ ಫಿಲಂ 
ಕೆಂಡಸಂಪಿಗೆ ಸೀರಿಯಲ್ ನಲ್ಲಿ ನಟಿಸೋದಕ್ಕೂ ಮುನ್ನ ಗೀತಾ ಮಲಯಾಲಂ ಚಿತ್ರವೊಂದರಲ್ಲಿ (Malayalam Movie) ನಟಿಸಿದ್ದರು. 2021ರಲ್ಲಿ ಬಿಡುಗಡೆಯಾದ ಮಲಯಾಲಂ ಮೂವಿ ಇರಟ್ ಚಂಕನ್ ಚಿತ್ರದಲ್ಲಿ ಇವರು ಬಣ್ಣ ಹಚ್ಚಿದ್ದರು. 

47

ಕಥಕ್ ಡ್ಯಾನ್ಸರ್
ಕಥಕ್ ಡ್ಯಾನ್ಸರ್ ಆಗಿರುವ ಗೀತಾ, ಹಲವಾರು ವರ್ಷಗಳಿಂದ ಗುರು ಹರಿಚೇತನ್ ಅವರಿಂದ ಕಥಕ್ ಡ್ಯಾನ್ಸ್ (Kathak Dance) ಕಲಿಯುತ್ತಿದ್ದಾರೆ. ಜೊತೆಗೆ ಹಲವಾರು ಕಡೆ ಡ್ಯಾನ್ಸ್ ಫ್ರೋಗ್ರಾಂಗಳನ್ನು ಸಹ ಇವರು ನೀಡಿದ್ದಾರೆ. 

57

ಡಯಟ್
ಆಹಾರದ ಕಡೆಗೆ ಹೆಚ್ಚಿನ ಗಮನ ಹರಿಸೋ ನಟಿ ಗೀತಾ, ನ್ಯೂಟ್ರಿಶನ್ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ವೆಜ್ ಸಲಾಡ್ (Veg Salad), ಮೊಳಕೆ ಕಾಳುಗಳು, ಬೇಯಿಸಿದ ಮೊಟ್ಟೆ (Boiled Egg), ಹಣ್ಣುಗಳನ್ನು ತಮ್ಮ ಡಯಟ್ (Diet)ನಲ್ಲಿ ಸೇವಿಸ್ತಾರೆ ಇವರು. 

67

ಫಿಟ್ನೆಸ್ ಫ್ರೀಕ್ (Fitness Freek)
ಗೀತಾ ಶರಣ್ ಅವರನ್ನು ಫಿಟ್ನೆಸ್ ಫ್ರೀಕ್ ಅಂತಾನೆ ಹೇಳಬಹುದು, ಇವರ ಸೋಶಿಯಲ್ ಮಿಡಿಯಾ ನೋಡಿದ್ರೆ ಅಲ್ಲಿ ಫಿಟ್ನೆಸ್ ಬಗ್ಗೆ ಇವರ ಆಸಕ್ತಿ ತಿಳಿಯುತ್ತೆ, ಪ್ರತಿದಿನ ಜಿಮ್ ಮಾಡುತ್ತಾ, ಆಕ್ಟೀವ್ ಆಗಿರುತ್ತಾರೆ ನಟಿ. 
 

77

ಇವರೇನಾ ಕೆಂಡ ಸಂಪಿಗೆ ರಾಜಿ
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಗೀತಾ ಶರಣ್, ಇಷ್ಟೊಂದು ಕೆಂಡ ಸಂಪಿಗೆ ಸೀರಿಯಲ್ (Serial) ನಲ್ಲಿ ಕಾಣಿಸೋದಕ್ಕೆ ಸರಿ ವಿರುದ್ಧವಾಗಿದ್ದಾರೆ ಅನ್ನೋದು ಅವರ ಫೋಟೋಸ್ ನೋಡಿದ್ರೆ ಗೊತ್ತಾಗುತ್ತೆ. ಹೆಚ್ಚಾಗಿ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುವ ನಟಿಯನ್ನ ನೋಡಿದ್ರೆ ನಿಜವಾಗಿ ಇವರೇನಾ ಕೆಂಡಸಂಪಿಗೆ ರಾಜಿ ಎಂದು ಅನಿಸಬಹುದು. 
 

click me!

Recommended Stories