ಡೀಪ್ ನೆಕ್ ಬ್ಲೌಸ್, ಕೆಂಪು ಸೀರೆಯಲ್ಲಿ ಅಕ್ಷತಾ : ಚೆನ್ನಾಗಿ ಸೀರೆ ಉಡ್ತಿದ್ರಿ ಈಗೇನಾಯ್ತು ಎಂದ ನೆಟ್ಟಿಜನ್ಸ್

Published : Dec 16, 2023, 05:49 PM ISTUpdated : Dec 17, 2023, 11:00 PM IST

ಕಥೆಯೊಂದು ಶುರುವಾಗಿದೆ ಸೀರಿಯಲ್ ನಾಯಕ ನಟಿ ಅಕ್ಷತಾ ದೇಶಪಾಂಡೆ ಡೀಪ್ ನೆಕ್ ಬ್ಲೌಸ್ ಜೊತೆ ಕೆಂಪು ಸೀರೆಯುಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಫೋಟೋಸ್ ಸಖತ್ ಸದ್ದು ಮಾಡುತ್ತಿದೆ.   

PREV
16
ಡೀಪ್ ನೆಕ್ ಬ್ಲೌಸ್, ಕೆಂಪು ಸೀರೆಯಲ್ಲಿ ಅಕ್ಷತಾ : ಚೆನ್ನಾಗಿ ಸೀರೆ ಉಡ್ತಿದ್ರಿ ಈಗೇನಾಯ್ತು ಎಂದ ನೆಟ್ಟಿಜನ್ಸ್

ಸ್ಟಾರ್ ಸುವರ್ಣ(Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಥೆಯೊಂದು ಶುರುವಾಗಿದೆ ಸೀರಿಯಲ್‌ನಲ್ಲಿ ನಾಯಕಿ ಕೃತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಕ್ಷತಾ ದೇಶಪಾಂಡೆ. ಸದ್ಯ ಕಿರುತೆರೆಯ ಫೇವರಿಟ್ ನಟಿಯರಲ್ಲಿ ಒಬ್ಬರು. 
 

26

ಕಿರುತೆರೆಯ ಮತ್ತೋರ್ವ ರಾಧಿಕಾ ಪಂಡಿತ್ ಎಂದೆ ಗುರುತಿಸಲ್ಪಡುವ ನಟಿ, ತಮ್ಮ ಸ್ನಿಗ್ಧ ಸೌಂದರ್ಯ, ಅತ್ಯುತ್ತಮ ಅಭಿನಯದ ಮೂಲಕ ಕಿರುತೆರೆಯ ಜನರ ಮನಸೆಳೆಯುವಲ್ಲಿ ಗೆದ್ದಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಇವರು ಹೆಚ್ಚಾಗಿ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. 
 

36

ಇದೀಗ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಕೆಂಪು ಸೀರೆ ಮತ್ತು ಕೆಂಪು ಬ್ಲೌಸ್ ತೊಟ್ಟ ಫೋಟೊಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಕ್ರೇಜ್ ಆಗಿದ್ದಾರೆ. ಮೊದಲ ಬಾರಿ ಡೀಪ್ ನೆಕ್ ಬ್ಲೌಸ್ ತೊಟ್ಟು ಪೋಸ್ ನೀಡಿರುವ ಅಕ್ಷತಾ (Akshatha Deshpande) ನೋಡಿ ಜನರು ಫೈರ್ ಎಂದು ಕಾಮೆಂಟ್ ಮಾಡಿದ್ದಾರೆ. 
 

46

ಸೀರಿಯಲ್‌ಗಳಲ್ಲಿ ಹೆಚ್ಚಾಗಿ ಸಿಂಪಲ್ ಆಗಿ ಸೀರೆಯುಟ್ಟು ಕೊಳ್ಳುವ ಅಕ್ಷತಾ, ಇದೀಗ ಡೀಪ್ ನೆಕ್ ಬ್ಲೌಸ್ (deep neck blouse) ಧರಿಸುವ ಮೂಲಕ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಇವರನ್ನು ನೋಡಿದ ಅಭಿಮಾನಿಗಳು ಇಲ್ಲಿವರೆಗೆ ಸರಿಯಾಗಿಯೇ ಡ್ರೆಸ್ ಮಾಡಿಕೊಳ್ಳುತ್ತಿದ್ದಿರಿ ಅಲ್ವಾ? ಈವಾಗೇನಾಯ್ತು ಎಂದು ಪ್ರಶ್ನಿಸಿದ್ದಾರೆ. 
 

56

ಸೀರೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಅಕ್ಷತಾರಿಗೆ ಹಲವು ಅಭಿಮಾನಿಗಳು ಸೌಂದರ್ಯ ದೇವತೆ, ಅದ್ಭುತವಾಗಿ ಕಾಣಿಸುತ್ತೀರಿ. ಬೆಂಕಿ, ಕೆಂಪು ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

66

ಕರಿಯರ್ ವಿಷಯಕ್ಕೆ ಬಂದ್ರೆ ಮಾಡೆಲ್ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ಅಕ್ಷತಾ ಮತ್ತೆ ವಸಂತ ಸೀರಿಯಲ್ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು, ನಂತರ ಕಾವ್ಯಾಂಜಲಿ ಸೀರಿಯಲ್ ನಲ್ಲಿ ನಟಿಸಿದ್ದರು. ಇದೀಗ ಕಥೆಯೊಂದು ಶುರುವಾಗಿದೆ ಸೀರಿಯಲ್ (serial) ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನಾಮಿಕ ಎಂಬ ತಮಿಳು ಸೀರಿಯಲ್ ನಲ್ಲಿ ಸಹ ನಟಿಸುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories