ಸಂಜಯ್‌ನ ಮೋಸದಿಂದ ಜೈಲು ಸೇರಿದ್ದ ನಿಧಿಯನ್ನು ಕರ್ಣ ರಕ್ಷಿಸಿದ್ದಾನೆ. ಆಘಾತದಲ್ಲಿರುವ ನಿಧಿಗೆ ಸಮಾಧಾನ ಹೇಳಿ, ಇದಕ್ಕೆ ಕಾರಣನಾದ ಸಂಜಯ್‌ಗೆ ತಕ್ಕ ಪಾಠ ಕಲಿಸಲು ಕರ್ಣ ಜಿಮ್‌ಗೆ ತೆರಳಿದ್ದಾನೆ, ಅಲ್ಲಿ ಅವನಿಗೆ ಯಮರೂಪಿಯಾಗಿ ದರ್ಶನ ನೀಡಿದ್ದಾನೆ.
ಕರ್ಣನೇ ಆಕೆಗೆ ಸಮಾಧಾನ ಮಾಡಿ ತಿಂಡಿ ತಿನಿಸಿದ್ದಾನೆ. ಕೊನೆಗೆ ಇದಕ್ಕೆಲ್ಲಾ ಕಾರಣ ಆಗಿರೋ ಸಂಜಯ್ನಿಗೆ ಗತಿ ಕಾಣಿಸಬೇಕೆಂಬ ಪಣ ತೊಟ್ಟಿದ್ದಾನೆ ಕರ್ಣ.
57
ಸಂಜಯ್‌ಗೆ ಬುದ್ಧಿ
ಇದೇ ಕಾರಣಕ್ಕೆ ಕುಸ್ತಿಪಟುಗಳು ಹಾಕಿಕೊಳ್ಳುವ Boxing Gloves ಖರೀದಿ ಮಾಡಿ ಸಂಜಯ್‌ಗೆ ಬುದ್ಧಿ ಕಲಿಸಲು ಮುಂದಾಗಿದ್ದಾನೆ.
67
ಜಿಮ್ ವರ್ಕ್
ಸಂಜಯ್ ಇದರ ಪರಿವೇ ಇಲ್ಲದೇ ಇಯರ್ಫೋನ್ನಲ್ಲಿ ಹಾಡು ಹಾಕಿಕೊಂಡು ಜಿಮ್ವರ್ಕ್ ಮಾಡುತ್ತಿದ್ದಾನೆ. ಆಗ ಕರ್ಣ ಅಲ್ಲಿ ಇರುವ ಖುರ್ಚಿಯ ಮೇಲೆ ನಿಧಿಯನ್ನು ಕುಳ್ಳರಿಸಿದ್ದಾನೆ. ಕಾಲ ಮೇಲೆ ಕಾಲು ಹಾಕಿ ಹಾಗೆಯೇ ಅಲುಗಾಡದೇ ಕುಳಿತುಕೊಳ್ಳುವಂತೆ ಹೇಳಿದ್ದಾನೆ.
77
ಯಮರೂಪಿ
ಸಂಜಯ್‌ಗೆ ಯಮರೂಪಿಯಾಗಿ ಬಂದು ನಿಂತಿದ್ದಾನೆ. ಅವನು ಬಂದಿದ್ದನ್ನು ಬಳಿಕ ಸಂಜಯ್ ನೋಡಿದ್ದಾನೆ. ಆದರೆ ನಿಧಿಯನ್ನು ಆತ ಗಮನಿಸಲಿಲ್ಲ. ಮುಂದೆ ಆಗುವ ಅನಾಹುತಗಳ ಅರಿವೂ ಇಲ್ಲ. ಇನ್ನು ಅವನ ಕಥೆ ಮುಗಿದಂತೆ!