'ಕರ್ಣ' ಸೀರಿಯಲ್ ಮತ್ತು ಬಿಗ್‌ಬಾಸ್ ಖ್ಯಾತಿಯ ಭವ್ಯಾ ಗೌಡ ಇದೀಗ 'ದೇವಿ' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಈ ಹಿಂದೆ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ನಟಿಸಿದ್ದ ಅವರು, ಈ ಹೊಸ ಸಿನಿಮಾದಲ್ಲಿ ಯುವ ರೈತ ಚೇತನ್ ಗೌಡ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕರ್ಣ ಸೀರಿಯಲ್ (Karna Serial) ನಿಧಿಯಾಗಿ ಎಲ್ಲರ ಮೆಚ್ಚುಗೆ ಗಳಿಸ್ತಿರೋ ಬಿಗ್‌ಬಾಸ್ ಖ್ಯಾತಿಯ ಭವ್ಯಾ ಗೌಡ ಇದಾಗಲೇ ಫ್ಲವರ್ ಬಿಜಿನೆಸ್ ಶುರು ಮಾಡಿದ್ದಾರೆ. ಇದರ ನಡುವೆಯೇ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಭವಿಷ್ಯ ರೂಪಿಸಿಕೊಳ್ಳಲು ಸಜ್ಜಾಗಿದ್ದು, ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
26
ದೇವಿ ಚಿತ್ರ
ಭವ್ಯಾ ಗೌಡ ಅವರು ದೇವಿ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ. ಯುವ ರೈತ ಚೇತನ್ ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ತಿದ್ದರೆ. ಭವ್ಯಾ ಗೌಡ ಹಾಗೂ ಚೇತನ್ ಗೌಡ ಅವರ ಈ ಹೊಸ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
36
ಲ್ಯಾಂಡ್‌ಲಾರ್ಡ್ ಚಿತ್ರದಲ್ಲಿ ನಟನೆ
ಹಾಗೆಂದು ಭವ್ಯಾ ಗೌಡ ಅವರಿಗೆ ದೇವಿ ಮೊದಲ ಚಿತ್ರವಲ್ಲ. ಈ ಹಿಂದೆ ಲ್ಯಾಂಡ್‌ಲಾರ್ಡ್ ಅನ್ನೋದು ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ‘ಲ್ಯಾಂಡ್‌ಲಾರ್ಡ್’ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿದ್ದರು. ಇದೀಗ ದೇವಿ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ನಟಿ.
ಭವ್ಯಾ ಗೌಡ, ಸೀರಿಯಲ್ ಮೂಲಕವೇ ಮನೆ ಮಗಳಾದವರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಗೀತಾ ಸೀರಿಯಲ್ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದವರು ಭವ್ಯಾ ಗೌಡ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದ ಭವ್ಯಾ ಗೌಡ, ಗೀತಾ ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.
56
ಅವಕಾಶಗಳ ಆಗರ
ಧನುಷ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಭವ್ಯಾ ಗೌಡ ಲಕ್ ಬದಲಿಸಿದ್ದು ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ. ಸೀರಿಯಲ್ ಮುಗಿತಿದ್ದಂತೆ ಬಿಗ್ ಬಾಸ್ ಕನ್ನಡ 11ರ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ಭವ್ಯಾ ಗೌಡಾಗೆ ಸಿಕ್ಕಿತ್ತು.
66
ಕರ್ಣ ಸೀರಿಯಲ್ ಮೂಲಕ ಜನ ಮನ್ನಣೆ
ಸಿಕ್ಕ ಅವಕಾಶವನ್ನು ಅದ್ಭುತವಾಗಿ ನಿಭಾಯಿಸಿದ್ದ ಭವ್ಯಾ ಗೌಡ, ಟಾಪ್ ನಾಲ್ಕನೇ ಸ್ಥಾನ ಗಿಟ್ಟಿಸಿಕೊಳ್ಳಲು ಯಶಸರ್ವಿಯಾಗಿದ್ರು. ಸ್ವಲ್ಪದರಲ್ಲಿಯೇ ಟ್ರೋಫಿ ಕೈತಪ್ಪಿದ್ರೂ ಫ್ಯಾನ್ ಫಾಲೋವರ್ಸ್ ಸಂಖ್ಯೆ ಸಿಕ್ಕಾಪಟ್ಟೆ ಏರಿಕೆ ಆಗಿತ್ತು. ತ್ರಿವಿಕ್ರಮ್ ಹಾಗೂ ಭವ್ಯಾ ಜೋಡಿಯನ್ನು ಮೆಚ್ಚಿಕೊಂಡಿದ್ದ ಬಿಗ್ ಬಾಸ್ ವೀಕ್ಷಕರು ನಂತ್ರ ಭವ್ಯಾ ಯಾವ ಸೀರಿಯಲ್ ನಲ್ಲಿ ಕಾಣಿಸಿಕೊಳ್ತಾರೆ ಎನ್ನುವ ಕುತೂಹಲದಲ್ಲಿದ್ದರು. ಇದೀಗ ಕರ್ಣ ಸೀರಿಯಲ್ ಮೂಲಕ ಎಲ್ಲರ ಮನಸ್ಸನ್ನು ಕದ್ದು ಬೀಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.