ಮೈಸೂರಿನ ಹುಡುಗಿಯಾಗಿರುವ ಸ್ಪಂದನಾ ಓದಿದ್ದು, ಇಂಜಿನಿಯರಿಂಗ್ ಆದರೂ, ಇಂಜಿನಿಯರ್ ಆಗುವ ಹೊತ್ತಲ್ಲೇ, ಬಣ್ಣದ ಲೋಕ ಸ್ವಾಗತಿಸಿದ್ದು, ತೆಲುಗಿನ ಅಭಿಲಾಶ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಇವರು, ಕನ್ನಡದಲ್ಲಿ ನಾನು ನನ್ನ ಕನಸು ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಸಿನಿಮಾದಲ್ಲಿ ನಟಿಸಿ, ಈಗ ಮತ್ತೆ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.