ಮದ್ವೆ ಬಗ್ಗೆ ಗಟ್ಟಿಮೇಳ ಚೆಲುವೆಯರ ಶಾಕಿಂಗ್ ಹೇಳಿಕೆ, ಗಂಡು ಮಕ್ಳ ಜೀವ್ನ ಹಾಳಾಗುತ್ತೆ ಅಂದ ಫ್ಯಾನ್ಸ್!

First Published | Jun 8, 2024, 4:51 PM IST

ಜನಪ್ರಿಯ ಗಟ್ಟಿಮೇಳ ಸೀರಿಯಲ್ ನಲ್ಲೈ ಅತ್ತಿಗೆ ನಾದಿನಿ ಆದ್ಯಾ ಮತ್ತು ಅಮೂಲ್ಯ ಆಗಿ ಅಭಿನಯಿಸಿದ ಅನ್ವಿತಾ ಸಾಗರ್ ಮತ್ತು ನಿಶಾ ರವಿಕೃಷ್ಣನ್ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳ (Gattimela) ನಿಮಗೆ ನೆನಪಿದೆ ಅಲ್ವಾ? ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಸಹ ಜನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದರಲ್ಲೂ ನಾಯಕಿ ಅಮ್ಮು-ಅಮೂಲ್ಯ ಪಾತ್ರ ಹಾಗೂ ವೇದಾಂತ್ ತಂಗಿ ಆದ್ಯಾ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. 
 

ಅಮೂಲ್ಯ ಮತ್ತು ಆದ್ಯಾ ಸೀರಿಯಲ್ ನಲ್ಲಿ ಅತ್ತಿಗೆ -ನಾದಿನಿಯಾಗಿ ನಟಿಸಿದ್ದರು. ಇಬ್ಬರದ್ದೂ ಉತ್ತಮ ಬಾಂಡಿಂಗ್ ಹೊಂದಿರೋ ಸಂಬಂಧವಾಗಿತ್ತು. ಸೀರಿಯಲ್ಲಲ್ಲಿ ಮಾತ್ರವಲ್ಲ, ಸೀರಿಯಲ್ ಹೊರಗೂ ಸಹ ಈ ಇಬ್ಬರ ಜೋಡಿಯ ಬಾಂಡಿಂಗ್ ತುಂಬಾನೆ ಸ್ಟ್ರಾಂಗ್ ಆಗಿದೆ. ಇಬ್ಬರು ಬೆಸ್ಟ್ ಫ್ರೆಂಡ್ಸ್ ಅಂತಾನೆ ಹೇಳಬಹುದು. ಇಬ್ಬರನ್ನು ಜೊತೆಯಾಗಿ ಸೋಶಿಯಲ್ ಮೀಡಿಯಾದಲ್ಲಿ (social media) ನೋಡೋದಕ್ಕೂ ಜನ ಕಾಯ್ತಿರ್ತಾರೆ. 
 

Tap to resize

ಹೌದು ಅಮೂಲ್ಯ ಖ್ಯಾತಿಯ ನಿಶಾ ರವಿ ಕೃಷ್ಣನ್ (Nisha Ravikrishnan) ಮತ್ತು ಆದ್ಯಾ ಖ್ಯಾತಿಯ ಅನ್ವಿತಾ ಸಾಗರ್ (Anvitha Sagar), ಇಬ್ಬರೂ ರಿಯಲ್ ಲೈಫಲ್ಲಿ ಬೆಸ್ಟ್ ಫ್ರೆಂಡ್ಸ್. ಸದ್ಯ ಇಬ್ಬರೂ ಬೇರೆ ಬೇರೆ ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಜೊತೆಯಾಗಿ ಟ್ರಾವೆಲ್ ಮಾಡುತ್ತಾ, ರೀಲ್ಸ್ ಮಾಡುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ನಿಶಾ- ಅನ್ವಿತಾ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಕೂಡ ಇದ್ದಾರೆ. ಯಾಕಂದ್ರೆ, ಇಬ್ಬರು ಜೊತೆಯಾಗಿ ಮಾಡೋ ರೀಲ್ಸ್ ಅಷ್ಟೊಂದು ಫೇಮಸ್ ಆಗಿದೆ. ವಾರದಲ್ಲಿ ಒಂದು ಬಾರಿಯಾದ್ರೂ ಈ ಜೋಡಿ ಜೊತೆಯಾಗಿ ರೀಲ್ಸ್ ಮಾಡಿ ಅಪ್ ಲೋಡ್ ಮಾಡ್ತಾರೆ. ಇವರ ವಿಡೀಯೋಗಳಿಗೆ ಸಿಕ್ಕಾಪಟ್ಟೆ ವ್ಯೂವ್ಸ್ ಕೂಡ ಬರುತ್ತೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇವರು ಅನ್ವಿಶಾ (#Anvisha)ಅಂತಾನೆ ಫೇಮಸ್. 
 

ಇನ್ನು ನಿಶಾ ಮತ್ತು ಅನ್ವಿತಾ ಜೋಡಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮದುವೆ ಕುರಿತಾದ ಶಾಕಿಂಗ್ ಹೇಳಿಕೆ ನೀಡಿರುವ ವಿಡಿಯೋ ಇದಾಗಿದ್ದು, ಇದನ್ನ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅಷ್ತಕ್ಕೂ ಇವ್ರೇನು ಸೀರಿಯಸ್ ಆಗಿ ಹೇಳಿಲ್ಲ. ಅವರು ತಮಾಷೆಯಾಗಿ ಹೇಳಿದ ಮಾತು ಈಗ ವೈರಲ್ ಆಗ್ತಿದೆ. 
 

ಇಬ್ರು ಎಷ್ಟೊಂದು ಕ್ಲೋಸ್ ಫ್ರೆಂಡ್ಸ್ ಅಂದ್ರೆ, ಇಬ್ಬರು ಒಬ್ಬರಿಗೊಬ್ಬರು ಮದುವೆಯಾಗಬೇಕು ಅಂತ ಯೋಚನೆ ಮಾಡಿದ್ರಂತೆ. ಆ ಯೋಚನೆ ಇನ್ನೂ ಇದೆ ಎಂದು ಹೇಳಿ ಇಬ್ಬರೂ ನಕ್ಕಿದ್ದಾರೆ. ಬಳಿಕ ನಾವು ಆ ಥರ ಅಲ್ಲ, ಸತ್ಯ ಹೇಳ್ತಿದಿನಿ, ನೀವು ಏನೇನೋ ಅಂದ್ಕೋಬೇಡಿ, ನಿಜವಾಗ್ಲೂ ಆ ಥರ ಅಲ್ಲ. ಮಲಗೋವಾಗ ಹಿಡ್ಕೊಂಡು ಮಲಗೋದಿಲ್ಲ ಎಂದಿದ್ದಾರೆ ಅನ್ವಿತಾ ಮತ್ತು ನಿಶಾ. 
 

ಈ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ಫ್ಯಾನ್ಸ್ ಏನೇನೋ ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ಈ ಥರ ಎಲ್ಲ ಹೇಳ್ಬೇಡಿ, ಇಬ್ಬರು ಗಂಡು ಮಕ್ಕಳ ಜೀವನ ಹಾಳಾಗುತ್ತೆ ಅಂದ್ರೆ, ಇನ್ನೂ ಕೆಲವರು ಸದ್ಯ ಇಬ್ಬರು ಹುಡುಗರ ಜೀವನ ಸುಖಕರವಾಗಿರುತ್ತೇ ನೀವೇ ಮದುವೆ ಆಗಿ ಒಬ್ಬರಿಗೊಬ್ಬರು ಎಂದಿದ್ದಾರೆ. ಮತ್ತೊಬ್ರು ಎಲ್ಲಾ ಹೇಳಿದ್ಮೇಲೆ ನಾವು ಆ ಥರ ಅಲ್ಲ ಅಂದ್ರೆ ಯಾರ್ ನಂಬ್ತಾರೆ ಎಂದು ಸಹ ಕಾಮೆಂಟ್ ಮಾಡಿದ್ದಾರೆ. 
 

Latest Videos

click me!