ನಟಿ ವೈಷ್ಣವಿ ಹಾಟ್ ಪೋಟೋಸ್ ನೋಡಿದ್ರಾ?

First Published | Jun 11, 2023, 5:13 PM IST

ನಟಿ, ಮಾಡೆಲ್ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಯಾಗಿರುವ ವೈಷ್ಣವಿ ರಾವ್ (Vaishnavi Rao) ಅವರು,  ಹಿಂದಿ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸ್ಟಾರ್‌ಫ್ಲಸ್‌ ಸೇರಿ ಹಲವು ಟಿವಿ ಶೋಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ವ ವೈಷ್ಣವಿ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ಈ ನಡುವೆ  ಅವರ ಹಾಟ್‌ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿವೆ ಮತ್ತು ಯುವಕರ ಹೃದಯ ಬಡಿತ ಹೆಚ್ಚಿಸಿದೆ.

Vaishnavi Rao

ಏಪ್ರಿಲ್ 4, 1998 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಮರಾಠಿ ಕುಟುಂಬದಲ್ಲಿ ಜನಿಸಿದ ವೈಷ್ಣವಿ ರಾವ್ ಪುಣೆಯ ಸೇಂಟ್ ಹೆಲೆನಾ ಶಾಲೆಯಿಂದ ಶಾಲಾ ಶಿಕ್ಷಣವನ್ನು ಮಾಡಿದರು. ನಂತರ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಪದವಿ ಪಡೆದರು.

Vaishnavi Rao

ತನ್ನ ವೃತ್ತಿಜೀವನವನ್ನು (Career)  7 ನೇ ವಯಸ್ಸಿನಲ್ಲಿ ಪ್ರಾರಂಭಿಸಿದ ವೈಷ್ಣವಿ ರಾವ್ ಅವರು ಶಾರುಖ್ ಖಾನ್ ಅವರ ಸೈಫ್ ಅಲಿ ಖಾನ್ ಮತ್ತು ಪ್ರೀತಿ ಜಿಂಟಾ ನಟಿಸಿರುವ ಕಲ್ ಹೋ ನಾ ಹೋ ಚಿತ್ರದಲ್ಲಿ  ಪುಟ್ಟ ಬಾಲಕಿಯಾಗಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ

Tap to resize

Vaishnavi Rao

2004 ರಲ್ಲಿ ಬಾಲ ಕಲಾವಿದನಾಗಿ ಲೂಂಬಾ ಕಾರ್ಯಕ್ರಮದೊಂದಿಗೆ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದ ವೈಷ್ಣವಿ . ‘ಮಾನ್ಸಿ’ ಪಾತ್ರದಲ್ಲಿ ಸ್ಟಾರ್ ಪ್ಲಸ್ ಶೋ ಯೆ ರಿಶ್ತಾ ಕ್ಯಾ ಕೆಹ್ತಾ ಹೈ ಮೂಲಕ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅದರ ನಂತರ ಅವರಿಗೆ ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು.

Vaishnavi Rao

ವೈಷ್ಣವಿ ಸಖತ್‌ ಫಿಟ್‌ನೆಸ್ ಫ್ರೀಕ್‌ ಕೂಡ ಹೌದು ಮತ್ತು ಅವರು ಆಗಾಗ್ಗೆ ತನ್ನ ವರ್ಕೌಟ್‌ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಳ್ಳುತ್ತಾರೆ.

Vaishnavi Rao

ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ಪುಸ್ತಕಗಳನ್ನು  ಇಷ್ಟಪಡುವ ಈ ನಟಿಸ್ವಯಂ-ಶೀರ್ಷಿಕೆಯ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ಇದರಲ್ಲಿ ಅವರು ವ್ಲಾಗ್ ಮತ್ತು ಕಿರು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.

Vaishnavi Rao

ಹಲವು ಮ್ಯೂಸಿಕ್‌ ವೀಡಿಯೋಗಳ್ಲಲಿ ಕಾಣಿಸಿಕೊಳ್ಳುವುದರ ಜೊತೆ ವೈಷ್ಣವಿ ಅವರು 2019 ರಲ್ಲಿ ಎಂಎಕ್ಸ್ ಪ್ಲೇಯರ್‌ನ ವೆಬ್ ಸರಣಿ ಹೇ ಪ್ರಭುವಿನಲ್ಲಿ ಇರಾ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲ್ಯದಿಂದಲೂ, ಸಂಗೀತದ ಬಗ್ಗೆ ಆಸಕ್ತಿ ಹೊಂದಿರುವ ವೈಷ್ಣವಿ  ರಾವ್‌ . ಗಿಟಾರ್, ಉಕುಲೆಲೆ, ಪಿಯಾನೋ, ಡ್ರಮ್ಸ್ ಮುಂತಾದ ವಿಭಿನ್ನ ಸಂಗೀತ ವಾದ್ಯಗಳನ್ನು ನುಡಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

Latest Videos

click me!