ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು (Comedy Khiladigalu) ರಿಯಾಲಿಟಿ ಶೋ ಮೂಲಕ ಗೋವಿಂದೇ ಗೌಡ (Govinde Gowda) ಮತ್ತು ದಿವ್ಯಶ್ರೀ (Divyashree) ಬಣ್ಣದ ಜರ್ನಿ ಆರಂಭಿಸಿದ್ದರು. ಅವರಿಬ್ಬರ ನಡುವಿನ ಸ್ನೇಹ, ಪ್ರೀತಿಗೆ ತಿರುಗಿ, ಅನಂತರ ಮನೆಯವರ ಒಪ್ಪಿಗೆ ಪಡೆದು ಇಬ್ಬರು ಮದುವೆ ಮಾಡಿಕೊಂಡಿದ್ದರು.
'ನೇತ್ರದಾನದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಾನವೀಯ ನಟರಾದ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಕೃತಜ್ಞತಾ ಪೂರ್ವಕವಾಗಿ ನನ್ನ ಪತ್ನಿ ದಿವ್ಯಶ್ರೀಯವರ ಸೀಮಂತ ಕಾರ್ಯಕ್ರಮದಲ್ಲಿ (Baby Shower) ಡಾ. ರಾಜಕುಮಾರ್ (Dr Rajkumar) ಐ ಬ್ಯಾಂಕ್‌ನ ಚೇರ್ಮನ್ ಡಾಕ್ಟರ್ ಭುಜಂಗ ಶೆಟ್ಟಿ (Bhujanga Shetty) ಸರ್ ಅವರ ಸಹಕಾರದೊಂದಿಗೆ..
ಡಾ.ರಾಜಕುಮಾರ್ ಐ ಬ್ಯಾಂಕ್‌ನ ಮೆನೇಜರ್ ವೀರೇಶ್‌ರವರ (Veeresh) ಸಮ್ಮುಖದಲ್ಲಿ ನಾನು ನನ್ನ ಪತ್ನಿ ಹಾಗೂ ಬಂಧು ಬಳಗದವರು ನೇತ್ರದಾನ (Eye Donate) ಮಾಡಿದ್ದು ಜೀವನದ ಒಂದು ಸಾರ್ಥಕತೆ ಅನಿಸಿತು' ಎಂದು ಗೋವಿಂದೇ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಹಂಚಿಕೊಂಡಿದ್ದಾರೆ.
ಹೆತ್ತವರಂತೆ, ಒಡಹುಟ್ಟಿದವರಂತೆ ಹಾರೈಸುವಿರಿ ನೀವೆಲ್ಲಾ. ಪ್ರಕಟವಾದರು ನಿಮ್ಮ ನಿಷ್ಕಲ್ಮಶ ಪ್ರೀತಿ ಬಾಂಧವ್ಯಗಳಲ್ಲೇ ಇರುವ ದೇವರುಗಳೆಲ್ಲಾ. ಎಲ್ಲಿದ್ದರೂ ಅಲ್ಲಿಂದಲೇ ಬೆಲ್ಲದ ಸೊಲ್ಲಾಡುವ ನೀವುಗಳೆ ನಮ್ಮ ಪಾಲಿಗೆ ಏಸು ಶಿವಾ ಅಲ್ಲಾ' ಎಂದು ಗರ್ಭಿಣಿ ದಿವ್ಯಶ್ರೀ ಜೊತೆಗಿನ ಫೋಟೋವನ್ನು ಸಹ ಗೋವಿಂದೇ ಗೌಡ ಅವರು ಶೇರ್ ಮಾಡಿಕೊಂಡಿದ್ದಾರೆ.
ಗೋವಿಂದೇ ಗೌಡ ಮತ್ತು ದಿವ್ಯಶ್ರೀ ಅವರ ನಿಶ್ಚಿತಾರ್ಥ (Engagement) ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. 2019ರ ಮಾರ್ಚ್ 14 ರಂದು ಶೃಂಗೇರಿಯಲ್ಲಿ (Sringeri) ಈ ದಂಪತಿಗಳ ವಿವಾಹ ಮಹೋತ್ಸವ (Weddking) ಸರಳವಾಗಿ ನಡೆದಿತ್ತು.
ನಟಿ ದಿವ್ಯಶ್ರೀ ಇದೀಗ ತುಂಬು ಗರ್ಭಿಣಿ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಿವ್ಯಶ್ರೀ ಹಾಗೂ ಗೋವಿಂದೇ ಗೌಡ ಅವರು ಇತ್ತೀಚೆಗಷ್ಟೇ ನವರಸನಾಯಕ ಜಗ್ಗೇಶ್ (Jaggesh) ಅವರನ್ನು ಭೇಟಿ ಮಾಡಿ ಆಶೀರ್ವಾದ (Blessing) ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಇವರು ಸರಳವಾಗಿ ಫೋಟೋಶೂಟ್ ಕೂಡಾ (Photoshoot) ಮಾಡಿಸಿದ್ದಾರೆ. ಆದರೆ ಇದರಲ್ಲೊಂದು ವಿಶೇಷತೆ ಇದೆ. ಇಬ್ಬರು ಅರಳಿ ಮರದ ಕೆಳಗೆ ಕುಳಿತುಕೊಂಡು ಪುನೀತ್ ರಾಜ್‌ಕುಮಾರ್ ಫೋಟೋ ಇರುವ ಮ್ಯಾಗಜಿನ್ (Magazine) ಓದುತ್ತಿದ್ದಾರೆ. ಇದು ನೆಟ್ಟಿಗರ ಗಮನ ಸೆಳೆದಿದೆ.