ಯಾರ ದೃಷ್ಟಿ ಬಿತ್ತೋ ಏನೋ! 2.5 ವರ್ಷದ ಮುದ್ದಾದ ಮಗ, ಪತ್ನಿ ಬಿಟ್ಟು ಹೊರಟ ಕನ್ನಡ Social Media Influencer

Published : Feb 22, 2026, 12:56 PM IST

The couple buns ಎನ್ನುವ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ದಂಪತಿಯ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಎಚ್‌ಡಿ ಕೋಟೆಯ ಭರತ್‌ ಗೌಡ ಅವರು ನಿಧನರಾಗಿದ್ದಾರೆ. ಇದ್ದರೆ ಹೀಗೆ ಇರಬೇಕು, ಎಂಥ ಜೋಡಿ ಎಂದು ಕರೆಸಿಕೊಳ್ಳುತ್ತಿದ್ದ ಈ ದಂಪತಿ ಮೇಲೆ ಯಾರ ಕಣ್ಣು ಬಿತ್ತೋ ಏನೋ! 

PREV
14
ಎಲ್ಲಿ ಸಾವು ಆಯ್ತು?

ಕಳೆದ ಮೂರು ದಿನಗಳ ಹಿಂದೆ ಭರತ್‌ ಗೌಡ ಅವರು ಮಂಟ್ಯ ರೈಲ್ವೆ ಸ್ಟೇಶನ್‌ನಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ವರದಿಯಾಗಿದೆ. ಇವರ ಸಾವಿಗೆ ಏನು ಕಾರಣ ಏನು ಎಂದು ಚರ್ಚೆ ಶುರು ಆಗಿದೆ. 

24
ಸಾವಿಗೆ ಕಾರಣ ಏನು?

ಅನೇಕರು ಇವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಆರ್ಥಿಕ ಸಮಸ್ಯೆಯಿಂದ ಹೀಗೆ ಮಾಡಿಕೊಂಡರು ಎಂದು ಅನೇಕರು ಹೇಳುತ್ತಿದ್ದಾರೆ.

34
ರೈಲಿಗೆ ಸಿಲುಕಿ ಆತ್ಮ*ಹತ್ಯೆ

ಗೆಜ್ಜಲಗೆರೆ ಮೆಗಾ ಡೈರಿಯ ಹಾಲು ಶೇಖರಣ ವಿಭಾಗದಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಭರತ್ ರಾಜ್ ಅವರು ಗುರುವಾರ ಸಂಜೆ 4 ಗಂಟೆಗೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಬಿಜಾಪುರಕ್ಕೆ ಹೋಗುತ್ತಿದ್ದ ಗೋಲ್‌ಗುಂಬಜ್ ಎಕ್ಸಪ್ರೆಸ್ ರೈಲಿಗೆ ನಿಧನರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

44
ಪ್ರೇಮಿಗಳ ದಿನ ಆಚರಣೆ

ಭರತ್‌ ಅವರು ಅನುಶ್ರೀ ಅವರನ್ನು ಮದುವೆಯಾಗಿ ನಾಲ್ಕು ವರ್ಷಗಳು ತುಂಬುತ್ತಲಿತ್ತು. ಬಹಳ ಗ್ರ್ಯಾಂಡ್‌ ಆಗಿ ಈ ಜೋಡಿ ಮದುವೆ ಆಗಿತ್ತು. ಅಂದಹಾಗೆ ಟ್ರಿಪ್‌ ಮಾಡಿ ಪ್ರೇಮಿಗಳ ದಿನವನ್ನು ಕೂಡ ಆಚರಿಸಿತ್ತು.

ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಹಾಕಬೇಡಿ, ಯಾರ ದೃಷ್ಟಿ ಬಿತ್ತೋ ಏನೋ, ಮುದ್ದಾದ ಹೆಂಡ್ತಿ, ಮಗುವನ್ನು ಬಿಟ್ಟು ಹೋದರು ಎಂದು ಅನೇಕರು ಕಾಮೆಂಟ್‌ ಮಾಡುತ್ತಿದ್ದಾರೆ.

ಪತ್ನಿ ಏನು ಮಾಡುತ್ತಿದ್ದಾರೆ?

ಅಂದಹಾಗೆ ಅನುಶ್ರೀ ಅವರು ಸೀರೆ ಬ್ಯುಸಿನೆಸ್‌ ಹಾಗೂ ಮೇಕಪ್‌ ಆರ್ಟಿಸ್ಟ್‌ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories