ಮೊದಲ ಮಗುವಿನ ನಿರೀಕ್ಷೆಯಲ್ಲಿ ರಕ್ಷಾಬಂಧನ ನಟ ಭವಾನಿ ಸಿಂಗ್ - ಪಂಕಜಾ ಶಿವಣ್ಣ

Published : May 18, 2024, 02:48 PM ISTUpdated : May 18, 2024, 02:50 PM IST

ಕನ್ನಡ ಕಿರುತೆರೆಯಲ್ಲಿ ಮಿಂಚಿದ ಜೋಡಿಗಳಾದ ನಟ ಭವಾನಿ ಸಿಂಗ್ ಮತ್ತು ನಟಿ ಪಂಕಜಾ ಶಿವಣ್ಣ ಪೋಷಕರಾಗುವ ಸಂತೋಷದಲ್ಲಿದ್ದು, ಸೋಶಿಯಲ್ ಮಿಡಿಯಾದಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿ ಹಂಚಿಕೊಂಡಿದ್ದಾರೆ. 

PREV
17
ಮೊದಲ ಮಗುವಿನ ನಿರೀಕ್ಷೆಯಲ್ಲಿ ರಕ್ಷಾಬಂಧನ ನಟ ಭವಾನಿ ಸಿಂಗ್ - ಪಂಕಜಾ ಶಿವಣ್ಣ

ಕನ್ನಡ ಕಿರುತೆರೆಯಲ್ಲಿ ಮಿಂಚಿದ ನಟ ಭವಾನಿ ಸಿಂಗ್ (Bhavani Singh) ಮತ್ತು ಪಂಕಜಾ ಶಿವಣ್ಣ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಜೋಡಿ ತಮ್ಮ ಮೆಟರ್ನಿಟಿ ಫೋಟೋ ಶೂಟ್ ಮಾಡಿ ಹಂಚಿಕೊಳ್ಳುವ ಮೂಲಕ ತಮ್ಮ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. 

27

ಭವಾನಿ ಸಿಂಗ್ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದ ನಟ. ಸದ್ಯ ಇವರು ನಟನೆಯಿಂದ ದೂರ ಉಳಿದಿದ್ದಾರೆ. ಚರಣದಾಸಿ, ರಕ್ಷಾಬಂಧನ (Rakshabandhana), ಸುಬ್ಬುಲಕ್ಷ್ಮಿ ಸಂಸಾರ ಸೀರಿಯಲ್ ಗಳಲ್ಲಿ ಭವಾನಿ ಸಿಂಗ್ ನಟಿಸಿದ್ದರು. 
 

37

ಇನ್ನು ಇವರ ಪತ್ನಿ ಪಂಕಜಾ ಶಿವಣ್ಣ (Pankaja Shivanna)ಕೂಡ ಕನ್ನಡ ಕಿರುತೆರೆಯ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದರು. ಲಕ್ಷ್ಮಿ ಬಾರಮ್ಮ, ಮಂಗ್ಳೂರ್‌ ಹುಡುಗಿ ಹುಬ್ಬಳ್ಳಿ ಹುಡುಗ, ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 
 

47

ಸುಬ್ಬು ಲಕ್ಷ್ಮಿ ಸಂಸಾರ (Subbu Lakshmi Samsara) ಸೀರಿಯಲ್ ವೇಳೆ ಭವಾನಿ ಸಿಂಗ್ ಮತ್ತು ಪಂಕಜಾ ಇಬ್ಬರು ಜೊತೆಯಾಗಿ ನಟಿಸುತ್ತಿದ್ದರು. ಈ ಸಮಯದಲ್ಲಿ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿತ್ತು. ತಮ್ಮ ಲವ್ ವಿಷ್ಯವನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸರ್ಫ್ರೈಸ್ ನೀಡಿದ್ದರು. 
 

57

ಮೂಲತಃ ರಾಜಸ್ಥಾನದವರಾದ ಭವಾನಿ ಸಿಂಗ್ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದರು. ಇವರನ್ನು ರಾಜಪೂತ ಕನ್ನಡಿಗ ಎನ್ನುತ್ತಾರೆ. ಐದು ವರ್ಷದ ಹಿಂದೆ ನಟಿ ಪಂಕಜಾ ಶಿವಣ್ಣ ಅವರನ್ನು ಭವಾನಿ ಸಿಂಗ್ ಪ್ರೀತಿಸಿ ಮದುವೆಯಾಗಿದ್ದರು. 
 

67

ಐದು ವರ್ಷಗಳ ಬಳಿಕ ತಂದೆಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡ ಭವಾನಿ ಸಿಂಗ ಸೋಶಿಯಲ್ ಮೀಡಿಯಾದಲ್ಲಿ ಮೆಟರ್ನಿಟಿ ಫೋಟೋಗಳು, ವಿಡಿಯೋ ಶೇರ್ ಮಾಡುವ ಮೂಲಕ ನಮ್ಮ ಕುಟುಂಬ ಮತ್ತಷ್ಟು ದೊಡ್ಡದಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಈ ಜೋಡಿಗೆ ಶುಭ ಕೋರಿದೆ. 
 

77

ಕೊರೋನಾ ಸಂದರ್ಭದಲ್ಲಿ ಭವಾನಿ ಸಿಂಗ್ ಅವರಿಗೆ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದ್ದ ಕಾರಣ ಇನ್ನು ಮುಂದೆ ನಟಿಸೋದು ಬೇಡ ಎಂದು ಪತ್ನಿ ಪಂಕಜಾ ಆಣೆ ಮಾಡಿದ್ದರಂತೆ, ಹಾಗಾಗಿ ಭವಾನಿ ಸಿಂಗ್ ಕಳೆದ ಕೆಲವು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದಾರೆ. 
 

Read more Photos on
click me!

Recommended Stories