30 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಕನ್ನಡ ಕಿರುತೆರೆಯ ಟಾಪ್ ನಟಿಯರಿವರು

Published : Feb 20, 2024, 08:30 PM IST

ಬೆಂಗಳೂರು (ಫೆ.20): ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕರ್ನಾಟಕದ ಜನತೆಗೆ ಮನರಂಜನೆ ನೀಡುತ್ತಾ ಕೌಟುಂಬಿಕ ಪಾತ್ರಗಳನ್ನು ನಿರ್ವಹಣೆ ಮಾಡುವ ಟಾಪ್‌ ನಟಿಯರಿಗೆ 30 ವರ್ಷಗಳು ದಾಟಿದರೂ ಇನ್ನೂ ಮದುವೆಯಾಗಿಲ್ಲ. ಅಂತಹ ಟಾಪ್‌ ನಟಿಯರ ಪಟ್ಟಿ ಇಲ್ಲಿದೆ ನೋಡಿ..

PREV
18
30 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಕನ್ನಡ ಕಿರುತೆರೆಯ ಟಾಪ್ ನಟಿಯರಿವರು

ಕನ್ನಡದಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಪ್ರತಿಭೆ ಪ್ರದರ್ಶಿಸಿದ ವೈಷ್ಣವಿಗೌಡ ಈಗಲೂ ಬಹುಬೇಡಿಕೆ ನಟಿಯಾಗಿದ್ದಾರೆ. ಈಗ ಸೀತಾ ರಾಮ ಧಾರಾವಾಹಿಯ ನಾಯಕಿ ಸೀತಾ ಆಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
 

28

ನಮ್ಮ ಸಾಂಸ್ಕೃತಿಕ ಮೈಸೂರಿನ ಹುಡುಗಿ ನವ್ಯಾ ಸ್ವಾಮಿ ಓದುತ್ತಿರುವಾಗಲೇ ಆಡಿಶನ್ ಕೊಟ್ಟು ನಟನೆಗೆ ಬಂದಿದ್ದಾರೆ. 'ಲಕುಮಿ' ಧಾರಾವಾಹಿಯಲ್ಲಿ ಅಭಿನಯಿಸಿ ಜನಮನ ಗೆದ್ದ ನವ್ಯಾ ಜೀ ಕನ್ನಡದ ಕೆಲ ಶೋಗಳಲ್ಲಿ ನಿರೂಪಕಿ ಆಗಿದ್ದರು. ನಂತರ, ತೆಲುಗು-ತಮಿಳು ಕಿರಿತೆರೆಯಲ್ಲಿ ಸ್ಟಾರ್ ನಾಯಕಿಯಾಗಿದ್ದಾರೆ.
 

38

ಕನ್ನಡದ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಮಾಂಗಲ್ಯ ಧಾರಾವಾಹಿ ಅವಧಿಯಿಂದಲೂ ಕೌಟುಂಬಿಕ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಸಿರಿಜಾ ಈವರೆಗೂ ಮದುವೆಯಾಗಿಲ್ಲ. ಅವರು ಬಿಗ್‌ಬಾಸ್‌ ಸೀಸನ್ 10ರಲ್ಲಿ ಭಾಗವಹಿಸಿ ಒಳ್ಳೆ ಹುಡುಗ ಸಿಕ್ಕರೆ ಮದುವೆಯಾಗುವುದಾಗಿ ತಿಳಿಸಿದ್ದಾರೆ.
 

48

ಇನ್ನು ಆಂಕರ್ ಅನುಪಮಾ ಗೌಡ ಎಲ್ಲರಿಗೂ ಪರಿಚತಳೇ ಆಗಿದ್ದಾರೆ. ಹಲವು ಟಿವಿ ಕಾರ್ಯಕ್ರಮಗಳ ನಿರೂಪಕಿಯಾಗಿರುವ ಅನುಪಮಾ ಬ್ಯಾಚುಲರ್ ಲೈಫನ್ನು ಎಂಜಾಯ್ ಮಾಡುತ್ತಿದ್ದಾಳೆ. ಇನ್ನು ತನ್ನದೇ ಕುಟುಂಬದ ಹೊರೆಯನ್ನೂ ಅವರು ಹೊತ್ತಿದ್ದಾರೆ.
 

58

ಕನ್ನಡ ಧಾರಾವಾಹಿಯನ್ನು ನಾಗಿಣಿಯಾಗಿ ಕಾಣಿಸಿಕೊಂಡು ಹಾವಿನ ರೂಪದಲ್ಲಿಯೇ ಪ್ರಸಿದ್ಧಿ ಹೊಂದಿದ್ದ ದೀಪಿಕಾ ದಾಸ್ ಬಿಗ್‌ಬಾಸ್ ಮಾಜಿ ಸ್ಪರ್ಧಿಯೂ ಆಗಿದ್ದಾರೆ. ಅವರು ಶೈನ್‌ ಶೆಟ್ಟಿಯೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಅವರಿಗೆ ಈಗ 30 ಆಗಿದ್ದು, ಮದುವೆಯ ಬಗ್ಗೆ ಯಾವುದೇ ಸುಳಿವು ಬಿಚ್ಚಿಟ್ಟಿಲ್ಲ.
 

68

ಆಂಕರ್ ಅನುಶ್ರೀ ಕನ್ನಡ ನಾಡಿನ ಪ್ರತಿಯೊಬ್ಬ ಕಿರಿತೆರೆ ವೀಕ್ಷಕರಿಗೂ ಚಿರಪರಿಚಿತಳಾಗಿದ್ದಾಳೆ. ಈಕೆ ಕಿರಿತೆರೆಯ ಸ್ಟಾರ್ ನಿರೂಪಕಿ ಹಾಗೂ ಸ್ಯಾಂಡಲ್‌ವುಡ್‌ ನಟಿಯೂ ಆಗಿದ್ದಾಳೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಒಬ್ಬಳಾಗಿದ್ದಾರೆ. ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿರುವ ಅನುಶ್ರೀ ಮದುವೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ.
 

78

ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಅಮೃತವರ್ಷಿಣಿ ಧಾರಾವಾನಿಯ ಮೂಲಕ ನಾಡಿನ ಜನತೆಯ ಮನಗೆದ್ದ ರಜನಿ ಇಂದಿಗೂ ಮದುವೆಯಾಗದೇ ಬ್ಯಾಚುಲರ್ ಆಗಿದ್ದಾರೆ. ಕನ್ನಡ ಕಿರುತೆರೆ, ಕೆಲವು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಇತ್ತೀಚೆಗೆ ಜೀ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿಯೂ ನಟನೆ ಮಾಡಿದ್ದಾಳೆ.
 

88

ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಮಲೈಕಾ ಟಿ ವಸುಪಾಲ್ ಅವರು, ನಟ ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾಳೆ. ಆದರೆ, ಮಲೈಕಾಗೆ 30 ವರ್ಷವಾಗಿಲ್ಲ. ಈಕೆಗೆ 26 ವರ್ಷ ದಾಟಿದ್ದು, ಮದುವೆ ಬಗ್ಗೆ ಸುಳಿವು ನೀಡಿಲ್ಲ.
 

Read more Photos on
click me!

Recommended Stories