ವೃತ್ತಿ ಮತ್ತು ಪ್ರವೃತ್ತಿ...ಎರಡನ್ನು ಸಮದೂಗಿಸಿಕೊಂಡು ಸಾಧನೆ ಮಾಡಿರುವ ಬಹುಮುಖ ಪ್ರತಿಭೆ ಡಾ.ಶ್ರುತಿ ಚೇತನ್. ಹಲವಾರು ಕೆಲಸಗಳನ್ನು ಒಟ್ಟಿಗೆ ಮಾಡುವ ಗಟ್ಟಿಗಿತ್ತಿ.
ಡಾ.ಶ್ರುತಿ ವೃತ್ತಿಯಲ್ಲಿ ದಂತ ವೈದ್ಯೆ. ವಿದ್ಯೆಯಲ್ಲಿ ಸದಾ ಮುಂದಿದ್ದು ಗೋಲ್ಡ್ ಮೆಡಲ್ ಪಡೆದಿದ್ದಾರೆ. ರೂಪದರ್ಶಿಯಾಗಿ ಮಿಸಸ್ ಕರ್ನಾಟಕ ಪ್ರಶಸ್ತಿ ಪಡೆದಿದ್ದಾರೆ.
ಮಿಸೆಸ್ ಇಂಡಿಯಾ ಅವಾರ್ಡ್ ಪಡೆದಿರುವ ಶ್ರುತಿ ಪ್ರತಿಷ್ಠಿತ ಆಭರಣದ ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ.
ಡಾಕ್ಟರ್ ಶ್ರುತಿ ಸರ್ಟಿಫೈಟ್ ಯೋಗ ಥೆರಪಿಸ್ಟ್. ಇದರ ಜೊತೆಗೆ ಮಕ್ಕಳ ಆಸ್ಪತ್ರೆಗಳ ಗುಡ್ ವಿಲ್ ರಾಯಭಾರಿ ಆಗಿದ್ದಾರೆ. ಇಲ್ಲಿದ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತಾರೆ.
ವಿದ್ಯಾಸಂಸ್ಥೆಯ ಆಡಳಿತ ವರ್ಗದಲ್ಲಿ ಇರುವುದಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಧನಾ ಸಿರಿ, ರತ್ನಶ್ರೀ ಮತ್ತು ಭೈರವಿ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಲೈಫ್‌ನಲ್ಲಿ ಇಬ್ಬರು ಸೂಪರ್ ಸ್ಟಾರ್‌ಗಳು ಇದ್ದಾರೆ. ನನ್ನನ್ನು ಹೇಗೆ ನೋಡುತ್ತಿದ್ದೀರಾ...ನಾನು ತಾಯಿ ರೂಪ...ಅವರಿಗೆ ಅವಕಾಶ ಸಿಗುತ್ತಿರಲಿಲ್ಲ ನನಗೆ ಅವಕಾಶ ಸಿಕ್ಕಿದೆ.
ಡೆಡಿಕೇಷನ್ ಮತ್ತು ಹಾರ್ಡ್ ವರ್ಕ್‌ಗೆ ನನ್ನ ತಾಯಿನೇ ಕಾರಣ. ನನಗೆ ಬ್ಯುಸಿನೆಸ್ ಇಷ್ಟ ಇರುವ ಕಾರಣ ರತ್ನ ಟಾಟ ಅವರು ದೊಡ್ಡ ಸ್ಫೂರ್ತಿ.
Vaishnavi Chandrashekar