Anushree Wedding Saree: 'ನನ್ನ ಮದುವೆ ಸೀರೆಗೆ 2,70,000 ರೂ ಕೊಟ್ಟಿಲ್ಲʼ-ನಿಜವಾದ ರೇಟ್ ಹೇಳಿದ ಅನುಶ್ರೀ! ಹೌಹಾರಿದ ವೀಕ್ಷಕರು

Published : Sep 04, 2025, 11:20 AM ISTUpdated : Sep 04, 2025, 12:10 PM IST

ನಿರೂಪಕಿ ಅನುಶ್ರೀ ಅವರು ರೋಶನ್‌ ಜೊತೆ ಮದುವೆಯಾಗಿ ಒಂದು ವಾರ ಕಳೆದಿದೆ. ಇವರ ಮದುವೆ ಬಗ್ಗೆ ಎಲ್ಲೆಡೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ರಾರಾಜಿಸುತ್ತಿದ್ದವು. ಇನ್ನು ಅನುಶ್ರೀ ಸೀರೆ ಬೆಲೆ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. 

PREV
111

“ನಾ ಆರಾಧಿಸಿದ ದೇವರು ... ಆಶೀರ್ವಾದ ಮಾಡಿದ ಪ್ರೀತಿಯ ಕನ್ನಡಿಗರು ...

ಕೊಟ್ಟ ವರ .. ಈ ಕ್ಷಣ .. ಈ ನಗು” ಎಂದು ಅನುಶ್ರೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

211

ಅನುಶ್ರೀ ಅವರು 2,70,000 ರೂಪಾಯಿ ಸೀರೆ ಖರೀದಿ ಮಾಡಿದ್ದಾರೆ ಎಂಬ ಪೋಸ್ಟ್‌ ವೈರಲ್‌ ಆಗಿತ್ತು. ಇದರ ಬಗ್ಗೆ ದೊಡ್ಡ ಚರ್ಚೆ ಆಯಿತು. ಈ ಬಗ್ಗೆ ಅನುಶ್ರೀ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಉತ್ತರ ನೀಡಿದ್ದಾರೆ.

311

ಅನುಶ್ರೀ ಅವರು, “ನನ್ನ ಸೀರೆ ಬೆಲೆ 2,70,000 ರೂಪಾಯಿ ಎಂದು ಹೇಳುತ್ತಿದ್ದಿರಿ. ಆದರೆ ನನ್ನ ಸೀರೆ ಬೆಲೆ ಮೈಸೂರು ಸಿಲ್ಕ್‌ ಉದ್ಯೋಗ್‌ನಿಂದ 2700 ರೂಪಾಯಿಗೆ ಖರೀದಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.

411

ಅನುಶ್ರೀ ಅವರ ಸರಳತೆ ಅನೇಕರಿಗೆ ಇಷ್ಟ ಆಗಿದೆ. ಇಷ್ಟು ಕಡಿಮೆ ಬೆಲೆಗೆ ಸೀರೆ ಖರೀದಿ ಮಾಡಿದ್ದು ಅನೇಕರಿಗೆ ಆಶ್ಚರ್ಯ ಆಗಿದೆ.

511

ಮದುವೆಗೆ ಈಗ ಸಾಮಾನ್ಯ ಜನರೇ 2 ಲಕ್ಷ ರೂಪಾಯಿ ಖರೀದಿ ಮಾಡುವ ಕಾಲದಲ್ಲಿ ಅನುಶ್ರೀ ಅವರು ಸೆಲೆಬ್ರಿಟಿಯಾಗಿ 2700 ರೂಪಾಯಿಗೆ ಖರೀದಿ ಮಾಡಿದ್ದು ನಿಜಕ್ಕೂ ಅನುಕರಣೀಯ ಆಗಿದೆ ಎಂದಿದ್ದಾರೆ.

611

ಅನುಶ್ರೀ ಅವರ ಮದುವೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಇರುವ ಫೋಟೋವನ್ನು ಎಡಿಟ್‌ ಮಾಡಲಾಗಿದೆ. ಈ ಫೋಟೋ ಅನುಶ್ರೀಗೆ ತುಂಬ ಇಷ್ಟವಾಗಿದೆಯಂತೆ. ಅಂದಹಾಗೆ ಅನುಶ್ರೀ ಅವರು ಅಪ್ಪು ಅಭಿಮಾನಿ. 

711

ಅನುಶ್ರೀ ಅವರು ರೋಶನ್‌ ಎನ್ನುವ ಐಟಿ ಉದ್ಯಮಿ ಜೊತೆ ಮದುವೆಯಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ಈ ಮದುವೆ ನಡೆದಿದೆ. 

811

ಶ್ರೀ ಗೌರಿ ಗಣೇಶ ಚತುರ್ಥಿ ದಿನದಂದು ಅರಿಷಿಣ, ಸಂಗೀತ ಶಾಸ್ತ್ರ ನಡೆದಿತ್ತು. ಕುಟುಂಬಸ್ಥರು, ಸ್ನೇಹಿತರು ಈ ಖುಷಿಯಲ್ಲಿ ಭಾಗಿಯಾಗಿದ್ದರು. 

911

ಅನುಶ್ರೀ ಅವರು ಸರಳವಾದ ಸೀರೆಯಲ್ಲಿ ಕಂಗೊಳಿಸಿದ್ದಾರೆ ಎಂದು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಮಂತ್ರಮಾಂಗಲ್ಯ ಆಗಬೇಕು ಎಂದುಕೊಂಡಿದ್ದ ಅನುಶ್ರೀ ಅವರು ರೆಸಾರ್ಟ್‌ನಲ್ಲಿ ಮದುವೆ ಆಗಬೇಕಾಯ್ತು. ಮಂತ್ರಮಾಂಗಲ್ಯದಲ್ಲಿ ಒಂದಷ್ಟು ನಿಯಮಗಳಿತ್ತು, ಅದನ್ನು ನೆರವೇರಿಸಲು ಆಗಲಿಲ್ಲ. 

1011

ಅನುಶ್ರೀ ಅವರ ಮದುವೆಯಲ್ಲಿ ಅವರಿಗೆ ರೋಶನ್‌ ಬಳೆಗಳು, ನಕ್ಲೇಸ್‌ ಹಾಕಿದ್ದರು. ಇನ್ನು ರೋಶನ್‌ಗೆ ಅನುಶ್ರೀ ತಮ್ಮ ಚಿನ್ನದ ಸರ, ಬ್ರಾಸ್‌ಲೈಟ್‌ ಹಾಕಿದ್ದರು. 

1111

ಮದುವೆ ಊಟದ ವೇಳೆ ಚಿನ್ನ ಇಟ್ಟರೆ ಊಟ ಅಂತ ಅನುಶ್ರೀ ಅವರು ಕಾಲೆಳೆದಿದ್ದರು. ಆಗಲೂ ಕೂಡ ಅನುಶ್ರೀಗೆ ಬಂಗಾರದ ಬಳೆ ಹಾಕಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. 

Read more Photos on
click me!

Recommended Stories