ಹೊಸ ಮನೆಗೆ ಭೂಮಿ ಪೂಜೆ ಮಾಡಿದ ಅನುಶ್ರೀ

First Published | Jun 23, 2022, 11:46 AM IST

ಹೊಸ ಮನೆ ಕಟ್ಟಿಸಲು ಭೂಮಿ ಪೂಜೆ ಮಾಡಿದ ಜನಪ್ರಿಯ ನಿರೂಪಕಿ ಅನುಶ್ರೀ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್... 

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ (Anushree) ಹೊಸ ಮನೆ ಕಟ್ಟಿಸಲು ತಮ್ಮ ಜಮೀನಿನಲ್ಲಿ ಭೂಮಿ ಪೂಜೆ ಮಾಡಿದ್ದಾರೆ. 

ಹನುಮಂತ ನಗರದ (Hanumanth Nagar) ಶ್ರೀ ಕುಮಾರಸ್ವಾಮಿ ದೇಗುಲದ ಅರ್ಚಕರಾದ ಮಂಜುನಾಥ್‌ ಭಟ್ ಅವರು ಭೂಮಿ ಪೂಜೆ ಮಾಡಿದ್ದಾರೆ. 

Tap to resize

 ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‌ನ ಸುಬ್ರಹ್ಮಣ್ಯ ಪುರಂನಲ್ಲಿ ಜಾಗ ಖರೀದಿ ಮಾಡಿದ್ದಾರೆ. ಹೊಸ ಮನೆ ಹೊಸ ಶುಭಾರಂಭಕ್ಕೆ ಸಜ್ಜಾಗಿದ್ದಾರೆ. 

ಅನುಶ್ರೀ ತಾಯಿ ಮತ್ತು ಸಹೋದರನ ಜೊತೆ ಭೂಮಿ ಪೂಜೆ ಸಲ್ಲಿಸಿದ್ದಾರೆ. ಅನುಶ್ರೀಗೆ ಆಪ್ತರಾಗಿರು ವಸ್ತ್ರ ವಿನ್ಯಾಸಕಿ ಅಂಜಲಿ ಕುಟುಂಬ ಭಾಗಿಯಾಗಿದ್ದರು.

ಪಿಂಕ್ ಬಣ್ಣದ ಸೆಲ್ವಾರ್‌ನಲ್ಲಿ ಅನುಶ್ರೀ ಕಾಣಿಸಿಕೊಂಡಿದ್ದಾರೆ. ಆಪ್ತರು ಮಾತ್ರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

 ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಶ್ರಮಿಸಿರುವ ಅನುಶ್ರೀ ಅವರಿಗೆ ಬಿಗ್ ಸಕ್ಸಸ್‌ ಸಿಗಲಿ ಎಂದು ಅಭಿಮಾನಿಗಳು ಆಶಿಸುತ್ತಾರೆ.

Latest Videos

click me!