ಭಾರತಿ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫೋಟೋಶೂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗಳನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ ಮತ್ತು ಬರಲಿರುವ ಪುಟ್ಟ ಅತಿಥಿಯನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ.
ಭಾರತಿ ಸಿಂಗ್ ಫೋಟೋಶೂಟ್‌ನಲ್ಲಿ ಪೆಸ್ಟಲ್ ಸ್ಕೈ ರೋಸಿ ಬಣ್ಣದ ರಫಲ್ಡ್ ಡ್ರೆಸ್ ಧರಿಸಿದ್ದಾರೆ.ಈ ಡ್ರೆಸ್‌ನ ತೋಳುಗಳಲ್ಲಿ ರಫಲ್ ಅನ್ನು ಹೊಂದಿದೆ. ಅದೇ ಸಮಯದಲ್ಲಿ, ಅವರು ಅದರ ಮೇಲೆ ರಫಲ್ ಜಾಕೆಟ್ ಅನ್ನು ಸಹ ಹಾಕಿದ್ದಾರೆ.ಅವರು ಈ ಡ್ರೆಸ್‌ನೊಂದಿಗೆ ಮೇಕ್ಅಪ್ ಅನ್ನು ಚೆನ್ನಾಗಿ ಮ್ಯಾಚ್ ಮಾಡಿಕೊಂಡಿದ್ದಾರೆ.
ಕೂದಲನ್ನು ಕರ್ಲಿ ಮಾಡುವ ಮೂಲಕ ಕಟ್ಟದೆ ಹಾಗೇ ಬಿಟ್ಟಿದ್ದಾರೆ. ಗುಲಾಬಿ ಹೂವುಗಳಿಂದ ಮಾಡಿದ ಹಿನ್ನೆಲೆಯಲ್ಲಿ ಅವರು ಬೇಬಿ ಬಂಪ್ ಜೊತೆ ವಿಭಿನ್ನವಾಗಿ ಪೋಸ್ ನೀಡಿದ್ದಾರೆ. 'ದಿ ಲೂನಿ ಲೆನ್ಸ್' ಭಾರತಿ ಸಿಂಗ್ ಅವರ ಫೋಟೋಶೂಟ್ ಮಾಡಿದೆ. ಇದರಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಭಾರತಿ ಸಿಂಗ್ ಅವರ ಪತಿ ಹರ್ಷ್ ಲಿಂಬಾಚಿಯಾ ಕೂಡ ತಮ್ಮ ಲೇಡಿ ಲವ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅವರು ಕೂಡ ತಮ್ಮ ಪತ್ನಿಯೊಂದಿಗೆ ಫೋಟೋಶೂಟ್ ಮಾಡಿದ್ದಾರೆ.ಭಾರತಿ ಸಿಂಗ್ ಅವರ ಬೇಬಿ ಬಂಪ್ ಹಿಡಿದುಕೊಂಡು ಹರ್ಷ್ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಾರೆ.
ಭಾರತಿ ಸಿಂಗ್ ರಿಯಾಲಿಟಿ ಶೋ 'ಹುನರ್ಬಾಜ್' ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಈ ಸಮಯದಲ್ಲೂ ಕೆಲಸ ಮಾಡುವ ಮೂಲಕ ಮಹಿಳೆಯರಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.ಈ ಶೋನ ಅವರ ಕೋ ಹೋಸ್ಟ್ ಹರ್ಷ್ ಲಿಂಬಾಚಿಯಾ ಅವರು ಸೆಟ್‌ಗಳಲ್ಲಿ ತಮ್ಮ ಹೆಂಡತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.