ಕಿರುತೆರೆಯ ಈ ಟಾಪ್ ನಟರು ನಿಮ್ಮ ನೆಚ್ಚಿನ ಸೀರಿಯಲ್ ನಿರ್ಮಾಪಕರೂ ಕೂಡ ಹೌದು

Published : Aug 26, 2023, 05:58 PM ISTUpdated : Aug 26, 2023, 06:05 PM IST

ಕನ್ನಡ ಕಿರುತೆರೆಯಲ್ಲಿ ಮಿಂಚಿದ ಹೆಚ್ಚಿನ ನಟ -ನಟಿಯರು ಈಗ ಕೇವಲ ನಟರಾಗಿ ಉಳಿದಿಲ್ಲ. ನಿರ್ಮಾಪಕರಾಗಿ ಯಶಸ್ಸು ಕಂಡಿದ್ದಾರೆ. ಹಾಗಿದ್ರೆ, ಯಾವೆಲ್ಲಾ ನಟ -ನಟಿಯರು ಸೀರಿಯಲ್ ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದಾರೆ ನೋಡೋಣ.  

PREV
17
ಕಿರುತೆರೆಯ ಈ ಟಾಪ್ ನಟರು ನಿಮ್ಮ ನೆಚ್ಚಿನ ಸೀರಿಯಲ್ ನಿರ್ಮಾಪಕರೂ ಕೂಡ ಹೌದು

ಮೇಘಾ ಶೆಟ್ಟಿ (Megha Shetty): ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಮನೆಮಾತಾಗಿರುವ ಮೇಘಾ ಶೆಟ್ಟಿ ಸದ್ಯ ಸಿನಿಮಾ ರಂಗದ ಬಹುಬೇಡಿಕೆಯ ನಟಿ ಎಂದರೂ ತಪ್ಪಾಗಲ್ಲ. ಆದರೆ ನಿಮಗೊಂದು ವಿಷ್ಯ ಗೊತ್ತಾ? ಮೇಘಾ ಶೆಟ್ಟಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡ ಸಂಪಿಗೆ ಸೀರಿಯಲ್ ಪ್ರೊಡ್ಯೂಸರ್ ಕೂಡ ಹೌದು. 

27

ಸೃಜನ್ ಲೋಕೇಶ್ (Srujan Lokesh): ಸೃಜನ್ ಲೋಕೇಶ್ ಬಗ್ಗೆ ಹೆಚ್ಚೆನೂ ಹೆಳಬೇಕಾಗಿಲ್ಲ. ಇವರು ನಟ, ನಿರೂಪಕ ಜೊತೆಗೆ ನಿರ್ಮಾಪಕರೂ ಹೌದು. ಮಜಾ ಟಾಕೀಸ್, ಛೋಟಾ ಚಾಂಪಿಯನ್, ಕಾಸಿಗೆ ಟಾಸ್ ಮೊದಲಾದ ಹಲವಾರು ರಿಯಾಲಿಟಿ ಶೋಗಳನ್ನು ನಿರ್ಮಿಸಿದ್ದಾರೆ. 

37

ರಮೇಶ್ ಅರವಿಂದ್ (Ramesh Aravind): ರಮೇಶ್ ಅರವಿಂದ್ ಅವರು ಅದ್ಭುತ ನಟ, ನಿರ್ದೇಶಕರು, ಸ್ಕ್ರೀನ್ ರೈಟರ್, ನಿರೂಪಕರಾಗಿ ತುಂಬಾನೆ ಫೇಮಸ್. ಆದರೆ ಇವರು ಸೀರಿಯಲ್ ಒಂದರ ನಿರ್ಮಾಪಕರೂ ಹೌದು ಅನ್ನೋದು ಗೊತ್ತಾ? ಹೌದು, ರಮೇಶ್ ಅವರು ಸೂಪರ್ ನ್ಯಾಚುರಲ್ ಕಥೆ ಹೊಂದಿರುವ ನಂದಿನಿ ಸೀರಿಯಲ್ ನ ಎರಡನೇ ಇನ್ನಿಂಗ್ಸ್ ಪ್ರೊಡ್ಯೂಸ್ ಮಾಡ್ತಿದ್ದಾರೆ. 

47

ರಕ್ಷ್ (Rakksh Gowda): ಪುಟ್ಟ ಗೌರಿಯ ಮದುವೆ ಸೀರಿಯಲ್ ಮೂಲಕ ಜನಮನ ಗೆದ್ದು, ಇದೀಗ ಗಟ್ಟಿಮೇಳ ಸೀರಿಯಲ್ ಮೂಲಕ ಮಿಂಚುತ್ತಿರುವ ನಟ ರಕ್ಷ್ ಆಲಿಯಾಸ್ ರಕ್ಷಿತ್ ಗೌಡ ಗಟ್ಟಿಮೇಳದ ನಿರ್ಮಾಪಕರೂ ಹೌದು. ಇದೀಗ ರಕ್ಷ್ ಒಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

57

ಜಗನ್ನಾಥ್ ಚಂದ್ರಶೇಖರ್ (Jaganath Chandrashekharr ): ಗಾಂಧಾರಿ, ಬಿಗ್ ಬಾಸ್, ಸೀತಾ ವಲ್ಲಭ, ಈಗ ಲಕ್ಷಣ ಸೀರಿಯಲ್ ಸೇರಿ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಅತ್ಯುತ್ತಮ ನಟನಾಗಿ ಗುರುತಿಸಿಕೊಂಡಿರುವ ಜಗನ್, ಲಕ್ಷಣ ಸೀರಿಯಲ್ ನಿರ್ಮಾಪಕರೂ ಹೌದು. 

67

ದಿಲೀಪ್ ರಾಜ್  (Dileep Raj): ಸಿನಿಮಾ, ಸೀರಿಯಲ್ ನಲ್ಲಿ ತಮ್ಮ ನಟನೆಯ ಮೂಲಕ ಜನರ ಹೃದಯ ಗೆದ್ದಿದ್ದ ನಟ ದಿಲೀಪ್ ರಾಜ್ ಹಲವಾರು ಹಿಟ್ ಸೀರಿಯಲ್ ಗಳ ನಿರ್ಮಾಪಕರೂ ಹೌದು. ವಿದ್ಯಾ ವಿನಾಯಕ ಮತ್ತು ಪಾರು ಸೀರಿಯಲ್ ನಿರ್ಮಾಪಕರೂ ಹೌದು. ಜೊತೆಗೆ ಎಜೆಯಾಗಿ ನಟಿಸುತ್ತಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ನ ನಿರ್ಮಾಪಕರೂ ಹೌದು.

77

ಸ್ವಪ್ನ ಕೃಷ್ಣ (Swapna Krishna): ಸ್ವಪ್ನ ಕೃಷ್ಣ ಅವರನ್ನು ಹಳೆಯ ಹಲವಾರು ಸೀರಿಯಲ್ ಗಳಲ್ಲಿ ನೀವು ನೋಡಿರುತ್ತೀರಿ. ಇದೀಗ ಸ್ವಪ್ನ ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಸತ್ಯ ಸೀರಿಯಲ್ ನಿರ್ಮಾಪಕಿ ಇವರೇ. 

Read more Photos on
click me!

Recommended Stories