'ಜೀವ ಹೂವಾಗಿದೆ' ನಟಿ ಶಿಲ್ಪಾ ರವಿ ಸೀಮಂತ ಸಂಭ್ರಮ; ಫೋಟೋ ವೈರಲ್

Published : May 08, 2024, 12:54 PM IST

ಪುಟ್ಟ ಕಂದಮ್ಮ ಬರ ಮಾಡಿಕೊಳ್ಳಲು ಸಜ್ಜಾದ ಕಿರುತೆರೆ ಸೆಲೆಬ್ರಿಟಿ ಕಪಲ್. ಸೋಷಿಯಲ್ ಮೀಡಿಯಾ ತುಂಬಾ ಸೀಮಂತ ಫೋಟೋಗಳು....

PREV
17
'ಜೀವ ಹೂವಾಗಿದೆ' ನಟಿ ಶಿಲ್ಪಾ ರವಿ ಸೀಮಂತ ಸಂಭ್ರಮ; ಫೋಟೋ ವೈರಲ್

ಕನ್ನಡ ಕಿರುತೆರೆ ಜನಪ್ರಿಯ ನಟ ದರ್ಶಕ್‌ ಗೌಡ ಮತ್ತು ಪತ್ನಿ ನಟಿ ಶಿಲ್ಪಾ ರವಿ ಅವರ ಬಾಳಿನಲ್ಲಿ ಪುಟ್ಟ ಕಂದಮ್ಮನ ಆಗಮನವಾಗಲಿದೆ.

27

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ಇತ್ತೀಚಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದರು. ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು. 

37

ಕ್ರೀಮ್ ಮತ್ತು ಪಿಂಕ್ ಕಾಂಬಿನೇಷನ್‌ ಇರುವ ರೇಶ್ಮೆ ಸೀರೆಯಲ್ಲಿ ಶಿಲ್ಪಾ ಮಿಂಚುತ್ತಿದ್ದರೆ, ಪಿಂಕ್‌ ಬಣ್ಣದ ರೇಶ್ಮೆ ಶರ್ಟ್‌ನಲ್ಲಿ ದರ್ಶಕ್‌ ಕಾಣಿಸಿಕೊಂಡಿದ್ದಾರೆ. 

47

ನವೆಂಬರ್ 24, 2020ರಂದು ದರ್ಶಕ್ ಮತ್ತು ಶಿಲ್ಪಾ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ ನಂತರ ಕಿರುತೆರೆಯಿಂದ ಶಿಲ್ಪಾ ದೂರ ಉಳಿದುಬಿಟ್ಟರು.

57

ಕಾವ್ಯಾಂಜಲಿ, ಬೆಟ್ಟದ ಹೂವು ಕನ್ನಡ ಧಾರಾವಾಹಿಯಲ್ಲಿ ದರ್ಶಕ್‌ ನಟಿಸಿದ್ದಾರೆ, ಈಗ ಪರಭಾಷೆ ಧಾರಾವಾಹಿಯಲ್ಲಿ ನಟಿಸುತ್ತಾ ಸಖತ್ ಬ್ಯುಸಿಯಾಗಿದ್ದಾರೆ.

67

ದರ್ಶಕ್ ಗೌಡ ಮತ್ತು ಶಿಲ್ಪಾ ಅವರು ಒಂದೇ ವಾಹಿನಿಯ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಪ್ರಶಸ್ತಿ ಸಮಾರಂಭವೊಂದರಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. 

77

ಆ ನಂತರ ಸ್ನೇಹ ಬೆಳೆದಿತ್ತು. ಒಂದು ವರ್ಷದ ಬಳಿಕ ದರ್ಶಕ್ ನೇರವಾಗಿ ಮದುವೆ ಪ್ರಸ್ತಾಪ ಮಾಡಿದ್ದರು. ಶಿಲ್ಪಾ ಬೇಗನೆ ಒಪ್ಪಿಕೊಂಡರು

Read more Photos on
click me!

Recommended Stories