ಲಾಕಪ್ ರಿಯಾಲಿಟಿ ಶೋ ನಿರ್ದೇಶಕಿ ಏಕ್ತಾ ಕಪೂರ್ ಸಹೋದರಿ ತುಷಾರ್ ಕಪೂರ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಕಂಗನಾ ತುಂಬಾನೇ ಗ್ರ್ಯಾಂಡ್ ಆಗಿ ಬರ ಮಾಡಿಕೊಂಡಿದ್ದಾರೆ.
ಶೋ ಎಂಟರ್ ಆಗಿ ಪ್ರತಿಯೊಬ್ಬ ಸ್ಪರ್ಧಿಯನ್ನು ಭೇಟಿ ಮಾಡಿದ ತುಷಾರ್ ಕಪೂರ್‌ನ ತುಷ್ಕಿ ಎಂದು ಎಕ್ತಾ ಪರಿಚಯ ಮಾಡಿಕೊಡುತ್ತಾರೆ.
'ನನಗೆ ಮಂದನಾ ಕರೀಮಿ ತುಂಟಿ ಎಂದು ಗೊತ್ತಿತ್ತು ಆದರೆ ಇಲ್ಲಿದೆ ಬಂದ ಮೇಲೆ ನಾನು ಗುಣದಲ್ಲಿ ಆಕೆಯನ್ನು ಹೋಲುತ್ತೀನಿ ಅನಿಸುತ್ತಿದೆ' ಎಂದು ತುಷಾರ್ ಹೇಳಿದ್ದಾರೆ.
'ಕಾರ್ಯಕ್ರಮಕ್ಕೆ ಆಗಮಿಸಿದಕ್ಕೆ ಧನ್ಯವಾದಗಳು. ನಿಮ್ಮ ಜೊತೆ ವಾರ ವಾರವೂ ಮಾತನಾಡುವುದಕ್ಕೆ ಕಾಯುವೆ. ಏಕ್ತಾ ಕಪೂರ್ ಯಾವ ರೀತಿ ನನಗೆ ಈಗ ಗೈಡ್ ಮಾಡುತ್ತಾರೆ ನೋಡಬೇಕು' ಎಂದಿದ್ದಾರೆ ಕಂಗನಾ.
'ನೀವು ಅಂದ್ರೆ ನನಗೆ ತುಂಬಾನೇ ಇಷ್ಟ. ನಿಮ್ಮ ಫಿಲ್ಮಂ ನೋಡಿದ ತಕ್ಷಣವೇ ನಾನು ಟ್ವೀಟ್ ಮಾಡುತ್ತೀನಿ ನಿಮ್ಮ ಅಭಿಮಾನಿ ನಾನು'ಎಂದು ತುಷಾರ್ ಕಂಗನಾಗೆ ಹೇಳಿದ್ದಾರೆ.
'ಒಂದು ವಿಚಾರ ನಾನು ಹೇಳಬೇಕು. ಚಿತ್ರರಂಗದಲ್ಲಿ ನನಗೆ ಬಿಗ್ ಸಪೋರ್ಟ್ ಆಗಿ ಯಾರೂ ಇರಲಿಲ್ಲ ಆಗ ನನ್ನ ಪರವಾಗಿ ನಿಂತಿದ್ದು ತುಷಾರ್. ಪ್ರತಿಯೊಂದು ಹಂತದಲ್ಲಿ ನನಗೆ ಸಪೋರ್ಟ್ ಮಾಡಿದ್ದಾರೆ' ಎಂದು ತುಷಾರ್ ಬಗ್ಗೆ ಕಂಗನಾ ಹೇಳಿದ್ದಾರೆ.
'ಇಂಡಸ್ಟ್ರಿ ಜನರ ಜೊತೆ ನಾನು ಏನೇ ಜಗಳ ಮಾಡಿಕೊಂಡರೂ ನನ್ನ ಸಪೋರ್ಟ್‌ಗೆ ಇರುವ ಏಕೈಕಾ ವ್ಯಕ್ತಿ ಅಂದ್ರೆ ತುಷಾರ್' ಎಂದು ಕಂಗನಾ ಹೇಳಿದಾಗ 'how sweet' ಎಂದು ತುಷ್ಕಿ ನಮಸ್ಕಾರ ಮಾಡಿದ್ದಾರೆ.