ತಮಾರ್ ಪದಾರ್ ರಿಯಾಲಿಟಿ ಶೋ ನಿರೂಪಣೆ ಮಾಡುವ ಮೂಲಕ ಮಲಯಾಳಂ ಜನರು ಮನಸ್ಸಿಗೆ ಹತ್ತಿರವಾದ ನಿರೂಪಕಿ ಲಕ್ಷ್ಮಿ ನಕ್ಷತ್ರ ಈಗ ಹ್ಯಾಪಿ ಮೂಡ್‌ನಲ್ಲಿದ್ದಾರೆ.
'ಸ್ಟಾರ್ ಮ್ಯಾಜ್' ಶೋನಲ್ಲಿ ಬ್ಯುಸಿಯಾಗಿರುವ ಲಕ್ಷ್ಮಿ ನಕ್ಷತ್ರ ಸ್ಟೈಲಿಷ್ ಫೋಟೋ ಶೂಟ್ ಮತ್ತು vlog ಮಾಡುವ ಮೂಲಕ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಏಪ್ರಿಲ್ 11ರಂದು ಲಕ್ಷ್ಮಿ ನಕ್ಷತ್ರ ತಮ್ಮ ಕನಸಿನ ಕಾರು ಖರೀದಿಸಿದ್ದಾರೆ. ಕಾರಿಗೆ ಪೂಜೆ ಮಾಡಿದ ಕ್ಷಣದಿಂದ ಹಿಡಿದು ಕಂಪನಿ ಮಾಲೀಕರಿಂದ ಕಾರು ಕೀ ಪಡೆಯುತ್ತಿರುವವರೆಗೂ ಫೋಟೋ ಹಂಚಿಕೊಂಡಿದ್ದಾರೆ.
'ಕೆಲವೊಂದು ವಿಚಾರಗಳು ಸಮಯ ತೆಗೆದುಕೊಳ್ಳುತ್ತದೆ. ಆಗ ಜೀವನ ಅರ್ಥಪೂರ್ಣವಾಗುತ್ತದೆ. ಕಣ್ಣು ಮುಂದೆನೇ ನಮ್ಮ ಕನಸು ನನಸಾಗುತ್ತಿರುವಾಗ ಖುಷಿ ಹೆಚ್ಚಾಗುತ್ತದೆ'
'ನಿಮ್ಮ ಧೈರ್ಯ ಮತ್ತು ಗಟ್ಟಿ ಮನಸ್ಸು ಇದ್ದರೆ ನಿಮ್ಮ ಕನಸು ಸಾಧಿಸುವುದಕ್ಕೆ ಯಾರಿಂದಲ್ಲೂ ತೊಂದರೆ ಆಗುವುದಿಲ್ಲ. ನನ್ನಂತೆ ಕನಸು ಕಂಡ ಜನರಿಗೆ ಇದು ಸ್ಫೂರ್ತಿ ಆಗಲಿ ಎಂದು ಹಂಚಿಕೊಳ್ಳುತ್ತಿರುವು'
'ನನ್ನ ಫೆವರೆಂಟ್ ಸಿನಿಮಾದಲ್ಲಿ ನಾನು ಒಂದು ಕಪ್ಪು ಬಣ್ಣ ಕಾರು ನೋಡಿದೆ. ನಾನು ದೊಡ್ಡವಳಾದಾಗ ಈ ರೀತಿ ಕಾರು ಖರೀದಿಸಬೇಕು ಎಂದು ನಿರ್ಧರಿಸಿದೆ. ಈಗ ಆ ಕನಸು ನನಸಾಗಿದೆ'
'ಸಮಯ ಓಡುತ್ತಿತ್ತು, ಜಾಗ ಬದಲಾಯಿಸುತ್ತಿದ್ದೆ ಕೆಲಸ ಬದಲಾಯಿಸುತ್ತಿದ್ದೆ ಆದರೆ ನನ್ನ ಕನಸು ಮಾತ್ರ ಬದಲಾಗಿರಲಿಲ್ಲ. ನಮ್ಮ ಶ್ರಮಕ್ಕೆ ಕನಸು ನನಸು ಮಾಡುವ ಶಕ್ತಿ ಇದೆ ಎಂದು ತಿಳಿಯಿತ್ತು' ಎಂದು ಲಕ್ಷ್ಮಿ ಬರೆದುಕೊಂಡಿದ್ದಾರೆ.
ಕಪ್ಪು ಬಣ್ಣದ BMW 3ನೇ ಸೀರಿಸ್‌ನ ಎಮ್‌ಸ್ಪೂರ್ಟ್ಸ್ 330 ಕರೀದಿಸಿದ್ದಾರೆ.ಈ ಕಾರಿನ ಬೆಲೆ 72 ಲಕ್ಷ ರೂಪಾಯಿ ಎನ್ನಲಾಗಿದೆ.