ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ನಾಯಕ್ ಗೌತಮ್ ದಿವಾನ್ ಸಣ್ಣ ತಮ್ಮ ಪಾರ್ಥನ ಪಾತ್ರ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ತಮ್ಮ ಮುದ್ದಾದ ಮಾತು, ಮನೆಯವರ ಮೇಲಿನ ಆತನ ಪ್ರೀತಿ ಪ್ರೇಕ್ಷಕರಿಗೆ ಇಷ್ಟ.
ಸದ್ಯ ನಾಯಕನ ಪಾತ್ರದಷ್ಟೇ ಪ್ರಾಮುಖ್ಯತೆ ಪಡೆದಿರುವ ಪಾರ್ಥನ ಪಾತ್ರಕ್ಕೆ ಜೀವ ತುಂಬುತ್ತಿರುವ ನಟ ಕರಣ್ (Karan). ಪಾರ್ಥ ಎಂಬ ಹೆಸರಿಗಿಂತ ಹೆಚ್ಚಾಗಿ ಭಾವನ ತಮ್ಮ ಎಂದೇ ಕರೆಸಿಕೊಳ್ಳುವ ಕರಣ್ ರಿಯಲ್ ಲೈಫ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಪಾರ್ಥ ಪಾತ್ರವನ್ನ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ನಟ ಕರಣ್ ನಿರ್ವಹಿಸ್ತಾ ಇದ್ದಾರೆ. ಕಿರುತೆರೆಗೆ ಕರಣ್ ಹೊಸಬರೇನೂ ಅಲ್ಲ. ಈ ಮುಂಚೆ ಹಲವು ಸೀರಿಯಲ್ ಗಳಲ್ಲಿ (serial) ನಾಯಕನಾಗಿ, ಪೋಷಕಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ ಇವರು.
ಹಲವು ವರ್ಷಗಳ ಹಿಂದೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಚಿತಾ ರಾಮ್ ನಟಿಸಿದ್ದ ಜನಪ್ರಿಯ ಧಾರಾವಾಹಿ ಅರಸಿ ಯಲ್ಲಿ ನಾಯಕ ಸಿದ್ಧಾಂತ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು. ಸಿಂಧೂರ (Sindhoora) ಧಾರಾವಾಹಿಯಲ್ಲಿ ಕೂಡ ಇವರು ನಟಿಸಿದ್ದರು.
ಹಲವಾರು ವರ್ಷಗಳ ನಂತರ ಇದೀಗ ಅಮೃತಧಾರೆಯಲ್ಲಿ ಅಣ್ಣನ ಮುದ್ದಿನ ತಮ್ಮ, ಅಜ್ಜಿಯ ಪ್ರೀತಿಯ ಮೊಮ್ಮಗ, ಅತ್ತಿಗೆ ಮುದ್ದಿನ ಮೈದುನ ಆಗಿ, ಮನೆಮಂದಿಯನ್ನೆಲ್ಲಾ ತನ್ನ ಮಾತು, ನಗುವಿನ ಮೂಲಕ ರಂಜಿಸುವ ಪಾರ್ಥನ ಪಾತ್ರದಲ್ಲಿ ಸಕಲೇಶಪುರುದ ಹುಡುಗ ಕರಣ್ ನಟಿಸುತ್ತಿದ್ದಾರೆ.
ಇನ್ನು ಸೀರಿಯಲ್ ನಲ್ಲಿ ಪಾರ್ಥ ಮತ್ತು ಅಪೇಕ್ಷಾ ಪಾತ್ರ ಜನರಿಗೆ ತುಂಬಾ ಹಿಡಿಸಿದೆ. ಅತ್ತಿಗೆ ತಂಗಿ ಮತ್ತು ಭಾವನ ತಮ್ಮನ ಜೋಡಿಯ ತುಂಟಾಟ, ಪ್ರೀತಿ, ಮನೆಯವರಿಗಾಗಿ ತ್ಯಾಗ, ಮತ್ತೆ ಒಲಿಸಿಕೊಳ್ಳುವ ರೀತಿ ಒಟ್ಟಲ್ಲಿ ಇಬ್ಬರ ಜೋಡಿಯನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಕರಣ್ ಗೆ ಬೈಕ್ ಕ್ರೇಜ್ ಇದೆ ಅನ್ನೋದು ಇವರ ಸೋಶಿಯಲ್ ಮೀಡಿಯಾ ಪ್ರೊಫೈಲ್ ನೋಡಿದ್ರೆ ಗೊತ್ತಾಗುತ್ತೆ. ಜೊತೆಗೆ ನಾಯಿಗಳೆಂದರೆ ಇವರಿಗೆ ತುಂಬಾ ಇಷ್ಟ ಅನ್ನೋದು ಗೊತ್ತಾಗುತ್ತೆ. ಇವರ ಬಳಿ ಮುದ್ದಾದ ನಾಯಿ ಮರಿಯೂ ಇದೆ. ಒಟ್ಟಲ್ಲಿ ತೆರೆ ಮೇಲೆ ಮತ್ತು ತೆರೆ ಹಿಂದೆಯೂ ಒಂಥಾರ ಲೈವ್ಲಿ ಕ್ಯಾರೆಕ್ಟರ್ ಕರಣ್ ಅವರದ್ದು.