'ಲಕ್ಷ್ಮಿ ಬಾರಮ್ಮ' ವಿಧಿ ಅದ್ಧೂರಿ ಆರತಕ್ಷತೆ; ಸಖತ್ ದುಬಾರಿ ಲೆಹೆಂಗಾದಲ್ಲಿ ಮಿಂಚಿದ ಲಾವಣ್ಯ!

First Published | Nov 14, 2024, 1:12 PM IST

ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡ ಲಕ್ಷ್ಮಿ ಬಾರಮ್ಮ ಡಾ ಲಾವಣ್ಯ ಹಿರೇಮಠ್. ತಾರೆಯರ ದಂಡೇ ಬಂದಿತ್ತು....

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ವೈಷ್ಣವ್‌ ತಂಗಿ ನಿಧಿ ಪಾತ್ರದಲ್ಲಿ ಡಾ. ಲಾವಣ್ಯ ಹಿರೇಮಠ್ ಅಭಿನಯಿಸುತ್ತಿದ್ದಾರೆ.

ಆನ್‌ಸ್ಕ್ರೀನ್‌ ನಿಧಿ ಪಾತ್ರದಲ್ಲಿ ಮಿಂಚುತ್ತಿರುವ ಲಾವಣ್ಯ ರಿಯಲ್‌ ಲೈಫ್‌ನಲ್ಲಿ ಡೆಂಟಿಸ್ಟ್‌. ನಟನೆಯಲ್ಲಿ ಪ್ಯಾಷನ್ ಇರುವ ಕಾರಣ ಬಿಡುವು ಮಾಡಿಕೊಂಡು ಅಭಿನಯಿಸುತ್ತಾರೆ. 

Tap to resize

ಡಾ ಲಾವಣ್ಯ ಹಿರೇಮಠ್ ಮತ್ತು ಡಾ. ಆಕಾಶ್‌ ನವೆಂಬರ್ 13 ಮತ್ತು 14ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಯಲ್ಲಿ ಬಣ್ಣದ ಪ್ರಪಂಚದ ಸ್ನೇಹಿತರು ಭಾಗಿಯಾಗಿದ್ದಾರೆ.

ಕೆಂಪು ಬಣ್ಣದ ಡಿಸೈನರ್ ಲೆಹೆಂಗಾದಲ್ಲಿ ಲಾವಣ್ಯ ಮಿಂಚಿದ್ದಾರೆ, ನೀಲಿ ಬಣ್ಣದ ಸೂಟ್‌ ಆಂಡ್‌ ಬೂಟ್‌ ಧರಿಸಿ ಆಕಾಶ್ ಕಾಣಿಸಿಕೊಂಡಿದ್ದಾರೆ.

ಲಕ್ಷ್ಮಿ ಬಾರಮ್ಮ ಮತ್ತು ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ಇರುವ ಪ್ರತಿಯೊಬ್ಬ ಕಲಾವಿದರು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ. 

ಮದುವೆ ವಿಚಾರವನ್ನು ರೊಮ್ಯಾಂಟಿಕ್ ಫೋಟೋಶೂಟ್‌ ಮೂಲಕ ರಿವೀಲ್ ಮಾಡಿದ್ದರು. ಇದಾದ ಮೇಲೆ ಸ್ನೇಹಿತರು ಹಮ್ಮಿಕೊಂಡಿದ್ದ ಬ್ಯಾಚುಲರ್ ಪಾರ್ಟಿ ಫೋಟೋಗಳನ್ನು ಹಂಚಿಕೊಂಡಿದ್ದರು. 

Latest Videos

click me!