ಮಗಳ ಮೊದಲ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ

First Published | Aug 6, 2024, 1:03 PM IST

ರಾಧಾ ರಮಣ, ಜೊತೆಜೊತೆಯಲಿ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಆಶಿತಾ ಚಂದ್ರಪ್ಪ ತಮ್ಮ ಮುದ್ದು ಮಗಳ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 
 

ಮುದ್ದಾದ ಮಗಳ ತಾಯಿಯಾಗಿರುವ ನಟಿ ಆಶಿತಾ ಚಂದ್ರಪ್ಪ (Ashitha Chandrappa) ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮಗಳಿಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ನಟಿ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. 
 

ಹೌದು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಆಶಿತಾ ಚಂದ್ರಪ್ಪ, ಸದ್ಯಕ್ಕಂತೂ ನಟನೆಯಿಂದ ದೂರವಿದ್ದು, ತಮ್ಮ ಸಂಸಾರ, ಮಗು ಎಂದು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಆಶಿತಾ ಮಗಳಿಗೆ ಒಂದು ವರ್ಷ ತುಂಬಿದ್ದು, ಸೆಲೆಬ್ರೇಷನ್ ನ (birthday celebration) ಒಂದಷ್ಟು ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

Tap to resize

ಮುದ್ದಿನ ಮಗಳು ಆರಿಕಾ (Arika) ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಟಿ ಆಶಿತಾ ಚಂದ್ರಪ್ಪ ತಮ್ಮ ಮನೆಯಲ್ಲಿ ಗ್ರ್ಯಾಂಡ್ ಆಗಿ ಸಿಂಗಾರ ಮಾಡಿ, ತಮ್ಮ ಕುಟುಂಬ ಮತ್ತು ಆತ್ಮೀಯರೊಂದಿಗೆ ಮಗಳ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಆಶಿತಾ, ತಮ್ಮ ಮಗುವಿನ ಮುದ್ದಾದ ಆಟ, ಪಾಟದ ವಿಡೀಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇಲ್ಲಿವರೆಗೂ ಮಗುವಿನ ಮುಖವನ್ನ ನಟಿ ರಿವೀಲ್ ಮಾಡಿಲ್ಲ. ನಟನೆಯಿಂದ ದೂರವಿದ್ದು ನಟಿ ಸದ್ಯಕ್ಕಂತೂ ಮಗುವಿನ ಜೊತೆ ಜೀವನ ಎಂಜಾಯ್ ಮಾಡ್ತಿದ್ದಾರೆ. 
 

ಅಶಿತಾ ಚಂದ್ರಪ್ಪ ಅವರು ಜೀ ಕನ್ನಡ ವಾಹಿನಿಯಲ್ಲಿ 2014ರಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' (Jothe Jotheyali) ಧಾರಾವಾಹಿಯಲ್ಲಿ ಶಾಲಿನಿಯಾಗಿ ನಟಿಸಿದ್ದರು. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಇದಾದ ನಂತ್ರ ನಟಿ ‘ರಾಧಾ ರಮಣ’ ಧಾರಾವಾಹಿಯಲ್ಲೂ ನಟಿಸಿದ್ದರು. ಅಷ್ಟೇ ಅಲ್ಲದೆ ‘ಬಿಗ್ ಬಾಸ್ ಕನ್ನಡ ಸೀಸನ್ 5’ ರಲ್ಲೂ ಆಶಿತಾ ಕಾಣಿಸಿಕೊಂಡಿದ್ದರು.
 

ಒಂದೆರಡು ಸೀರಿಯಲ್ ಗಳಲ್ಲಿ ನಟಿಸಿದ ಬಳಿಕ ನಟಿ ಆಶಿತಾ ಕನ್ನಡ ಚಿತ್ರರಂಗ, ಧಾರಾವಾಹಿಗಳಲ್ಲಿರುವ ಅನೇಕ ಸಮಸ್ಯೆಗಳ ಕಾರಣ ನೀಡಿ, ಧಾರಾವಾಹಿಯಿಂದ ದೂರ ಇದ್ದರು. ಮತ್ತೆ ನಟಿಸೋದಿಲ್ಲ ಎಂದು ಅವರು ಹೇಳಿದ್ದರು. ಮದುವೆ ಮುನ್ನವೇ ನಟನೆಯಿಂದ ದೂರ ಉಳಿದ ಆಶಿತಾ ಸದ್ಯ ತಮ್ಮ ಸಂಸಾರ ಮತ್ತು ತಾಯ್ತನ ಎಂಜಾಯ್ ಮಾಡ್ತಿದ್ದಾರೆ. 
 

Latest Videos

click me!