ಲಕ್ಷಣ ಸೀರಿಯಲ್ ಭೂಪತಿ ಪತ್ನಿ ಸೀರಿಯಲ್‌ನಲ್ಲೂ ನಟಿಸಿದ್ದರು!

First Published | Aug 16, 2023, 3:27 PM IST

ಕಿರುತೆರೆ ನಟ ಮತ್ತು ಬಿಗ್‍ಬಾಸ್ ಸ್ಪರ್ಧಿ ಜಗನ್ನಾಥ್ ಚಂದ್ರಶೇಖರ್ ಸದ್ಯ ಲಕ್ಷಣ ಸೀರಿಯಲ್‌ನಲ್ಲಿ ನಟಿಸುತ್ತಾ, ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಕಿರುತೆರೆಯ ಈ ಫೆವರಿಟ್ ನಟನ ನಿಜ ಜೀವನದ ಸಂಗಾತಿ ಯಾರು ಗೊತ್ತಾ? 
 

ಜಗನ್ ಎಂದೇ ಖ್ಯಾತಿ ಪಡೆದಿರುವ ಕಿರುತೆರೆ ನಟ ಜಗನ್ನಾಥ್ ಪ್ರೇಕ್ಷಕರ ಅದರಲ್ಲೂ ಹೆಣ್ಣು ಮಕ್ಕಳ ಫೆವರಿಟ್ ನಟ. ಆದರೆ ಜಗನ್ ಗೆ ಈಗಾಗಲೇ ಮದುವೆಯಾಗಿದೆ.
 

ಸಿನಿಮಾ ಮೂಲಕ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟ ಜಗನ್ (Jagan Chandrashekhar) ಮಿಂಚಿದ್ದು ಮಾತ್ರ ಸೀರಿಯಲ್ ಮತ್ತು ಬಿಗ್ ಬಾಸ್ ಮೂಲಕ. ಜೋಶ್ ಚಿತ್ರದಲ್ಲಿ ಜಗನ್ ಮೊದಲ ಬಾರಿಗೆ ನಟನಾಗಿ ಅಭಿನಯಿಸಿದ್ದರು. ನಂತರ ಕಿರುತೆರೆಯಲ್ಲಿ ಮಿಂಚಿದರು. 
 

Tap to resize

ಕಿರುತೆರೆಯಲ್ಲಿ ಗಾಂಧಾರಿ, ಪುನರ್ವಿವಾಹ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಆದರೆ ಇವರಿಗೆ ಹೆಸರು ಕೊಟ್ಟಿದ್ದು ಮಾತ್ರ ಸೀತಾ ವಲ್ಲಭ ಸೀರಿಯಲ್. ಈ ಧಾರಾವಾಹಿಯಲ್ಲಿ ಜಗನ್ ನಟನೆಗೆ ಅಭಿಮಾನಿ ಬಳಗವೇ ಹುಟ್ಟಿಕೊಂಡಿತು. ಈ ಜೋಡಿಯೂ ಸಿಕ್ಕಾಪಟ್ಟೆ ಹೆಸರು ಮಾಡಿತ್ತು. 
 

ಸದ್ಯ ಜಗನ್ ಲಕ್ಷಣ ಸೀರಿಯಲ್‌ನಲ್ಲಿ ಭೂಪತಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಈ ಸೀರಿಯಲ್ ನಿರ್ಮಾಣದ ಹೊಣೆಯನ್ನೂ ಇವರು ಹೊತ್ತಿದ್ದಾರೆ. ಈ ಹಿಂದೆ ರಕ್ಷಾ ಬಂಧನ ಸೀರಿಯಲ್ ಅನ್ನು ನಿರ್ಮಿಸಿದ್ದರು.
 

ಸೀರಿಯಲ್‌ಗಳಲ್ಲಿ (serial) ಲವರ್ ಬಾಯ್ ಪಾತ್ರದಲ್ಲಿ ನಟಿಸುತ್ತಿರುವ ಜಗನ್‌ಗೆ ಈಗಾಗಲೇ ಮದುವೆಯಾಗಿದ್ದು, ತಾವು ಪ್ರೀತಿಸುತ್ತಿದ್ದ ಹುಡುಗಿಯನ್ನೇ ಜಗನ್ ನಾಲ್ಕು ವರ್ಷಗಳ ಹಿಂದೆ ವರಿಸಿದ್ದಾರೆ.
 

ಜಗನ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ರಕ್ಷಿತಾ ಮುನಿಯಪ್ಪ (Rakshitha Muniyappa) ಅವರ ಜೊತೆ ದಾಂಪತ್ಯ ಜೀವನಕ್ಕೆ 2019ರಲ್ಲಿ ಕಾಲಿಟ್ಟರು. ತಮ್ಮ ಸಂಗಾತಿ ಜೊತೆಗಿನ ಫೋಟೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

ದುಬೈನ ಕಾಲೇಜೊಂದರಲ್ಲಿ ರಕ್ಷಿತಾ ಮುನಿಯಪ್ಪ ವ್ಯಾಸಂಗ ಮುಗಿಸಿದ್ದು, ಫ್ಯಾಷನ್ ಡಿಸೈನರ್ (fashion designer) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಾಂಧಾರಿ ಸೀರಿಯಲ್‌ನಲ್ಲಿ ರಕ್ಷಿತಾ ಅವರು ಜಗನ್ ಪತ್ನಿಯ ತಂಗಿ ಪಾತ್ರದಲ್ಲೂ ನಟಿಸಿದ್ದರು.
 

ರಕ್ಷಿತಾ ಮತ್ತು ಜಗನ್ ಜೋಡಿ ಫೋಟೋಗಳು ಇದೀಗ ಮತ್ತೆ ಸೋಶಿಯಲ್ ಮೀಡಿಯಲ್ಲಿ ಕಾಣಿಸಿಕೊಂಡಿದೆ. ಈ ಮುದ್ದು ಜೋಡಿಯ ಫೋಟೋಗಳು ಹೇಗಿವೆ? ಕಮೆಂಟ್ ಮಾಡಿ. 
 

Latest Videos

click me!