ಯಾವ ದೇಶದ ಯುವರಾಣಿ ಇವಳು…. ಕ್ಯಾಪ್ಶನ್ ನೋಡಬೇಡಿ ನನ್ನನ್ನೇ ನೋಡಿ ಅಂತಿದ್ದಾರಲ್ಲ !

Published : Nov 30, 2024, 02:53 PM ISTUpdated : Nov 30, 2024, 03:10 PM IST

ಅಗ್ನಿ ಸಾಕ್ಷಿ ಖ್ಯಾತಿಯ ನಟಿ ಇಶಿತಾ ವರ್ಷ, ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದು, ನಟಿಯ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಮನ ಸೋತಿದ್ದಾರೆ.   

PREV
18
ಯಾವ ದೇಶದ ಯುವರಾಣಿ ಇವಳು…. ಕ್ಯಾಪ್ಶನ್ ನೋಡಬೇಡಿ ನನ್ನನ್ನೇ ನೋಡಿ ಅಂತಿದ್ದಾರಲ್ಲ !

ಅಗ್ನಿ ಸಾಕ್ಷಿ (Agni Sakshi) ಧಾರಾವಾಹಿಯಲ್ಲಿ ಮಾಯಾ ಪಾತ್ರದ ಮೂಲಕ ರಂಜಿಸಿದ ಇಶಿತಾ ವರ್ಷ ಸದ್ಯ ಕಿರುತೆರೆಯಿಂದ ದೂರ ಉಳಿದು, ವೈಲ್ಡ್ ಲೈಫ್ ಫೋಟೊಗ್ರಫಿ ಒಲವು ಬೆಳೆಸಿಕೊಂಡಿದ್ದಾರೆ. 

28

ಇಶಿತಾ (Ishitha Varsha) ಸೋಶಿಯಲ್ ಮೀಡಿಯಾ ನೋಡಿದ್ರೆ ಬೇರೆ ಬೇರೆ ದೇಶಗಳ, ರಾಜ್ಯಗಳಲ್ಲಿ ಸಫಾರಿ ಮಾಡಿರುವ ಹಾಗೂ ವೈಲ್ಡ್ ಲೈಫ್ ಫೋಟೊಗ್ರಫಿ ಮಾಡಿರುವ ಫೋಟೊಗಳೇ ಹೆಚ್ಚಾಗಿ ಕಾಣಿಸುತ್ತಿವೆ . 
 

38

ಇಶಿತಾ ವರ್ಷ ಒಂದೆರಡು ಶೋಗಳಲ್ಲಿ ಕಾಣಿಸಿಕೊಂಡಿದ್ದರು, ರಾಜಾರಾಣಿ, ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು, ಹಾಗೂ ಒಂದೆರಡು ಸೀರಿಯಲ್ ಗಳಲ್ಲಿ ಹೀಗೆ ಬಂದು ಹಾಗೇ ಹೋಗಿದ್ದು ಬಿಟ್ಟರೆ ಬೇರೆ ಸೀರಿಯಲ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 
 

48

ಸದ್ಯಕ್ಕಂತೂ ಇಶಿತಾ ಸೋಶಿಯಲ್ ಮೀಡೀಯಾದ (social media) ನೋಡಿದ್ರೆ ಸಖತ್ ಗ್ಲಾಮರಸ್ ಆಗಿ ಫೋಟೊ ಶೂಟ್ ಮಾಡಿಸಿದ್ದಾರೆ. ಒದ್ದಕ್ಕಿಂದ ಒಂದು ಫೋಟೊಗಳು ಬೋಲ್ಡ್ ಆಗಿವೆ. ಫೋಟೊ ನೋಡಿದ್ರೆ, ಇವರೇನಾ ಇಶಿತಾ, 
 

58

ಇದೀಗ ಇಶಿತಾ ಹೊಸದಾಗಿ ಒಮ್ದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಕ್ರೀಂ ಬಣ್ಣದ ಲಾಂಗ್ ಸ್ಕರ್ಟ್, ಸ್ಲೀವ್ ಲೆಸ್ ಟ್ಯೂಬ್ ಟಾಪ್, ತಲೆ ಮೇಲೊಂದು ಹ್ಯಾಟ್, ಕಣ್ಣಿಗೆ ಗಾಗಲ್ಸ್ ಧರಿಸಿ, ತುಂಬಾನೆ ವಿಭಿನ್ನವಾಗಿ ಹಾಗೂ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. 
 

68

ಈ ಫೋಟೊಗಳ ಜೊತೆಗೆ ಇಶಿತಾ Look @ me , not the caption! ಎಂದು ಕ್ಯಾಪ್ಶನ್ ಕೂಡ ಬರೆದಿದ್ದು, ನಟಿಯ ಸ್ಟೈಲಿಶ್ ಲುಕ್ ನ್ನು ಜನ ಕೊಂಡಾಡಿದ್ದಾರೆ. ಗೊಂಬೆ ಥರ ಕಾಣಿಸ್ತಿದ್ದೀರಿ, ಬ್ಯೂಟಿಫುಲ್, ಸುಂದರಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ ಜನ. 
 

78

ಕಳೆದ ಒಂದೆರಡು ವರ್ಷಗಳಲ್ಲಿ ಇಶಿತಾ ಸೌತ್ ಕೊರಿಯಾ, ಖಾನ, ತಡೋಬಾ, ಸ್ಪಿಟಿ ವ್ಯಾಲಿ, ಬೆರ್ರಾ, ಕಬಿನಿ, ಕೆನ್ಯಾ ಮೊದಲಾದ ಪ್ರಾಕೃತಿ ಸೌಂದರ್ಯಕ್ಕೆ ಹೆಸರಾಗಿರುವ ತಾಣಗಳನ್ನು ಟ್ರಾವೆಲ್ ಮಾಡಿ ಬಂದಿದ್ದು, ತಮ್ಮ ವೈಲ್ಡ್ ಲೈಫ್ ಫೋಟೊಗ್ರಾಫಿಯನ್ನು ಮತ್ತಷ್ಟು ಇಂಫ್ರೂವ್ ಮಾಡಿಕೊಂಡಿದ್ದಾರೆ. 
 

88

ಇದೀಗ ನಟಿ ನೈನಿತಾಲ್ ನಲ್ಲಿ ತಮ್ಮ ಫೋಟೋಗ್ರಾಫಿ (wildlife photography) ಸ್ಕಿಲ್ ತೋರಿಸೋಕೆ ಹೊರಟಿದ್ದು, ಅಲ್ಲಿನ ಸುಂದರವಾದ ತಾಣವಾದ ಭೀಮ್ ತಾಲ್ ನಲ್ಲಿ ಸದ್ಯ ಎಂಜಾಯ್ ಮಾಡ್ತಿದ್ದಾರೆ. ಇಶಿತಾರನ್ನ ನೋಡಿದ್ರೆ, ಇವರು ಸೀರಿಯಲ್ ನಿಂದ ಸಂಪೂರ್ಣವಾಗಿ ದೂರ ಹೋಗಿ, ಫೋಟೊಗ್ರಾಫಿಯಲ್ಲಿಯೇ ಕರಿಯರ್ ಕಂಡುಕೊಳ್ಳುವಂತಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories