ಬನಾರಸ್’ನಲ್ಲಿ ಸಂಗೀತಾ ಶೃಂಗೇರಿ… ನೀವೆ ಸಾಕ್ಷಾತ್ ದೇವತೆ ಥರ ಕಾಣಿಸ್ತಿದ್ದೀರಾ ಎಂದ ಫ್ಯಾನ್ಸ್

Published : Nov 30, 2024, 10:47 AM ISTUpdated : Nov 30, 2024, 12:11 PM IST

ಬಿಗ್ ಬಾಸ್ 10 ರ ಸ್ಪರ್ಧಿ ಸಂಗೀತಾ ಶೃಂಗೇರಿ ಇದೀಗ ಬನಾರಸ್ ಗೆ ತೆರಳಿದ್ದು, ಅಲ್ಲಿನ ಸುಂದರವಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.   

PREV
17
ಬನಾರಸ್’ನಲ್ಲಿ ಸಂಗೀತಾ ಶೃಂಗೇರಿ… ನೀವೆ ಸಾಕ್ಷಾತ್ ದೇವತೆ ಥರ ಕಾಣಿಸ್ತಿದ್ದೀರಾ ಎಂದ ಫ್ಯಾನ್ಸ್

ಕನ್ನಡ ಚಲನಚಿತ್ರ ನಟಿ ಹಾಗೂ ಬಿಗ್ ಬಾಸ್ ಸೀಸನ್ 10 ರ (Bigg Boss Season 10)  ಸ್ಪರ್ಧಿ ಸಂಗೀತಾ ಶೃಂಗೇರಿ. ಬಿಗ್ ಬಾಸ್ ಮೂಲಕ ಸಿಂಹಿಣಿ ಅಂತಾನೆ ಫೇಮಸ್ ಆಗಿದ್ದವರು. ಇವತ್ತಿಗೂ ಸಹ ಜನ ಇವರನ್ನ ಸಿಂಹಿಣಿ ಅಂತಾನೆ ಕರೆಯೋದು. ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ ಜನ. 
 

27

ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆಕ್ಟೀವ್ ಆಗಿರುವ ಸಂಗೀತಾ, ತಮ್ಮ ಪ್ರತಿಯೊಂದು ವಿಷ್ಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಅವರ ಟ್ರಾವೆಲ್ ಆಗಿರಬಹುದು,  ಫೋಟೋಸ್, ಸ್ಪಿರೀಚುವಲ್ ಜರ್ನಿ ಈ ಎಲ್ಲಾ ವಿಷಯಗಳ ಬಗ್ಗೆ ಶೇರ್ ಮಾಡುತ್ತಲೇ ಇರುತ್ತಾರೆ. 
 

37

ಇದೀಗ ನಟಿ ಸಂಗೀತ ಶೃಂಗೇರಿ ಇದೀಗ ಬನಾರಸ್ ಗೆ ತೆರಳಿದ್ದು, ಅಲ್ಲಿನ ವಿವಿಧ ದೇಗುಲಗಳಲ್ಲಿ, ಸುಂದರ ತಾಣಗಳಲ್ಲಿ ಹಾಗೂ ಗಂಗಾರತಿ ವೇಳೆ ತೆಗೆಸಿದಂತಹ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

47

ಸಂಗೀತಾ ಶೃಂಗೇರಿ (Sangeetha Sringeri)ಫೋಟೊಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಡಿವೈನ್, ನಿಮ್ಮನ್ನ ನೋಡಿದ್ರೇನೆ ದೇವತೆ ಥರ ಕಾಣಿಸ್ತೀರಿ, ನ್ಯಾಚುರಲ್ ಬ್ಯೂಟಿ, ಸಾಕ್ಷಾತ್ ದೇವತೆ ನೋಡಿದ ಹಾಗಾಯ್ತು ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. 
 

57

ಜೊತೆಗೆ ಆದಷ್ಟು ಬೇಗನೆ ಸಿನಿಮಾ ಮಾಡಿ, ನಿಮ್ಮನ್ನ ಥಿಯೇಟರ್ ನಲ್ಲಿ ನೋಡೋದಕ್ಕೆ ಕಾಯ್ತ ಇದ್ದೀವಿ ಅಂತಾನೂ ಹೇಳಿದ್ದಾರೆ. ಎಷ್ಟು ಮುದ್ದಾಗಿ ಕಾಣಿಸ್ತೀರಾ, ಸಂಸ್ಕಾರ ಅಂದ್ರೇನೆ ಸಂಗೀತ ಶೃಂಗೇರಿ ಅಂತ ಹೇಳಿದ್ರೆ, ಇನ್ನೂ ಕೆಲವರು ನಿಮ್ಮ ಬ್ಯೂಟಿ ಸೀಕ್ರೆಟ್ ಏನು? ಕರ್ನಾಟಕ ಕ್ರಶ್ ಅಂತ ಕೂಡ ಫೋಟೊಗಳಿಗೆ ಕಾಮೆಂಟ್ ಮಾಡಿದ್ದಾರೆ. 
 

67

ಕಳೆದ ಒಂದೆರಡು ದಿವಸಗಳಿಂದ ಸಂಗೀತಾ ಶೃಂಗೇರಿ ಬನಾರಸ್ ನ (Banaras)ಸೌಂದರ್ಯವನ್ನು ಆಸ್ವಾಧಿಸುತ್ತಾ, ದೇಗುಲಗಳ ದರ್ಶನ ಮಾಡುತ್ತಾ, ರಾಮನಗರ್ ಕೋಟೆಯನ್ನು ನೋಡುತ್ತಾ, ಗಂಗಾರತಿಯನ್ನು ಕೂಡ ನೋಡಿದ್ದಾರೆ. 
 

77

ಗಂಗಾರತಿ ಸಂದರ್ಭದಲ್ಲಿ ಕೈಯಲ್ಲಿ ತಾಳ ಹಿಡಿದು, ಭಜನೆ ಹಾಡುತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿ ಜನ ಆ ದೇವರು ನಿಮ್ಮನ್ನು ತುಂಬಾ ಚೆನ್ನಾಗಿ ಇಟ್ಟಿರಲಿ ಎಂದು ಹಾರೈಸಿದ್ದಾರೆ. 
 

click me!

Recommended Stories