ಮದುವೆ ಬ್ಯುಸಿಯಲ್ಲೂ RCB ಗೆಲುವು ಸಂಭ್ರಮಿಸಿ, ಕುಣಿದು ಕುಪ್ಪಳಿಸಿದ ಸೀತಮ್ಮ

Published : Jun 04, 2025, 12:02 PM IST

ಕಿರುತೆರೆ ನಟಿ ವೈಷ್ಣವಿ ಗೌಡ ಅವರ ಮದುವೆ ಪೂರ್ವ ಸಮಾರಂಭಗಳು ನಡೆಯುತ್ತಿದ್ದು, ಸಂಗೀತ್ ಕಾರ್ಯಕ್ರಮದಲ್ಲಿ ಆರ್‌ಸಿಬಿ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಮನೆಯಲ್ಲಿ ಮದುವೆ ಶಾಸ್ತ್ರಗಳು ನಡೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
16

ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆ ಸಂಭ್ರಮದಲ್ಲಿದ್ದಾರೆ. ವೈಷ್ಣವಿ ಗೌಡ ಮದುವೆ ಮುಂಚಿನ ಶಾಸ್ತ್ರಗಳು ನಡೆಯುತ್ತಿವೆ. ಮಂಗಳವಾರ ರಾತ್ರಿ ವೈಷ್ಣವಿ ಅವರ 'ಸಂಗೀತ್' ನಡೆಯುತ್ತಿತ್ತು. ಸಂಗೀತ್‌ ಕಾರ್ಯಕ್ರಮದಲ್ಲಿ ಐಪಿಎಲ್ ಪಂದ್ಯ ವೀಕ್ಷಣೆಗಾಗಿ ದೊಡ್ಡ ಪರದೆಯನ್ನು ಅಳವಡಿಸಲಾಗಿತ್ತು.

26

ಸಂಗೀತ್‌ಗೆ ಆಗಮಿಸಿದ ಅತಿಥಿಗಳು ಕಾರ್ಯಕ್ರಮದ ಜೊತೆಯಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಂಡದ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಆರ್‌ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ವೈಷ್ಣವಿ ಗೌಡ ಕುಣಿದು ಸಂಭ್ರಮಿಸಿದ್ದಾರೆ.

36

ಅತಿಥಿಗಳೊಂದಿಗೆ ಆರ್‌ಸಿಬಿ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ವಿಡಿಯೋವನ್ನು ವೈಷ್ಣವಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಸಂಗೀತ್ ಕಾರ್ಯಕ್ರಮ ಹೇಗೆ ನಡೆಯಿತು ನೋಡಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. VIDEO

46

ಸೋಮವಾರ ಮನೆಯಲ್ಲಿ ಮದುವೆ ಶಾಸ್ತ್ರ ಆರಂಭದ ಫೋಟೋಗಳನ್ನು ವೈಷ್ಣವಿ ಶೇರ್ ಮಾಡಿಕೊಂಡಿದ್ದಾರೆ. ವೈಷ್ಣವಿ ಅವರಿಗೆ ಅರಿಶಿನ ಹಚ್ಚುತ್ತಿರುವ ಮತ್ತು ಚಪ್ಪರ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದರು.

56

ಚೆಂದದ ಸೀರೆಯುಟ್ಟು, ಕೊರಳಿಗೆ ಮಾಲೆ ಹಾಕಿ ಕುಳಿತ ಮುದ್ದಾದ ವಧುರಾಣಿ ವೈಷ್ಣವಿ ಗೌಡಗೆ, ಕುಟುಂಬಸ್ಥರು ಅರಿಶಿನ ಹಚ್ಚುತ್ತಿದ್ದಾರೆ. ಮನೆಯವರ ಜೊತೆ ಫೋಟೋಗಳಿಗೆ ವೈಷ್ಣವಿ ಫೋಸ್ ನೀಡಿದ್ದರು

66

ಏರ್ ಫೋರ್ಸ್‌ನಲ್ಲಿ ಕೆಲಸ ಮಾಡ್ತಿರುವ ಅನುಕೂಲ್ ಮಿಶ್ರಾ ಅವರನ್ನು ವೈಷ್ಣವಿ ಕೈ ಹಿಡಿಯಲಿದ್ದಾರೆ. ಸದ್ದಿಲ್ಲದೆ ಅವರ ಎಂಗೇಜ್ಮೆಂಟ್ ಅದ್ಧೂರಿಯಾಗಿ ನಡೆದಿತ್ತು. ನಿಶ್ಚಿತಾರ್ಥದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವೈಷ್ಣವಿ ಗೌಡ ನಟಿಸುತ್ತಿದ್ದ ಸೀತಾರಾಮ ಧಾರಾವಾಹಿ ಕಳೆದ ವಾರವಷ್ಟೇ ಮುಕ್ತಾಯಗೊಂಡಿದೆ.

Read more Photos on
click me!

Recommended Stories